ವಿಶೇಷವಾಗಿ ದೇಹವನ್ನು ಆರೋಗ್ಯಕರವಾಗಿ ಮತ್ತು ಫಿಟ್ ಆಗಿ ಇರಿಸಿಕೊಳ್ಳಲು, ನೀವು ದೇಸಿ ತುಪ್ಪವನ್ನು ನಿಯಮಿತವಾಗಿ ಸೇವಿಸಬೇಕು ಎನ್ನುತ್ತಾರೆ.
ದೇಸಿ ತುಪ್ಪದ ಗುಣಲಕ್ಷಣಗಳು ದೇಹಕ್ಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಆಯುರ್ವೇದ ತಜ್ಞರು ಸೂಚಿಸುವ ಕೆಲವು ಆಹಾರ ಪದಾರ್ಥಗಳ ಜತೆ ದೇಸಿ ತುಪ್ಪವನ್ನು ಸೇರಿಸಿದರೆ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹೀಗಾಗಿ ಯಾವ ಆಹಾರ ಪದಾರ್ಥಗಳನ್ನು ಬೆರೆಸಿ ತಿನ್ನಬಹುದು ಎಂಬುದನ್ನು ನಾವೀಗ ತಿಳಿಯೋಣ.
ಅರಿಶಿನ, ದೇಸಿ ತುಪ್ಪ: ಪ್ರತಿದಿನ ಒಂದು ಚಮಚ ಅರಿಶಿನವನ್ನು ದೇಸಿ ತುಪ್ಪದೊಂದಿಗೆ ಬೆರೆಸಿ ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಉರಿಯೂತ ನಿವಾರಕ ಗುಣಗಳು ಅರಿಶಿನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಇದಲ್ಲದೆ, ತುಪ್ಪದಲ್ಲಿರುವ ಬ್ಯುಟರಿಕ್ ಆಮ್ಲವು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಎರಡನ್ನು ಒಟ್ಟಿಗೆ ಸೇವಿಸುವುದರಿಂದ ದೇಹದ ಊತ ಮತ್ತು ನೋವನ್ನು ಸುಲಭವಾಗಿ ನಿವಾರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಒಣ ಶುಂಠಿ ಮತ್ತು ದೇಸಿ ತುಪ್ಪ: ಒಣ ಶುಂಠಿಯ ಪುಡಿಯನ್ನು ದೇಸಿ ತುಪ್ಪದೊಂದಿಗೆ ಸೇವಿಸುವುದರಿಂದ ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಬಹುದು. ಇದರೊಂದಿಗೆ ಶೇಖರಣೆಯಾದ ಕಫವು ಸಹ ಸುಲಭವಾಗಿ ನಿವಾರಣೆಯಾಗುತ್ತದೆ ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯವಾಗಿದೆ. ವಿಶೇಷವಾಗಿ ಹೊಟ್ಟೆನೋವು, ಊತ ಮತ್ತು ತಲೆನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಪ್ರತಿದಿನ ಸೇವಿಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
ಉಳಿದಂತೆ ಜೀರ್ಣಕ್ರಿಯೆಯ ಆರೋಗ್ಯವನ್ನು ಹೆಚ್ಚಿಸುತ್ತದೆ, ಪ್ರತಿರಕ್ಷಣಾ ವ್ಯವಸ್ಥೆಯನ್ನು ವರ್ಧಿಸುತ್ತದೆ, ಆರೋಗ್ಯಕರ ತೂಕ ನಷ್ಟವನ್ನು ಬೆಂಬಲಿಸುತ್ತದೆ, ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ, ಮೆದುಳಿನ ಕಾರ್ಯವನ್ನು ಉತ್ತೇಜಿಸುತ್ತದೆ, ಚರ್ಮ ಮತ್ತು ಕೂದಲಿನ ಆರೈಕೆಯಲ್ಲಿ ಸಹಾಯ ಮಾಡುತ್ತದೆ