ಆನೇಕಲ್:- ಅಪರಾಧ ಮಾಸಾಚರಣೆ ಹಿನ್ನೆಲೆ ವಾಕಾಥಾನ್ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದು, ಮಾದಕ ವಸ್ತುಗಳು ನಮಗೆ ಬೇಡ ಜಾಗೃತಿ ಅಭಿಯಾನ ಜರುಗಿದೆ.
ಜಾಗೃತಿ ಅಭಿಯಾನದಲ್ಲಿ ನಟಿ ಸಪ್ತಮಿ ಗೌಡ ಹೆಜ್ಜೆ ಹಾಕಿದ್ದಾರೆ. ಈ ವೇಳೆ ಜುಂಬಾ ಡ್ಯಾನ್ಸ್ ಮೂಲಕ ವಿಧ್ಯಾರ್ಥಿಗಳು ಕುಣಿದು ಕುಪ್ಪಳಿಸಿದ್ದಾರೆ. ವಿವಿಧ ಪ್ರತಿಷ್ಠಿತ ಕಾಲೇಜಿನ ನೂರಾರು ಮಂದಿ ವಿಧ್ಯಾರ್ಥಿಗಳು ಭಾಗಿಯಾಗಿದರು.
ಕಲಾವಿದೆ ಐಶ್ವರ್ಯ ಸೇರಿದಂತೆ ಸಿನಿತಾರೆಯರ ಬಾಗಿಯಾಗಿದರು. ಬೆಂಗಳೂರು ಜಿಲ್ಲಾ ಪೊಲೀಸ್ ವತಿಯಿಂದ ಅಪರಾಧ ಮಾಸಾಚರಣೆ ಆಯೋಜನೆ ಮಾಡಲಾಗಿತ್ತು. ಆನೇಕಲ್ ಪಟ್ಟಣದ ಅಲಯನ್ಸ್ ಕಾಲೇಜಿನಲ್ಲಿ ಜಾಗೃತಿ ಅಭಿಯಾನ ಜರುಗಿದ್ದು, ಜಾಗೃತಿ ಅಭಿಯಾನಕ್ಕೆ ಕೇಂದ್ರ ವಲಯ ಐಜಿ ರವಿಕಾಂತೇಗೌಡ ಹಾಗೂ ನಟಿ ಸಪ್ತಮಿಗೌಡ ಚಾಲನೆ ನೀಡಿದ್ದಾರೆ.
5k ಹಾಗೂ 3K ವಾಕಾಥಾನ್ ನಲ್ಲಿ ವಿಧ್ಯಾರ್ಥಿಗಳು ಹಾಗೂ ಪೊಲೀಸರು ಹೆಜ್ಜೆ ಹಾಕಿದ್ದು, 5k ಹಾಗೂ 3K ವಾಕಾಥಾನ್ ನಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ.
ಮಾದಕ ವಸ್ತು ಜಾಗೃತಿ ಅಭಿಯಾನದಲ್ಲಿ ವಿಂಟೇಜ್ ಕಾರ್ ಗಳ ಶೋ ನಡೆದಿದ್ದು, ವಿಂಟೇಜ್ ಕಾರ್ ಗಳನ್ನ ನೋಡಿ ಕಾಲೇಜು ವಿಧ್ಯಾರ್ಥಿಗಳು ಖುಷಿಯಾಗಿದ್ದಾರೆ. ಕಾರ್ ಗಳ ಮುಂದೆ ವಿಧ್ಯಾರ್ಥಿಗಳು ಪೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ದೀಪ ಬೆಳಗಿ ಕಾರ್ಯಕ್ರಮಕ್ಕೆ ಐಜಿಪಿ ರವಿಕಾಂತೇಗೌಡ ಹಾಗೂ ನಟಿ ಸಪ್ತಮಿ ಗೌಡ, ಬೃಂದಾ ಆಚಾರ್ಯ ಚಾಲನೆ ನೀಡಿದ್ದಾರೆ. ಜಾಗೃತಿ ಅಭಿಯಾನದಲ್ಲಿ ಚಿತ್ರ ನಟರು, ಕ್ರೀಡಾಪಟುಗಳು ಭಾಗಿಯಾಗಿದರು.
ಇದೇ ವೇಳೆ ಕಾಂತಾರ ಸಿನಿಮಾ ಹಾಡಿಗೆ ನಟಿ ಸಪ್ತಮಿ ಗೌಡ ಹಾಗೂ ಬೃಂದಾ ಆಚಾರ್ಯ ಸ್ಟೇಪ್ಸ್ ಹಾಕಿದ್ದಾರೆ.