ಬೆಂಗಳೂರು:- ಬಾರ್ನಲ್ಲಿ ಕಡ್ಲೆ ಬೀಜದ ವಿಚಾರಕ್ಕೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಬೆಂಗಳೂರು ಉತ್ತರ ತಾಲೂಕಿನ ಬೈಲಪ್ಪನಪಾಳ್ಯ ಗ್ರಾಮದ ವಿನಾಯಕ ಬಾರ್ನಲ್ಲಿ ಘಟನೆ ನಡೆದಿದ್ದು, ಕ್ಯಾಷಿಯರ್ ಪುನೀತ್ ಮೇಲೆ ಬಿಯರ್ ಬಾಟಲ್ನಿಂದ ಹಲ್ಲೆ ಮಾಡಿದ್ದಾರೆ.
ಲಕ್ಕೇನಹಳ್ಳಿ ಅಂಜನಮೂರ್ತಿ ಸೇರಿ ಐವರು 10 ರೂ. ಕೊಟ್ಟು 3 ಪ್ಯಾಕೇಟ್ ಕಡ್ಲೆ ಬೀಜ ಕೇಳಿದ್ದರು. 10 ರೂ.ಗೆ ಎರಡು ಪ್ಯಾಕೇಟ್ ಬರುತ್ತೆ ಅಂದಿದ್ದಕ್ಕೆ ಹಲ್ಲೆ ಮಾಡಿದ್ದಾರೆ.
ಕ್ಯಾಷಿಯರ್ ಪುನೀತ್ ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.