ಬೆಂಗಳೂರು: ರಾಮ ಮಂದರ ವಿಚಾರ ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ವಾಕ್ಸಮರಕ್ಕೆ ವೇದಿಕೆಯಾಗಿದೆ, ಕಾಂಗ್ರೆಸ್- ಬಿಜೆಪಿ ನಾಯಕರ ಮಧ್ಯೆ ಧರ್ಮ ದಂಗಲ್ ನಡೆಯುತ್ತಿದ್ದು ಪ್ರತಿಷ್ಠೆಯ ಹೋರಾಟಕ್ಕೆ ಬಿದ್ದಿದ್ದಾರೆ. ಕೇಸರಿ ನಾಯಕರು ಮನೆ ಮನೆಗೆ ಹೋಗಿ ಮಂತ್ರಾಕ್ಷತೆ ಕೊಡ್ತಿದ್ದು ಕರಸೇವಕರ ಕೇಸ್ ಅನ್ನೇ ಭ್ರಹ್ಮಾಸ್ತ್ರವಾಗಿಸಿಕೊಂಡಂತಿದೆ .ಕಾಂಗ್ರೆಸ್ ನಾಯಕರು ನಾವೂ ರಾಮಭಕ್ತರೇ ಅನ್ನೋದನ್ನ ಒತ್ತಿ ಒತ್ತಿ ಹೇಳ್ತಿದ್ದು 22 ರಂದು ರಾಜ್ಯದಾದ್ಯಂತ ಪೂಜಾ ಕೈಂಕರ್ಯಕ್ಕೆ ಸರ್ಕಾರ ಆದೇಶ ಹೊರಡಿಸಿ ಸೆಡ್ಡು ಹೊಡೆದಿದೆ, ಈ ಮಧ್ಯೆ ಬಿಕೆ ಹರಿಪ್ರಸಾದ್ ಬಿಜೆಪಿ ವಿರುದ್ಧ ಕೇಸರಿ ಭಯೋತ್ಪಾದನೆಯ ಫತ್ವದ ಬಾಂಬ್ ಸಿಡಿಸಿ ಉರಿಯೋ ಬೆಂಕಿಗೆ ತುಪ್ಪ ಸುರಿದಿದ್ದಾರೆ…
ರಾಮ ಮಂದಿರ ಉದ್ಘಾಟನೆ ವಿಚಾರ ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ, ಕಾಂಗ್ರೆಸ್- ಬಿಜೆಪಿ ನಾಯಕರ ಮಧ್ಯೆ ಪ್ರತಿಷ್ಠೆಯ ಧರ್ಮ ದಂಗಲ್ ಗೆ ವೇದಿಕೆಯಾಗಿದ್ದಾನೆ ಪ್ರಭು ಶ್ರೀರಾಮಚಂದ್ರು. ಈ ಹಿಂದಿನಿಂದಲೂ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಮುಸ್ಲಿಂ ತುಷ್ಠೀಕರಣದ ಅಸ್ತ್ರ ಪ್ರಯೋಗಿಸಿ ಹಿಂದುತ್ವದ ಕಾರ್ಡ್ ಫ್ಲೇ ಮಾಡ್ತಿದ್ದಾರೆ. ಅದನ್ನೇ ಬಂಡವಾಳ ಮಾಡಿಕೊಂಡಿರು ಕೇಸರಿ ನಾಯಕರು ಇಂದು ಮನೆಮನೆಗೆ ತೆರಳಿ ಮಂತ್ರಾಕ್ಷತೆ ಕೊಟ್ಟು ಅಭಿಯಾನ ನಡೆಸಿದ್ರು ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಅಭಿಯಾನದಲ್ಲಿ ಪಾಲ್ಗೊಂಡ್ರು….
ಕಾಂಗ್ರೆಸ್ MLC ಬಿಕೆ ಹರಿಪ್ರಸಾದ್ ಟ್ವೀಟ್ ಮೂಲಕ ಕೇಸರಿ ಪಡೆಯ ವಿರುದ್ಧ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ ರೌಡಿ ಶೀಟರ್ ಆಗಿರುವ ಪುನೀತ್ ಕೆರೆಹಳ್ಳಿ ಎಂಬ ಮತಾಂಧನಿಗೆ ಬಿಜೆಪಿಯಿಂದ ಕೋಮು ಗಲಬೆ ನಡೆಸುವ ಫತ್ವಾ ಬಂದಿದೆ ಎಂದು ಸ್ವತಃ ತಾನೇ ಸೃಷ್ಟಿಸಿರುವ “ರಾಷ್ಟ್ರ ರಕ್ಷಣಾ ಪಡೆ” ಎಂಬ ವಾಟ್ಸಪ್ ಗ್ರೂಪಿನಲ್ಲಿ ಹೇಳಿಕೊಂಡಿದ್ದಾನೆ. ಕೋಮು ಗಲಭೆ ನಡೆಸಿ 2024ಕ್ಕೆ “ವಿಶ್ವಗುರುವನ್ನ” ಮತ್ತೆ ಪ್ರಧಾನಿಯಾಗಬೇಕೆಂದು ಈ ಭಯೋತ್ಪಾದಕರ ತಂಡ ಕೆಲಸ ಮಾಡಲಿದೆಯಂತೆ. ಇಂತಹ ಸಮಾಜಘಾತುಕರಿಗೆ ಬಿಜೆಪಿಯೇ ಬೆಂಬಲಕ್ಕೆ ನಿಂತಿರುವುದು ಜಗಜ್ಜಾಹೀರಾಗಿದೆ. ಕೂಡಲೇ ಸರ್ಕಾರ ಇಂತಹ ಭಯೋತ್ಪಾದಕ ಶಕ್ತಿಗಳನ್ನ ಮಟ್ಟ ಹಾಕಬೇಕೆಂದು ಒತ್ತಾಯಿಸಿದ್ದಾರೆ.
ಇನ್ನು ಬಿಕೆ ಹರಿಪ್ರಸಾದ್ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೌಂಟರ್ ಕೊಟ್ಟಿದ್ದಾರೆ.
ಬಿಕೆ ಹರಿಪ್ರಸಾದ್ ಅವರನ್ನ ಮಾಧ್ಯಮಗಳು ಗಂಭೀರವಾಗಿ ತೆಗೆದುಕೊಳ್ತಿಲ್ಲ ಹೀಗಾಗಿ ಮನ ಬಂದಂತೆ ಮಾತಾಡ್ತಿದಾರೆ. ಅವರ ಹೇಳಿಕೆಗಳು ಅವರಿಗೇ ಅರ್ಥ ಆಗ್ತಿಲ್ಲ ಅನಿಸುತ್ತೆ ಆದ್ರಿಂದ ಮಾಧ್ಯಮಗಳಲ್ಲಿ ಪ್ರಚಾರ ಪಡೆಯೋ ಕೆಲಸ ಮಾಡ್ತಿದಾರೆ ಅಷ್ಟೇ ಅಂತ ವ್ಯಂಗ್ಯವಾಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಬಿಜೆಪಿಯ ಕಾಂಗ್ರೆಸ್ ಹಿಂದೂ ವಿರೋಧಿ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ ರಾಮ ಮಂದಿರ ಉದ್ಘಾಟನೆಗೆ ನಮ್ಮನ್ನ ಕರೆದಿಲ್ಲ. ನಾನು ಶಿವ ಭಕ್ತ, ಆಂಜನೇಯನ ಮೂರ್ತಿಗೆ ನಿತ್ಯ ಪೂಜೆ ಮಾಡ್ತೀನಿ. ಎಲ್ಲಾ ದೇವರುಗಳು ನನ್ನ ಹೃದಯದಲ್ಲಿದೆ ಅರಿಶಿನ ಅಕ್ಕಿ ಸೇರಿಯೇ ಮಂತ್ರಾಕ್ಷತೆ ಆಗೋದು. ನಮ್ಮ ಅನ್ನಭಾಗ್ಯ ಯೋಜನೆಯಿಂದಲೇ ಅಕ್ಷತೆ ಆಗುತ್ತಿದೆ ಮನಮೋಹನ್ ಸಿಂಗ್ ಫುಡ್ ಆ್ಯಕ್ಟ್ ತಂದಾಗ ಮೊದಲು ಅನ್ನ ಭಾಗ್ಯ ಪ್ರಾರಂಭಿಸಿದ್ದೇ ನಮ್ಮ ಸಿದ್ದರಾಮಯ್ಯ ಅಂತ ಟಾಂಗ್ ಕೊಟ್ಟಿದ್ದಾರೆ. ಈ ಮಧ್ಯೆ ಸರ್ಕಾರ ಜನವರಿ 22 ರಂದು ಮುಜರಾಯಿ ಇಲಾಖೆಗೆ ಒಳಪಡುವ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಲು ಸೂಚಿಸಿ ಆದೇಶ ಹೊರಡಿಸಿದೆ. ಈ ವಿಚಾರವಾಗಿ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ ನಿಜವಾದ ಹಿಂದುಗಳು ಹಿಂದು ಧರ್ಮ ಪಾಲಿಸೋದು ಕಾಂಗ್ರೆಸ್ ನವರು. ನಾವು ಎಂದೂ ಕೂಡ ಇದರ ಮೇಲೆ ರಾಜಕೀಯ ಮಾಡಿಲ್ಲ ಅಂತ ತಿರುಗೇಟು ಕೊಟ್ಟಿದ್ದಾರೆ.
ಒಟ್ನಲ್ಲಿ ಕಾಂಗ್ರೆಸ್- ಬಿಜೆಪಿ ಮಧ್ಯೆ ರಾಮಮಂದಿರದ ರಾಜಕೀಯ ಧರ್ಮ ದಂಗಲ್ ಸದ್ಯಕ್ಕೆ ಮುಗಿಯೋ ಲಕ್ಷಣಗಳಂತೂ ಕಾಣ್ತಿಲ್ಲ. ಕಾಂಗ್ರೆಸ್ ನಾವೂ ರಾಮಭಕ್ತರು ಅನ್ನೋದನ್ನ ಫ್ರೂ ಮಾಡಲು ಹೊರಟಿದ್ದಾರೆ, ಬಿಜೆಪಿ ನಾಯಕರು ಕೈ ವಿರುದ್ಧ ಮುಸ್ಲಿಂ ತುಷ್ಠೀಕರಣದ ಅಸ್ತ್ರವನ್ನೇ ಪ್ರಬಲವಾಗಿ ಪ್ರಯೋಗಿಸ್ತಿದೆ ಈ ಮಧ್ಯೆ ಹರಿಪ್ರಸಾದ್ ಬಿಟ್ಟಿರೋ ಫತ್ವಾದ ಕೇಸರಿ ಭಯೋತ್ಪಾದನೆಯ ಬಾಂಬ್ ಯಾವ ರೀತಿ ಕೆಲಸ ಮಾಡುತ್ತೆ ಎಂಬುದನ್ನ ಕಾದುನೋಡಬೇಕಿದೆ.