ಬೆಂಗಳೂರು:- ಸಿಲಿಕಾನ್ ಸಿಟಿಯಲ್ಲಿ ಹೈಟೆಕ್ ವೇಶ್ಯವಾಟಿಕೆ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಜವಬ್ದಾರಿಯನ್ನು ಡಿಸಿಪಿ ಅರುಣಾಂಶು ಗಿರಿ ಹೆಗಲಿಗೆ ವಹಿಸಲಾಗಿದೆ. ಈ ಮೂಲಕ ಅಧಿಕಾರಿಗಳ ಎದೆಯಲ್ಲಿ ಢವಢವ ಶುರುವಾಗಿದೆ.
ನಿರ್ವಾನ ಸ್ಪಾ ಮೇಲೆ ನಿನ್ನೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಅನೇಕ ಮಹಿಳೆಯರನ್ನು ರಕ್ಷಿಸಿ, ಗಿರಾಕಿಗಳು, ಸ್ಪಾ ಓನರ್ ಬಂಧಿಸಿದ್ದರು. ಸದ್ಯ ಮುಂದಿನ ತನಿಖೆಯ ಹೊಣೆ ಸಿಎಆರ್ ಹೆಡ್ ಕ್ವಾಟರ್ ಡಿಸಿಪಿ ಹೆಗಲಿಗೆ ನೀಡಲಾಗಿದೆ.
ಅಪರೂಪಕ್ಕೆ ತನಿಖಾ ಜವಾಬ್ದಾರಿಯನ್ನ ನಾನ್ ಎಗ್ಸಿಗ್ಯೂಟಿವ್ ಡಿಸಿಪಿ ನೀಡಿ ನಗರ ಪೊಲೀಸ್ ಆಯುಕ್ತ ದಯಾನಂದ್ ಆದೇಶ ಹೊರಡಿಸಿದ್ದಾರೆ. ನಿರ್ವಾನ್ ಸ್ಪಾ ಮೇಲಿನ ಕಾರ್ಯಾಚರಣೆಗೆ ಅರುಣಾಂಶು ಗಿರಿ ಟೀಮ್ ಲೀಡ್ ಮಾಡಿದ್ದರು. ಕಳೆದೊಂದು ತಿಂಗಳಿಂದ ಮಫ್ತಿಯಲ್ಲಿ ಡಿಕಾಯ್ ಮಾಡಿದ್ದ ಸಿಸಿಬಿ ಟೀಮ್, ಕೆಲ ಪೊಲೀಸರ ಸಹಕಾರದಿಂದ ಈ ದಂಧೆ ನಡೀತಿತ್ತು ಅನ್ನೋ ಅನುಮಾನ ಮೇರೆಗೆ ದಾಳಿ ನಡೆಸಿದೆ.
ಸಾಕಷ್ಟು ಜನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ್ರು ಯಾವುದೇ ಕ್ರಮವಾಗಿರಲಿಲ್ಲ. ಐದು ವರ್ಷದಿಂದ ಸಿಸಿಬಿ ಹಾಗೂ ಸ್ಥಳೀಯ ಪೊಲೀಸರ ಗಮನಕ್ಕೆ ಬಂದಿರಲಿಲ್ವಾ ಎಂಬ ಪ್ರಶ್ನೆ ಮೂಡಿದೆ. ಆರೋಪಿ ಅನಿಲ್ ಫೋನಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳ ನಂಬರ್ ಇರೋ ಮಾಹಿತಿ ಲಭ್ಯವಾಗಿದೆ.
ಅರುಣಾಂಶು ಗಿರಿ ತನಿಖಾಧಿಕಾರಿಯಾದ ಕಾರಣ ಹಲವು ಪೊಲೀಸರಿಗೆ ಭಯ ಶುರುವಾಗಿದೆ.