ಬೆಂಗಳೂರು: ಅದು ಸೆಲೆಬ್ರಿಟಿಗಳಿಗಾಗಿ ನಡೆದಿದ್ದ ಪಾರ್ಟಿ.. ರಾತ್ರಿ ಶುರುವಾದ ಪಾರ್ಟಿ ಬೆಳಗ್ಗೆ 5.30 ಆದ್ರೂ ನಿಂತಿರ್ಲಿಲ್ಲ. ಏನ್ ನಡೀತಿದೆ, ಸಂಬಂಧ ಪಟ್ಟು ಅಧಿಕಾರಿಗಳು ನಿರ್ಲಕ್ಷ ಕಾರಣ ನಾ ರೂಲ್ಸ್ ರೆಗ್ಯೂಲೆಶನ್ಸ್ ಏನು ಇಲ್ವಾ ಅಂತ ನೋಡೋ ಅಷ್ಟರಲ್ಲೇ ಪೊಲೀಸರು ರೇಡ್ ಮಾಡಿ, ಪಾರ್ಟಿ ಆಯೋಜಿಸಿದ್ದ ಪಬ್ ಓನರ್ ವಿರುದ್ಧ ಪ್ರಕರಣ ದಾಖಲಿಸಿದಾರೆ
ಹಾಗೆ ಜೆಟ್ ಲಾಗ್ ಪಬ್ನಲ್ಲಿ ಮುಂಜಾನೆವರೆಗೂ ಸೆಲೆಬ್ರಿಟಿಗಳ ಪಾರ್ಟಿ ಮಾಡಿರುವ ವಿಚಾರವಾಗಿ ನೋಟೀಸ್ ನೀಡಲು ಸುಬ್ರಮಣ್ಯನಗರ ಪೊಲೀಸರು ಮುಂದಾಗಿದ್ದಾರೆ. ದರ್ಶನ್, ರಾಕ್ ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ, ಪ್ರಜ್ವಲ್ ದೇವರಾಜ್ ಸೇರಿದಂತೆ ಕೆಲ ಸೆಲೆಬ್ರಿಟಿಗಳಿಗೆ ನೋಟೀಸ್ ನೀಡುವ ಸಾಧ್ಯತೆ ಇದೆ.
ರಾಜಧಾನಿ ಬೆಂಗಳೂರಿನಲ್ಲಿ ಪಬ್, ರೆಸ್ಟೋರೆಂಟ್ಗಳಿಗೆ ಮೂಗುದಾರ ಇಲ್ಲದಂಗಾಗಿದೆ. ಪೊಲೀಸರ ಭಯವೇ ಇಲ್ಲದೇ ಇಷ್ಟಬಂದಂತೆ ರೂಲ್ಸ್ ಮೀರಿ ವರ್ತಿಸುತ್ತಿವೆ. ಇಂತದ್ದೆ ವಿವಾದಕ್ಕೆ ರಾಜಾಜಿನಗರದ ಜೆಟ್ಲ್ಯಾಗ್ ರೆಸ್ಟೋಬಾರ್ ಸಿಲುಕಿದೆ. ಕಳೆದ 2 ದಿನಗಳ ಹಿಂದೆ ರೂಲ್ಸ್ ಬ್ರೇಕ್ ಮಾಡಿ ರಾತ್ರಿಯೆಲ್ಲ ಪಾರ್ಟಿ ಮಾಡಿಸಿದ್ದ ಜೆಟ್ಲ್ಯಾಗ್ ಪಬ್ ಓನರ್ ಶಶಿರೇಖಾ ಜಗದೀಶ್ ವಿರುದ್ಧ ಸುಬ್ರಮಣ್ಯ ನಗರ ಠಾಣೇಯಲ್ಲಿ ಕೇಸ್ ದಾಖಲಾಗಿದ್ದು, ಜೆಟ್ಲ್ಯಾಗ್ ಓನರ್ಗೆ ಸಂಕಷ್ಟ ಎದುರಾಗಿದೆ.
ರೂಲ್ಸ್ ಪ್ರಕಾರ ರಾತ್ರಿ ಒಂದು ಗಂಟೆಗೆ ಎಲ್ಲಾ ಪಬ್, ರೆಸ್ಟೋರೆಂಟ್ಗಳನ್ನ ಕ್ಲೋಸ್ ಮಾಡಬೇಕು. ಆದ್ರೆ ಜೆಟ್ಲ್ಯಾಗ್ ಪಬ್ ನಲ್ಲಿ ಯಾವ ಭಯವೂ ಇಲ್ಲದೆ ಪಾರ್ಟಿಗೆ ಬಂದವರಿಗೆ ರಾತ್ರಿಯೆಲ್ಲ ಗುಂಡುತುಂಡು ಸಪ್ಪೈ ಮಾಡಲಾಗಿದೆ.. ಆದ್ರೆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ರೂಲ್ಸ್ ಮೀರಿದ ಪಬ್ ಕ್ಲೋಸ್ ಮಾಡಿಸ್ದೆ ಗಪ್ಚುಪ್ ಆಗಿದ್ರು. ಈ ವೇಳೆ ಪಬ್ ಅವಂತಾರದ ಮಾಹಿತಿ ತಿಳಿದ ಪೊಲೀಸ್ ಕಮಿಷನರ್ ದಯಾನಂದ್ ಸಂಬಂಧಪಟ್ಟ ಪೊಲೀಸರಿಗೆ ತರಾಟೆಗೆ ತೆಗೆದುಕೊಂಡ್ರು. ಆ ಬಳಿಕವಷ್ಟೇ FIR ಹೈಡ್ರಾಮಾ ನಡೆದಿದ್ದು, ಕರ್ತವ್ಯ ಲೋಪ ಎಸಗಿದ ಪೊಲೀಸರ ವಿರುದ್ಧ ಕ್ರಮ ಫಿಕ್ಸ್ ಆಗಿದೆ. .