ಬೆಂಗಳೂರು: ಇನ್ನೇನು ಕೆಲ ದಿನಗಳಲ್ಲಿ ಬೇಸಿಗೆ ಶುರುವಾಗ್ತಿದೆ..ಬೇಸಿಗೆಯಲ್ಲಿ ನೀರಿನ ಬವಣೆ ಹಿಂದಿನ ವರ್ಷಗಳಿಗಿಂತ ಹೆಚ್ಚಾಗಿ ಕಾಡುವ ಭೀತಿ ಇದೆ.ಹೀಗಾಗಿ ಬೇಸಿಗೆ ಎದುರಿಸಲು ಜಲಮಂಡಳಿ ಮುಂದಾಗಿದ್ದು,ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳುವುದಕ್ಕೆ ಸಿದ್ದತೆ ನಡೆಸಿದೆ.ಹಾಗಾದರೆ ಬೇಸಿಗೆ ಎದುರಿಸಲು ಜಲಮಂಡಳಿ ಏನೆಲ್ಲಾ ಸಿದ್ದತೆ ಮಾಡಿಕೊಳ್ಳುತ್ತಿದೆ ಬನ್ನಿ ನೋಡೋಣ
ಬೆಂಗಳೂರಿನ ನೀರಿನ ಸಮಸ್ಯೆಗೆ ಸರ್ಕಾರವಂತೂ ಶಾಶ್ವತ ಪರಿಹಾರ ಕೊಡಲಿಲ್ಲ.ಹೀಗಾಗಿ ಕಾವೇರಿ ಮೂಲದಿಂದ ಬರುತ್ತಿರುವ ನೀರನ್ನು ಅವಲಂಬಿಸಬೇಕಿದೆ.ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಗೊಂಡಿರುವ 110 ಹಳ್ಳಿಗಳಿಗಂತೂ ಮಳೆಗಾಲ,ಚಳಿಗಾಲ, ಬೇಸಿಗೆ ಎನ್ನದೆ ತೀವ್ರ ನೀರಿನ ಅಭಾವ ಇದೆ.ಇನ್ನೇನು ಕೆಲ ದಿನಗಳಲ್ಲಿ ಬೇಸಿಗೆ ಆರಂಭವಾಗ್ತಿರೋ ಕಾರಣ ಬೇಸಿಗೆಯಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಜಲಮಂಡಳಿ ತಯಾರಿಗಳನ್ನ ಮಾಡಿಕೊಳ್ಳುತ್ತಿದೆ.
ಹೌದು.ಈ ಬಾರಿ ನಗರದಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗದು ಎಂದು ಹೇಳುತ್ತಿದ್ದಾರಾದರೂ ವಾಸ್ತವ ಇದಕ್ಕೆ ತದ್ವಿರುದ್ಧ. ಇದೆಲ್ಲದರ ಪರಿಣಾಮ ಬೇಸಿಗೆಯಲ್ಲಿ ನಗರದ ನಾಗರಿಕರಿಗೆ ನೀರಿನ ಬಿಸಿಯೂ ತಟ್ಟಲಿದೆ.ಹೀಗಾಗಿ ಕಾವೇರಿ ಕಣಿವೆಯಲ್ಲಿ ನೀರಿನ ಪ್ರಮಾಣ ಕುಸಿಯುತ್ತಿರುವ ಕಾರಣ ನಗರಕ್ಕೆ ಜೂನ್ ವರಿಗೆ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಮಂಡಳಿ ಮುಂದಾಗಿದೆ.ನಗರಕ್ಕೆ ಪ್ರತಿದಿನ 1450 ಎಂಎಲ್ಡಿ ನೀರು ಕಾವೇರಿಯಿಂದ ಪೂರೈಕೆ ಮಾಡಲಾಗುತ್ತಿದೆ. ಪ್ರತಿ ತಿಂಗಳು 1.8 ಟಿಎಂಸಿ ನೀರು ಅಗತ್ಯ ಇದೆ.ಸದ್ಯ ಕಾವೇರಿ,ಕಬಿನಿಯಲ್ಲಿ ಅಗತ್ಯ ಇರುವ ನೀರು ಇದ್ರು ಬೇಸಿಗೆಯಲ್ಲಿ ಕಾವೇರಿ ಕಣಿವೆಯಲ್ಲಿ ನೀರು ಕುಸಿಯುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ನಗರಕ್ಕೆ ಪ್ರತ್ಯೇಕವಾಗಿ ನೀರು ಕಾಯ್ದಿಸುವಂತೆ ಕಾಲವೇರಿ ನೀರಾವರಿ ನಿಗಮಕ್ಕೆ ಜಲಮಂಡಳಿ ಪತ್ರ ಬರೆದಿದೆ.
ಬಿಸಿಲಿನ ಬೇಗೆಯ ಕಾರಣದಿಂದ ಜಲಾಶಯದ ನೀರು ಶೇ 10 ರಷ್ಟು ಆವಿ ಯಾಗ್ತದೆ.ಕಾವೇರಿ ಜಲಾಶಯದಿಂದ ಚಾಮರಾಜನಗರ ,ಮೈಸೂರು, ಮಂಡ್ಯ ,ರಾಮನಗರಕ್ಕೆ ,ಕುಡಿಯುವ ನೀರು ಪೂರೈಕೆ ಮಾಡಬೇಕಿದೆ.ಜಲಮಂಡಳಿ ಬೆಂಗಳೂರಿಗೆ 55 ವರ್ಷದಿಂದ ಕಾವೇರಿ ನೀರು ಪೂರೈಕೆ ಮಾಡುತ್ತಿದೆ.2012 ರಲ್ಲಿ ಭೀಕರ ಜಲಕ್ಷಾಮ ತೀವ್ರವಾಗಿ ಕಾಡಿತ್ತು.ಅದೇ ರೀತಿ 2015 ರಲ್ಲಿ ಕೆಆರ್ ಎಸ್ ಜಲಾಶಯ ಖಾಲಿಯಾಗಿ ಹೇಮಾವತಿ ಜಲಾಶಯ ಮೂಲಕ ನೀರನ್ನ ಪೂರೈಕೆ ಮಾಡಲಾಯಿತು.ಈ ವರ್ಷ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗ್ತದೆ.ಕೆಆರ್ಎಸ್ ಜಲಾಶಯದಲ್ಲಿ 20 ಟೆಎಂಸಿ ನೀರು ಲಭ್ಯತೆ ಇದ್ದು, ಮುಂದಿನ ಜೂನ್ ವರಿಗೆ ಅಗತ್ಯ ರುವ ನೀರು ಕಾಯ್ದಿರಿಸುವಂತೆ ನೀರಾವರಿ ನಿಗಮಕ್ಕೆ ಪತ್ರ ಬರೆಯಲಾಗಿದೆ.
ಬೈಟ್: ಸುರೇಶ್ ಬೆಂಗಳೂರು ಜಲಮಂಡಳಿ ಇಂಜಿನಿಯರ್ ಇನ್ ಚೀಫ್
ಒಟ್ಟಿನಲ್ಲಿ ಫೆಬ್ರವರಿ ನಂತರ ನಗರದಲ್ಲಿ ನೀರಿನ ಬೇಡಿಕೆ ಪ್ರಮಾಣ ಹೆಚ್ಚಳವಾಗಲಿದೆ. ನಗರದಲ್ಲಿ ಈಗಾಗಲೇ ಸಾಕಷ್ಟು ಕೊಳವೆ ಬಾವಿಗಳು ಬತ್ತಿ ಹೋಗಿವೆ.ಇದರಿಂದ ನಗರಕ್ಕೆ ನೀರಿನ ಬವಣೆ ಹೆಚ್ಚುವ ಆತಂಕ ಇದೆ.ಹೀಗಾಗಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಕ್ರಮ ಗೊಳ್ಳುವದಕ್ಕೆ ಮಂಡಳಿ ಅಧಿಕಾರಿಗಳು ಪ್ಲಾನ್ ರೂಪಿಸುತ್ತಿದ್ದಾರೆ.ಆದ್ರೆ ಇವರ ಪ್ಲಾನ್ ಎಷ್ಟರ ಮಟ್ಟಿಗೆ ನೀರಿನ ಸಮಸ್ಯೆ ಬಗೆಹರಿಸುತ್ತೆ ಅನ್ನೋದನ್ನ ಕಾದುನೋಡಬೇಕು.