ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ ಅನ್ನಭಾಗ್ಯದ ಅಕ್ಕಿ ಮಂತ್ರಾಕ್ಷತೆ ವಿಚಾರ ರಾಜಕೀಯವಾಗಿ ಭಾರೀ ಆಕ್ರೊಶಕ್ಕೆ ಕಾರಣವಾಗ್ತಿದೆ. ಡಿಕೆಶಿ ಹೇಳಿಕೆಗೆ ಕೆರಳಿ ಕೆಂಡವಾಗಿರುವ ಕೇಸರಿ ನಾಯಕರು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕ್ತಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಸಹ ಡಿಕೆ ವಿರುದ್ದ ತಿರುಗಿಬಿದ್ದಿದ್ದು ಡಿಸಿಎಂ ರಾಮಭಕ್ತಿಯನ್ನೇ ಪ್ರಶ್ನಿಸಿದ್ದಾರೆ. ಈ ಮಧ್ಯೆ ಸರ್ಕಾರ ರಾಜ್ಯಾದ್ಯಂತ 22 ರಂದು ಎಲ್ಲಾ ದೇವಸ್ಥಾನಗಳಲ್ಲಿ ಪೂಜಾಕೈಂಕರ್ಯಕ್ಕೆ ಆದೇಶ ಹೊರಡಿಸಿರೋದು ಕೆಲ ಕೈ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ…
ರಾಮಮಂದಿರದ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ ಬಿಜೆಪಿ ನಾಯಕರು ರಾಜ್ಯಾದ್ಯಂತ ಅಯೋಧ್ಯೆಯಿಂದ ಬಂದಿರುವ ಫಲಮಂತ್ರಾಕ್ಷತೆಯನ್ನು ಮನೆ ಮನೆಗೆ ತೆರಳಿ ಹಂಚುತ್ತಿದ್ದಾರೆ. ಇದೇ ವಿಚಾರಕ್ಕೆ ನೆನ್ನೆ ಡಿಸಿಎಂ ಡಿಕೆ ಶಿವಕುಮಾರ್ ಬಿಜೆಪಿ ನಾಯಕರು ಫಲಮಂತ್ರಾಕ್ಷತೆಗೆ ಬಳಸಿರೋದು ನಾವು ಕೊಟ್ಟ ಅನ್ನಭಾಗ್ಯ ಅಕ್ಕಿಯನ್ನೇ ಅನ್ನೊ ಹೇಳಿಕೆ ಇದೀಗ ರಾಜಕೀಯ ವಾಕ್ಸಮರಕ್ಕೆ ವೇದಿಕೆಯಾಗಿದೆ. ಬಿಜೆಪಿ- ಜೆಡಿಎಸ್ ನಾಯಕರು ಕಾಂಗ್ರೆಸ್ ವಿರುದ್ಧ ತಿರುಗಿಬಿದ್ದಿದ್ದು ಡಿಕೆಶಿ ಹೇಳಿಕೆಗೆ ಟಾಂಗ್ ಕೊಡ್ತಿದ್ದಾರೆ.
ಡಿಕೆಶಿ ಹೇಳಿಕೆಯನ್ನ ಖಂಡಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನೀವು ಕೊಡಲಾರದ ಅಕ್ಕಿಯಲ್ಲಿ ಅಕ್ಷತೆ ಎಲ್ಲಿ ಇದೆ ಹೇಳಿ. ಕೇಂದ್ರದಿಂದ ಬರುವ ಅಕ್ಕಿಯನ್ನ, ಕಷ್ಟದ ಕಾಲದಲ್ಲಿ ಜನ ಬಳಸುತ್ತಿದ್ದಾರೆ. ಇದಲರಲ್ಲೂ ರಾಜಕೀಯ ಮಾಡ್ತಿದ್ದಾರೆ. ರಾಮ ಒಬ್ಬ ಕಾಲ್ಪನಿಕ ಅಂತ ಹೇಳಿದ್ರು, ರಾಮ ಸೇತುವೆ ಕಾಲ್ಪನಿಕ ಅಂತ ಹೇಳಿದ್ರು. ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ರಾ ಅಂತ ಹೇಳಿದ್ರು. ಈಗ ಡಿಕೆಶಿ ಅವರು ಅಕ್ಷತೆ ಹಂಚ್ತಿರೋದು ಸಂತೋಷದ ಸಂಗತಿ ಅಂತ ಟಾಂಗ್ ಕೊಟ್ಟಿದ್ದಾರೆ ಜೋಷಿ.
ಡಿಕೆಶಿ ಹೇಳಿಕೆಗೆ ವಿಪಕ್ಷ ನಾಯಕ ಅಶೋಕ ಸಹ ಟಾಂಗ್ ಕೊಟ್ಟಿದ್ದಾರೆ ಡಿಕೆಶಿ ಗೆ ಜ್ಞಾನ ಇದ್ಯಾ ಯೋಚನೆ ಮಾಡಲಿ. 10 kg ಅಕ್ಕಿ ಕೊಡ್ತೀವಿ ಅಂದ್ರು, ಈಗ 5 kgನೂ ಕೊಡ್ತಿಲ್ಲ. ಅನ್ನಭಾಗ್ಯ ಅಕ್ಕಿ ಹೋರಟೋಯ್ತು ಈಗ ಕೇಂದ್ರ ಸರ್ಕಾರ ಮೋದಿ ಅವರು ಅಕ್ಕಿ ಕೊಡ್ತಿರೋದು.
ಆ ಅಕ್ಕಿ ತೆಗೆದುಕೊಂಡು ಯಾರೂ ಅಕ್ಷತೆ ಮಾಡಲ್ಲ ದೇಗುಲಗಳಿಗೆ ದಿನನಿತ್ಯ ಅಕ್ಕಿ,ಬೆಲ್ಲ ದಾನ ಮಾಡ್ತಾರೆ.
ಅಯೋಧ್ಯೆಗೆ ಕಳಿಸುವ ಅಕ್ಕಿ ಎಲ್ಲಾ ಸೇರಿ ಅಕ್ಷತೆ ಮಾಡಿರೋದು ಅಂತ ಟಾಂಗ್ ಕೊಟ್ಟಿದ್ದಾರೆ. ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸಹ ಡಿಕೆಶಿಗೆಟಾಂಗ್ ಕೊಟ್ಟಿದ್ದಾರೆ ಅಕ್ಕಿಯನ್ನ ದೊಡ್ಡಹಾಲಹಳ್ಳಿಯಲ್ಲಿ ಬೆಳೆದು ಕಳಿಸಿದ್ದಾರಾ.ಅವರ ಮನೆಯಲ್ಲಿ ಬರಿ ದೇವರ ಫೋಟೊಗಳೇ ಇದ್ದಾವೆ ದೇವರ ರಕ್ಷಣೆ ಇಲ್ಲಾ ಅಂದ್ರೆ ಉಳಿಯಬೇಕಲ್ಲಾ. ಪಾಪ ಅದಕ್ಕೆ ಇಗ ದೇವರನ್ನ ನೆನೆಸಿಕೊಳ್ತಾರೆ ಎಂದು ವ್ಯಂಗ್ಯವಾಡಿದ್ರು HDK…
ಈ ಮಧ್ಯೆ ರಾಜ್ಯಾದ್ಯಂತ ಜನವರಿ 22 ರಂದು ಎಲ್ಲಾ ದೇವಾಲಯಗಳಲ್ಲಿ ಪೂಜಾಕೈಂಕರ್ಯಕ್ಕೆ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಕೆಲ ಕಾಂಗ್ರೆಸ್ ನಾಯಕರೇ ಒಳಗೊಳಗೆ ಅಸಮಾಧಾನ ಗೊಂಡಿದ್ದಾರೆ. ಈ ಮಧ್ಯೆ ಡಿಕೆಶಿ ಹೇಳಿಕೆ ಕಾಂಗ್ರೆಸ್ ಗೆ ಮತ್ತಷ್ಟು ಡ್ಯಾಮೇಜ್ ಮಾಡ್ತಿದೆ. ಮುಂದಿನ ದಿನಗಳಲ್ಲಿ ರಾಮ ಮಂದಿರ ಮತ್ಯಾವ ವಿವಾದಕ್ಕೆ ಕಾರಣವಾಗುತ್ತೆ ಎಂಬುದನ್ನ ಕಾದುನೋಡಬೇಕಿದೆ