ಫೈವ್ ಸ್ಟಾರ್, ದೊಡ್ಡ ದೊಡ್ಡ ರೆಸ್ಟೊರೆಂಟ್, ಚೈನೀಸ್, ಇಟಾಲಿಯನ್ ಆಹಾರ ಸವಿಯುವವರೂ ಸಹ ಮಿಲಿಟರಿ ಹೋಟೆಲ್ನಲ್ಲಿ ಒಮ್ಮೆಯಾದರೂ ಆ ಬಿಸಿಯಾದ, ರುಚಿಯಾದ ಮಾಂಸದ ಆಹಾರ ಸವಿಯಲು ಕಾಯುತ್ತಿರುತ್ತಾರೆ. ಹೌದು ಬಹುತೇಕರಿಗೆ ಮಿಲಿಟ್ರಿ ಹೋಟೆಲ್ನಲ್ಲಿ ಊಟ ಮಾಡೋದಂದ್ರೆ ತುಂಬಾನೇ ಇಷ್ಟವಾಗುತ್ತದೆ. ಬೆಂಗಳೂರಿನಲ್ಲಿರುವ ಮಿಲಿಟರಿ ಹೋಟೆಲ್ಗೆ ದೊಡ್ಡ ಚರಿತ್ರೆಯೇ ಇದೆ.
ಮರಾಠ ಯೋಧರಿಗೆ ಮಾಂಸಾಹಾರವನ್ನು ತಯಾರಿಸಿ ಬಡಿಸುತ್ತಿದ್ದ ಗೋವಿಂದ ರಾವ್ ಎನ್ನುವವರು ಈ ಮಿಲಿಟರಿ ಹೋಟೆಲ್ನ್ನು ಪ್ರಾರಂಭಿಸಿದರು. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪಕ್ಕಾ ನಾಟಿ ಸ್ಟೈಲ್ ಊಟವನ್ನು ಸವಿಯಬೇಕೆಂದರೆ ನೀವು ಮಿಲಿಟರಿ ಹೋಟೆಲ್ಗಳಿಗೆ ಭೇಟಿ ನೀಡಬೇಕು. ಕೆಲವರು ಮನೆಯಲ್ಲಿ ಮಾಡುವುದಕ್ಕಿಂತ ಹೊರಗೆ ತಿನ್ನಲು ಇಷ್ಟಪಡುತ್ತಾರೆ. ನೀವು ಬೆಂಗಳೂರಿನವರಾದರೆ ನಿಮಗೆ ಒಳ್ಳೆ ಮಾಂಸ ಪ್ರಿಯರಾಗಿದ್ದಾರೆ ಈ ಮಿಲಿಟರಿ ಹೋಟೆಲ್ʼಗಳಿಗೆ ಭೇಟಿ ನೀಡಬೇಕು. ಇಲ್ಲಿದೆ ನೋಡಿ ಲೀಸ್ಟ್..!?
ಗೌಡ್ರು ಹೋಟೆಲ್
ಒಳ್ಳೆ ಮಾಂಸ ಪ್ರಿಯರಾಗಿದ್ದಾರೆ ಈ ಮಿಲಿಟರಿ ಹೋಟೆಲ್ʼಗಳಿಗೆ ಭೇಟಿ ನೀಡಬೇಕು. ಮಟನ್ ಕರಿ ಮತ್ತು ರಾಗಿ ಮುದ್ದೆ ಇಲ್ಲಿ ಬಹಳ ಫೇಮಸ್. ನಂತರ ಭೇಜಾ ಫ್ರೈ ಕೂಡ ಇಲ್ಲಿ ಮಿಸ್ ಮಾಡದೇ ತಿನ್ನಬೇಕಂತೆ. ಬೋಟಿ ಮಸಾಲಾ ಮತ್ತು ಹೆಡ್ ಮೀಟ್ ಫ್ರೈ ಸಹ ಜನರ ಇಷ್ಟದ ಆಹಾರವಾಗಿದ್ದು, ಗೌಡ್ರು ಸ್ಪೆಷಲ್ ಚಿಕನ್ ಮಸಾಲಾ ಎಲ್ಲರ ಫೇವರೇಟ್ ಅಂತೆ.
ಶಿವಾಜಿ ಮಿಲ್ಟ್ರಿ ಹೋಟೆಲ್, ಶಿವಾಜಿ ನಗರ
ಮಿಲ್ಟ್ರಿ ಹೋಟೆಲ್ ಬಡ, ಮಧ್ಯಮ ವರ್ಗದ ಜನರು ಇಷ್ಟಪಟ್ಟು ಹೋಗುವ ಸ್ಥಳ. ಬೆಂಗಳೂರು ಜಯನಗರದ 8ನೇ ಬ್ಲಾಕ್ನಲ್ಲಿರುವ ಶಿವಾಜಿ ಮಿಲ್ಟ್ರಿ ಹೋಟೆಲ್ ಇಡೀ ಬೆಂಗಳೂರಿನಲ್ಲಿ ಬಹಳ ಫೇಮಸ್. ಬೆಂಗಳೂರಿನ ಟಾಪ್ ಬಿರಿಯಾನಿ ಹೋಟೆಲ್ಗಳಲ್ಲಿ ಇದೂ ಒಂದು. ಘಮಘಮಿಸುವ ಮಸಾಲೆ, ಮುಟ್ಟಿದರೆ ಮೃದುವಾಗಿರುವ ಚಿಕನ್/ಮಟನ್ ಬಿರ್ಯಾನಿ ತಿನ್ನುವ ಆಸೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಎಸ್ಜಿಎಸ್ ನಾನ್ವೆಜ್ ಗುಂಡು ಪಲಾವ್
ಸುಮಾರು ಮೂರು ದಶಗಳಿಂದ ಗ್ರಾಹಕರಿಗೆ ಅತ್ಯುತ್ತಮವಾದ ಸೇವೆ ನೀಡುತ್ತಿರುವ ಎಸ್ಜಿಎಸ್ ನಾನ್ವೆಜ್ ಗುಂಡು ಪಲಾವ್ಗೆ ನಾನ್ ವೆಜ್ಪ್ರಿಯರು ಭೇಟಿ ನೀಡಲೇಬೇಕು. ಬೆಳ್ಳಂಬೆಳಗ್ಗೆಯೇ ಬಿರಿಯಾನಿ ತಿನ್ನಬೇಕು ಎನ್ನುವವರ ಆಸೆ ಇಲ್ಲಿ ಈಡೇರುತ್ತದೆ. ಬೆಳಗ್ಗೆ ಬಹುಬೇಗ ಆರಂಭವಾಗುವ ಈ ಹೋಟೆಲ್ ಬೇಗ ಮುಚ್ಚುತ್ತದೆ ಕೂಡ.
ಇನ್ನು ಭಾನುವಾರದ ಸಮಯದಲ್ಲಿ ಜನರಿಂದ ತುಂಬಿ ತುಳುಕುತ್ತಿರುತ್ತದೆ. ಬೆಂಗಳೂರು ನಿವಾಸಿಗಳು ಮಾತ್ರವಲ್ಲದೇ, ಬೆಂಗಳೂರಿನ ಸುತ್ತಮುತ್ತಲಿನ ಊರಿನ ಜನರು ಸಹ ಇಲ್ಲಿನ ರುಚಿ ನೋಡಲು ಬರುತ್ತಾರೆ. ಎಸ್ಜಿಎಸ್ ನಾನ್ವೆಜ್ ಗುಂಡು ಪಲಾವ್ ಚಿಕನ್ ಬಿರಿಯಾನಿ ಮತ್ತು ಮಟನ್ ಗುಂಡು ಪಲಾವ್ಗೆ ಹೆಸರುವಾಸಿಯಾಗಿದೆ. ಬೆಂಗಳೂರಿನ ವಿವಿಧ ಭಾಗಗಳಲ್ಲಿ ಈ ಹೋಟೆಲ್ ಇದೆ.
ನ್ಯೂ ಗೋವಿಂದ ರಾವ್ ಮಿಲಿಟರಿ ಹೋಟೆಲ್
ನ್ಯೂ ಗೋವಿಂದ ರಾವ್ ಮಿಲಿಟರಿ ಹೋಟೆಲ್ನಲ್ಲಿ ಅಡುಗೆಯವರು ಮುಂಜಾನೆ 3 ಗಂಟೆಗೆ ಎದ್ದು ತಿಂಡಿಯಿಂದ ಹಿಡಿದು ಎಲ್ಲಾ ಮೆನುವಿನ ಕೆಲಸವನ್ನು ಪ್ರಾರಂಭಿಸುತ್ತಾರೆ. ಬೆಳಗ್ಗೆ ಇಡ್ಲಿ, ಮಟನ್ ಲೆಗ್ ಸೂಪ್ ಮತ್ತು ಮಂಸದ ಸ್ಟಾಕ್ನಲ್ಲಿ ಬೇಯಿಸಿ ಮಾಡುವ ಬಿಸಿ ಪುಲಾವ್ ತಯಾರಿಸುತ್ತಾರೆ. ಊಟಕ್ಕೆ ಬಿರಿಯಾನಿ, ಖೈಮಾ ಉಂಡೆ, ಮಟನ್ ಲಿವರ್ ಫ್ರೈ, ಚಿಕನ್ ಪೆಪ್ಪರ್ ಡ್ರೈ ಮತ್ತು ಚಿಲ್ಲಿ ಚಿಕನ್ ತಯಾರಿಸಲಾಗುತ್ತದೆ.
ನಾಯ್ಡು ಮಿಲಿಟರಿ ಹೋಟೆಲ್
ಮಟನ್ ಫ್ರೈ, ಮಟನ್ ಕೀಮಾ, ಮಟನ್ ಲಿವರ್ ಮತ್ತು ಚಿಕನ್ ಫ್ರೈ ಸೇರಿದಂತೆ ವಿವಿಧ ನಾನ್ವೆಜ್ ಖಾದ್ಯಕ್ಕೆ ನಾಯ್ಡು ಮಿಲಿಟರಿ ಹೋಟೆಲ್ ಹೆಸರುವಾಸಿ. ಇಲ್ಲಿನ ಮಟನ್ ಬಿರಿಯಾನಿ ಮತ್ತು ಚಿಕನ್ ಬಿರಿಯಾನಿಯಂತೂ ಗ್ರಾಹಕರ ಮೆಚ್ಚಿನ ಆಯ್ಕೆ. ನಾನ್ವೆಜ್ ಪ್ರಿಯರು ಈ ಹೋಟೆಲ್ಗೆ ಒಮ್ಮೆ ಭೇಟಿ ನೀಡಲೇಬೇಕು.
ಚಂದೂಸ್ ಮಿಲಿಟರಿ ಹೋಟೆಲ್
ಬೆಂಗಳೂರಿನಲ್ಲಿರುವ ಪ್ರಸಿದ್ಧ ಮಿಲಿಟರಿ ಹೋಟೆಲ್ಗಳಲ್ಲಿ ಚಂದೂಸ್ ಮಿಲಿಟರಿ ಹೋಟೆಲ್ ಒಂದಾಗಿದೆ. ಮಟನ್ ಚಾಪ್ಸ್, ರಾಗಿ ಮುದ್ದೆ ಮತ್ತು ಪೆಪ್ಪರ್ ಫ್ರೈ ಇಲ್ಲಿನ ಜನಪ್ರಿಯ ಖಾದ್ಯವಾಗಿದ್ದು, ನಾನ್ ವೆಜ್ ಪ್ರಿಯರ ಮೆಚ್ಚಿನ ತಾಣವಾಗಿದೆ. ಇಲ್ಲಿಗೆ ಒಮ್ಮೆ ಭೇಟಿ ನೀಡಿ ಇಲ್ಲಿನ ರುಚಿ ಸವಿದವರು ಮತ್ತೆ ಇಲ್ಲಿನ ಖಾಯಂ ಗಿರಾಕಿಗಳಾಗುತ್ತಾರೆ.
ನಾಗಾರ್ಜುನ ಹೋಟೆಲ್
ಕೋರಮಂಗಲದಲ್ಲಿ ಮೊದಲು ಆರಂಭವಾದ ನಾಗಾರ್ಜುನ ಹೋಟೆಲ್, ಇಂದಿರಾ ನಗರ್, ರೆಸಿಡೆನ್ಸಿ ರೋಡ್, ಬನ್ನೇರುಘಟ್ಟ, ಮಾರತಹಳ್ಳಿಯಲ್ಲಿ ನಾಗಾರ್ಜುನ ಹೋಟೆಲ್ ಬ್ರಾಂಚ್ಗಳಿವೆ. ಆಕರ್ಷಕ ಮತ್ತು ಆರೊಮ್ಯಾಟಿಕ್ ಬಿರಿಯಾನಿಗೆ ಮತ್ತು ಮಟನ್ ಚಾಪ್ಸ್, ರಾಗಿ ಮುದ್ದೆ ಮತ್ತು ಪೆಪ್ಪರ್ ಫ್ರೈ ಈ ಹೋಟೆಲ್ ಹೆಸರುವಾಸಿಯಾಗಿದೆ.
ಎಸ್ಜಿಎಸ್ ನಾನ್ ವೆಜ್ ಗುಂಡು ಪಲಾವ್
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಇದು ಪುಟ್ಟ ಹೋಟೆಲ್ ಆದರೂ ಇವರು ತಯಾರಿಸುವ ಹೋಟೆಲ್ ಇಡೀ ಬೆಂಗಳೂರಿಗೇ ಫೇಮಸ್. ಈ ಹೋಟೆಲ್ ಬೆಂಗಳೂರಿನ ಸೌರಾಷ್ಟ್ರಪೇಟೆಯಲ್ಲಿದೆ. ಅದ್ದೂರಿ ರೆಸ್ಟೋರೆಂಟ್ ಆಗಬೇಕಿಲ್ಲ. ಒಳ್ಳೆ ಬಿರಿಯಾನಿ ದೊರೆತರೆ ಸಾಕು ಎನ್ನುವವರು ಈ ಎಸ್ಜಿಎಸ್ ನಾನ್ವೆಜ್ ಗುಂಡು ಪಲಾವ್ ಹೋಟೆಲ್ಗೆ ಹೋಗಿ ಬನ್ನಿ.
ಮೇಘನಾ ಫುಡ್ಸ್
ಜಯನಗರದಲ್ಲಿರುವ ಮೇಘನಾ ಫುಡ್ಸ್ ಕೂಡಾ ಸಿಲಿಕಾನ್ ಸಿಟಿಯ ಬೆಸ್ಟ್ ಬಿರಿಯಾನಿ ಸ್ಥಳಗಳಲ್ಲಿ ಒಂದು. 2006ರಿಂದಲೂ ಈ ಹೋಟೆಲ್ ಬಹಳ ಫೇಮಸ್. ಇಂದಿರಾ ನಗರ, ಕೋರಮಂಗಲ, ರೆಸಿಡೆನ್ಸ್ ರೋಡ್ನಲ್ಲಿ ಕೂಡಾ ಮೇಘನಾ ಫುಡ್ಸ್ ಶಾಖೆಗಳಿವೆ. ನಿಮಗೆ ಹತ್ತಿರವಾದ ಬ್ರಾಂಚ್ಗಳಿಗೆ ಹೋಗಿ ಬಿರ್ಯಾನಿ ಸವಿಯಬಹುದು. ಈ ಹೋಟೆಲ್ನಲ್ಲಿ ಡೈನಿಂಗ್ ಸೆಟ್ಟಿಂಗ್ ಕೂಡಾ ನಿಮ್ಮ ಗಮನ ಸೆಳೆಯುತ್ತದೆ.
ಅಂಬುರ್ ಸ್ಟಾರ್ ಬಿರಿಯಾನಿ
ಬೆಂಗಳೂರಿನ ಭುವನಪ್ಪ ಲೇ ಔಟ್ನಲ್ಲಿರುವ ಅಂಬುರ್ ಸ್ಟಾರ್ ಬಿರಿಯಾನಿ ಬೆಂಗಳೂರಿನ ಬೆಸ್ಟ್ ರೆಸ್ಟೋರೆಂಟ್ಗಳಲ್ಲಿ ಒಂದು. ಮನೆಗೆ ಗೆಸ್ಟ್ ಬಂದು ನೀವು ಮನೆಯಲಿ ಬಿರಿಯಾನಿ ತಯಾರಿಸಲು ಸಾಧ್ಯವಾಗದಿದ್ದಲ್ಲಿ ಒಮ್ಮೆ ಈ ಹೋಟೆಲ್ಗೆ ಭೇಟಿ ಕೊಡಿ. ನೀವು ಮತ್ತೊಮ್ಮೆ ಈ ಹೋಟೆಲ್ಗೆ ಹೋಗುವುದನ್ನು ತಪ್ಪಿಸುವುದಿಲ್ಲ.
ರಂಗಣ್ಣ ಮಿಲಿಟರಿ ಹೋಟೆಲ್
ತಲೆ ಮಾಂಸ ಪದಾರ್ಥ, ಪಾಯ ಇಲ್ಲಿ ಸಿಗುವಷ್ಟು ರುಚಿಯಾದದ್ದು ಬೇರೆಲ್ಲೂ ಸಿಗೋದಿಲ್ಲ ಎನ್ನುತ್ತಾರೆ. ಕೈಮಾ ಪ್ರೈ ಕೂಡಾ ಇಲ್ಲಿ ಬಹಳ ರುಚಿಯಾಗಿರುತ್ತದೆ. ಬೆಳಗ್ಗೆ ಕಾಲ್ ಸೂಪ್ ಹಾಗೂ ಇಡ್ಲಿಗೆ ಇಲ್ಲಿ ಬಾರೀ ಡಿಮ್ಯಾಂಡ್ ಇರುತ್ತದೆ.