ಡ್ರೈ ಫ್ರೂಟ್ಸ್ ನಲ್ಲಿ ಅತ್ಯಂತ ರುಚಿಕರ ಡ್ರೈ ಫ್ರೂಟ್ಸ್ ಕೂಡ ಗೋಡಂಬಿ. ಜನರು ಗೋಡಂಬಿಯನ್ನು ಒಂದಾದ್ಮೇಲೆ ಒಂದರಂತೆ 15 -20 ತಿನ್ನುತ್ತಾರೆ. ಅದಕ್ಕಿಂತ ಹೆಚ್ಚು ತಿನ್ನುವ ಜನರೂ ಇದ್ದಾರೆ. ಒಂದು ರುಚಿ ಹಾಗೂ ಇನ್ನೊಂದು ಆರೋಗ್ಯಕ್ಕೆ ಒಳ್ಳೆಯದು ಅಂತಾ ನಾವು ತಿನ್ನುತ್ತೇವೆ. ಆದ್ರೆ ಆರೋಗ್ಯಕ್ಕೆ ಒಳ್ಳೆಯದಾಗಿರುವ ಇದನ್ನು ಅತಿ ಹೆಚ್ಚು ತಿನ್ನೋದು ಕೂಡ ಒಳ್ಳೆಯದಲ್ಲ.
ಗೋಡಂಬಿ ಸೇವನೆಯಿಂದ ಉಂಟಾಗುವ ಅಡ್ಡ ಪರಿಣಾಮಗಳು
ಹೊಟ್ಟೆಯ ಸಮಸ್ಯೆಗಳು : ಗೋಡಂಬಿಗಳಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ, ಅವು ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ, ಆದರೆ ಗೋಡಂಬಿಯನ್ನು ಅಧಿಕವಾಗಿ ಸೇವಿಸುವುದರಿಂದ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಉಂಟಾಗಬಹುದು.
ಬೊಜ್ಜು: ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ, ಅಥವಾ ಡಯೆಟ್ ನಲ್ಲಿದ್ದರೆ ತಪ್ಪಿಯೂ ಗೋಡಂಬಿ ಬೀಜಗಳನ್ನು ಸೇವಿಸಬೇಡಿ. ಇದರಲ್ಲಿ ಕ್ಯಾಲೋರಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ .
ಅಲರ್ಜಿಗಳು:ಅನೇಕ ಜನರು ಗೋಡಂಬಿ ಅಲರ್ಜಿಯನ್ನು ಹೊಂದಿರುತ್ತಾರೆ. ಗೋಡಂಬಿ ತಿಂದ ನಂತರ ಉಸಿರಾಟದ ಸಮಸ್ಯೆ , ತುರಿಕೆ, ವಾಂತಿ ಅಥವಾ ಅತಿಸಾರದ ತೊಂದರೆಗಳನ್ನು ಎದುರಿಸುತ್ತಾರೆ. ಹೀಗಿದ್ದರೆ ಗೋಡಂಬಿಯನ್ನು ಸೇವಿಸಲೇಬಾರದು, ಇದು ಅಲರ್ಜಿಯಪ್ರತಿಕ್ರಿಯೆಯನ್ನು ಉಂಟುಮಾಡಬಹುದು .
ತಲೆನೋವು:ಗೋಡಂಬಿ ತಿನ್ನುವುದರಿಂದ ಇನ್ನು ಕೆಲವರಿಗೆ ತಲೆನೋವು ಕಾಣಿಸಿಕೊಳ್ಳುತ್ತದೆ. ಗೋಡಂಬಿಯಲ್ಲಿರುವ ಅಮೈನೊ ಆಮ್ಲಗಳಾದ ಟೈರಮೈನ್ ಮತ್ತು ಫಿನೈಲೆಥೈಲಮೈನ್ ಅಂಶವು ತಲೆನೋವುವಿಗೆ ಕಾರಣವಾಗಿರುತ್ತದೆ.