ಬೆಂಗಳೂರು:- ಸಚಿವ ಸೋಮಣ್ಣ ಮತ್ತು ಸಿಟಿ ರವಿ ಮನೆಗೆ ಬಂದು ಮಾತನಾಡಿರುವ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಮೈತ್ರಿಯ ವಿಷಯಕ್ಕೆ ಸಂಬಂಧಪಟ್ಟಂತೆ, 28 ಕ್ಷೇತ್ರಗಳನ್ನು ಗೆಲ್ಲಬೇಕು ಎಂಬ ದೃಷ್ಟಿಯಿಂದ ಯಾರನ್ನು ಬೇಕಾದರೂ ಭೇಟಿ ಮಾಡಲು ಮುಕ್ತನಾಗಿದ್ದೇನೆ ಹಾಗಾಗಿ ಸಚಿವ ಸೋಮಣ್ಣ ಮತ್ತು ಸಿಟಿ ರವಿ ಮನೆಗೆ ಬಂದು ಮಾತನಾಡಿದ್ದಾರೆ ಎಂದರು.
ಇನ್ನೂ ಕರಸೇವಕರ ಬಂಧನ ಖಂಡಿಸಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರ ಮೇಲೆ ಪ್ರಕರಣ ದಾಖಲು ವಿಚಾರದಲ್ಲಿ ಪ್ರತಿಭಟನೆ ಮಾಡಬಾರದು ಅಂತ ಇದೆಯಾ ? ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು. ನಮ್ಮ ದೇಶದ ಸಂವಿಧಾನ ವ್ಯವಸ್ಥೆಯಲ್ಲಿ ಯಾವುದೇ ಒಂದು ವಿಷಯಗಳನ್ನು ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶ ಇದೆ. ಸಾರ್ವಜನಿಕರಿಗೆ ತೊಂದರೆ, ಕಾನೂನು ಬಾಹಿರವಾಗಿ ಪ್ರತಿಭಟನೆ ಮಾಡಿದ್ರೆ ಕೇಸ್ ಹಾಕಲಿ. ಈ ಸರ್ಕಾರ ನಾವು ಸಂವಿಧಾನದ ರಕ್ಷಕರು ಅಂತ ಜಾಗಟೆ ಹೊಡಿತಾರಲ್ಲ. ಈ ರೀತಿ ಕೇಸ್ ಹಾಕುವುದರಿಂದ ಯಾವ ರೀತಿ ಸಂವಿಧಾನ ರಕ್ಷಣೆ ಮಾಡ್ತಾರೆ ಎಂದು ಟೀಕಿಸಿ, ಅದ್ಯಾವ ಆಧಾರದ ಮೇಲೆ ಕೇಸ್ ಹಾಕಿದ್ದಾರೋ ಗೊತ್ತಿಲ್ಲ ಎಂದರು