ಹೈದರಾಬಾದ್:- ಮಕರ ಸಂಕ್ರಾಂತಿಗಾಗಿ ದೇಶವು ಸಜ್ಜಾಗುತ್ತಿದ್ದಂತೆ, ಆಂಧ್ರಪ್ರದೇಶದ ಗ್ರಾಮಾಂತರವು ಉತ್ಸಾಹಭರಿತ ಸಿದ್ಧತೆಗಳೊಂದಿಗೆ, ವಿಶೇಷವಾಗಿ ಆಚರಣೆಯ ಅವಿಭಾಜ್ಯ ಸಾಂಪ್ರದಾಯಿಕ ಕಾಕ್ಫೈಟ್ಗಳಿಗೆ ಸಜ್ಜಾಗಿದೆ. ಆದಾಗ್ಯೂ, ಒಂದು ವೈರಾಣು ರೋಗವು ಕೋಳಿಗಳ ಮೇಲೆ ಪರಿಣಾಮ ಬೀರುವುದರಿಂದ ಅನಿರೀಕ್ಷಿತ ಸವಾಲು ಉಂಟಾಗುತ್ತದೆ, ಇದರಿಂದಾಗಿ ಅನೇಕ ಸ್ಪರ್ಧಿಗಳು ಕಳಪೆ ರೂಪದಲ್ಲಿರುತ್ತಾರೆ. ಅವುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು, ಕೋಳಿಗಳಿಗೆ ವಯಾಗ್ರ, ಶಿಲಾಜಿತ್ ಮತ್ತು ಸ್ಟೀರಾಯ್ಡ್ ತುಂಬಿದ ಆಹಾರವನ್ನು ನೀಡುವುದು ಸೇರಿದಂತೆ ಅಸಾಂಪ್ರದಾಯಿಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.
ಆಂಧ್ರಪ್ರದೇಶದ ಗ್ರಾಮೀಣ ಪ್ರದೇಶದಲ್ಲಿ ಸಂಕ್ರಾಂತಿ ಆಚರಣೆಯ ಪ್ರಮುಖ ಭಾಗವೆಂದರೆ ಕೋಳಿ ಅಂಕ ಅಥವಾ ಕೋಳಿ ಕಾದಾಟ. ಆಂಧ್ರ ಪ್ರದೇಶ ರಾಜ್ಯದ ಒಳನಾಡಿನಲ್ಲಿ ಈಗಾಗಲೇ ಸಾವಿರಾರು ಅಕ್ರಮ ಕೋಳುಅಂಕ ಅಖಾಡಗಳು ಹುಟ್ಟಿಕೊಂಡಿವೆ, ಅಲ್ಲಿ ತರಬೇತಿ ಪಡೆದ ಹುಂಜಗಳು ಸಾಯುವವರೆಗೂ ಹೋರಾಟ ನಡೆಸುತ್ತವೆ.
ಆಂಧ್ರಪ್ರದೇಶದಲ್ಲಿ ಕೋಳಿಗಳಿಗೆ ‘ರಾಣಿಖೇತ್’ ಎನ್ನುವ ವೈರಲ್ ಕಾಯಿಲೆ ವ್ಯಾಪಕವಾಗಿದೆ. ಹಾಗಾಗಿ ಕೋಳಿ ಅಂಕದ ಚಾಂಪಿಯನ್ಗಳಿಗೆ ಈ ಬಾರಿ ತಮ್ಮ ಮೇಲಿನ ನಿರೀಕ್ಷೆಗಳನ್ನು ಉಳಿಸಿಕೊಳ್ಳುವುದೇ ಸವಾಲಾಗಿದೆ. ಈ ವೈರಲ್ ಕಾಯಿಲೆಯಿಂದಾಗಿ, ಕೋಳಿ ಅಂಕದ ಕೋಳಿ ಮಾಲೀಕರಿಗೆ ಆತಂಕ ತಂದಿದ್ದು, ಸಂಕ್ರಾಂತಿಯ ಕೋಳಿ ಅಂಕದ ಫೈಟ್ಗೆ ತಮ್ಮ ಕೋಳಿಗಳನ್ನು ಫಿಟ್ ಆಗಿ ಇರಿಸಲು ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಈ ವರ್ಷದ ಸಂಕ್ರಾಂತಿ ಜನವರಿ 14, 5 ಹಾಗೂ 16 ರಂದು ನಿಗದಿಯಾಗಿದೆ. ಕೋಳಿ ಫೈಟ್ಗೆ ಇನ್ನೇನು ಕೆಲವೇ ದಿನಗಳಿರುವ ಕಾರಣ, ಕೋಳಿಗಳ ಮಾಲೀಕರು ತಮ್ಮ ಫೈಟರ್ಗಳನ್ನು ಫಿಟ್ ಆಗಿ ಇರಿಸಿಕೊಳ್ಳಲು ನಾಲ್ಕನೇ 1 ಭಾಗದಷ್ಟು ವಯಾಗ್ರಾ ಮಾತೆ, ಶಿಲಾಜಿತ್ ಹಾಗೂ ವಿಟಮಿನ್ಸ್ಗಳನ್ನು ನೀಡಲು ಆರಂಭಿಸಿದ್ದಾರೆ. ಫೈಟ್ ಆರಂಭವಾಗುವ ಕೆಲವೇ ಹೊತ್ತಿನ ಮುನ್ನ ಕೋಳಿಗಳ ಸಾಮರ್ಥ್ಯ ವೃದ್ಧಿ ಮಾಡುವ ನಿಟ್ಟಿನಲ್ಲ ಈ ಡ್ರಗ್ಸ್ಗಳನ್ನು ನೀಡಲಾಗುತ್ತಿದೆ.
ಈ ಡ್ರಗ್ಗಳು ಅಲ್ಪಾವಧಿಗೆ ಕೋಳಿಗಳ ಸಾಮರ್ಥ್ಯವನ್ನು ವೃದ್ಧಿ ಮಾಡುವುದು ಖಚಿತವಾದರೂ, ದೀರ್ಘಾವಧಿಯಲ್ಲಿ ಈ ಫಲಿತಾಂಶ ಹಾನಿಕಾರಕವಾಗಿದೆ. ಅನೇಕ ತಳಿಗಾರರು ತಮ್ಮ ಕೋಳಿಗಳಿಗೆ ಕಾಮೋತ್ತೇಜಕ ಮಾತ್ರೆಗಳನ್ನು ಸಹ ತಿನ್ನಿಸುತ್ತಿದ್ದಾರೆ. ಈ ಮಾತ್ರೆಗಳು ಕೇವಲ ಮಾನವ ಬಳಕೆ ಮಾತ್ರವೇ ಯೋಗ್ಯವಾಗಿದೆ.
ಇದೇ ಮೊದಲ ಬಾರಿಗೆ ಪಕ್ಷಿಗಳಿಗೆ ಇಂತಹ ಹಾರ್ಮೋನ್-ಉತ್ತೇಜಕ ಔಷಧಿಗಳನ್ನು ನೀಡಲಾಗುತ್ತಿದೆ. ಆದ್ದರಿಂದ ಈ ಔಷಧಿಗಳು ಫೈಟರ್ ಹುಂಜಗಳ ಹೋರಾಟದ ಉತ್ಸಾಹವನ್ನು ಹೆಚ್ಚಿಸುತ್ತದೆಯೇ ಅಥವಾ ಇಲ್ಲವೇ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ.
ಕೋಳಿ ಅಂಕ ನೋಡಲು ಬರುವವರು ಗೆಲ್ಲುವ ಹುಂಜಕ್ಕೆ ಬಾಜಿ ಕಟ್ಟುತ್ತಾರೆ. ಅಚ್ಚರಿ ಎಂದರೆ ನೂರಾರು ಕೋಟಿ ಬೆಟ್ಟಿಂಗ್ ದಂಧೆ ಇದರಲ್ಲಿ ನಡೆಯುತ್ತದೆ. ರಾಣಿಖೇತ್ನ ಕಾರಣದಿಂದಾಗಿ ಇಲ್ಲಿಯವರೆಗೂ ಉತ್ತಮ ಗುಣಮಟ್ಟದ ಫೈಟರ್ ಹುಂಜಗಳನ್ನು ಹುಡುಕಲು ಸಾಧ್ಯವಾಗಿಲ್ಲ ಎಂದು ಕೋಳಿ ಸಾಕಾಣೆ ಮಾಡುವವರು ಹೇಳಿದ್ದಾರೆ. ಕೋಳಿ ಅಂಕ ಸ್ಪರ್ಧೆಯಲ್ಲಿ ಕೋಳಿಯ ತೂಕ ಹಾಗೂ ಜಾಣತನ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ರಿಂಗ್ನಲ್ಲಿ ಕೋಳಿಗಳು ದೀರ್ಘಕಾಲದವರೆಗೂ ಕಾದಾಟವಾಡಬೇಕು ಎನ್ನುವ ನಿಟ್ಟಿನಲ್ಲಿ ಅವುಗಳಿಗೆ ವಯಾಗ್ರ ಮಾತ್ರೆಯನ್ನು ನೀಡುತ್ತಿದ್ದಾರೆ.