ನವದೆಹಲಿ : ಕೇಂದ್ರ ಸರ್ಕಾರ ಶುಕ್ರವಾರ ಜನವರಿಯಿಂದ ಮಾರ್ಚ್ 2024 ತ್ರೈಮಾಸಿಕಕ್ಕೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಪರಿಷ್ಕರಣೆ ಮಾಡಿದೆ. ಇದು ಸುಕನ್ಯಾ ಸಮೃದ್ಧಿ ಯೋಜನೆ (SSY) ಮತ್ತು ಮೂರು ವರ್ಷಗಳ ಸಮಯದ ಠೇವಣಿ ದರಗಳನ್ನು 20 ಬೇಸಿಸ್ ಪಾಯಿಂಟ್ಸ್ವರೆಗೆ ಹೆಚ್ಚಿಸಿದರೆ, ಇತರ ಸಣ್ಣ ಉಳಿತಾಯ ಯೋಜನೆಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕೇಂದ್ರ ಸರ್ಕಾರವು, ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಸರ್ಕಾರವು ಪ್ರತಿ ತ್ರೈಮಾಸಿಕದಲ್ಲಿ ಪರಶೀಲನೆ ಮಾಡಿ, ಬದಲಾವಣೆ ಆಗಬೇಕಿದ್ದಲ್ಲಿ ತಿಳಿಸುತ್ತದೆ.
ಹಿಂದಿನ ಪ್ರಕಟಣೆಯ ವೇಳೆ ಐದು ವರ್ಷಗಳ ಆರ್ಡಿ ದರಗಳಲ್ಲಿ ಅಲ್ಪ ಪ್ರಮಾಣದ ಹೆಚ್ಚಳವನ್ನು ಹೊರತುಪಡಿಸಿ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಸರ್ಕಾರವು ಸಣ್ಣ ಉಳಿತಾಯ ಬಡ್ಡಿದರಗಳನ್ನು ಸ್ಥಿರವಾಗಿ ಇರಿಸಿತ್ತು. ಪಿಪಿಎಫ್ಅನ್ನು ಏಪ್ರಿಲ್-ಜೂನ್ 2020 ತ್ರೈಮಾಸಿಕದಲ್ಲಿ 7.9% ರಿಂದ 7.1% ಕ್ಕೆ ಕಡಿತಗೊಳಿಸಿದ ಬಳಿಕ ಇದು ಬದಲಾಗದೇ ಉಳಿಸಿದೆ. ಅದಕ್ಕೂ ಮೊದಲು, ಇದನ್ನು ಜುಲೈ-ಸೆಪ್ಟೆಂಬರ್ 2019 ರಲ್ಲಿ ಕಡಿತಗೊಳಿಸಲಾಯಿತು. ಇದನ್ನು ಕೊನೆಯದಾಗಿ ಅಕ್ಟೋಬರ್-ಡಿಸೆಂಬರ್ 2018 ರಲ್ಲಿ 7.6% ರಿಂದ 8% ಗೆ ಹೆಚ್ಚಿಸಲಾಗಿತ್ತು.
ಸೀನಿಯರ್ ಸಿಟಿಜನ್ ಉಳಿತಾನ ಯೋಜನೆ (ಎಸ್ಸಿಎಸ್ಎಸ್)ಕುರಿತು ಹೇಳುವುದಾದರೆ, ಸತತ ಎರಡು ತ್ರೈಮಾಸಿಕಗಳ ಮೇಲ್ಮುಖ ಪರಿಷ್ಕರಣೆಗಳ ನಂತರ ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಬಡ್ಡಿದರವನ್ನು 8.2% ನಲ್ಲಿ ಸ್ಥಿರವಾಗಿ ಇರಿಸಲಾಗಿದೆ. ಏಪ್ರಿಲ್-ಜೂನ್ ಅವಧಿಯಲ್ಲಿ ಬಡ್ಡಿ ದರವನ್ನು ಶೇ.8ರಿಂದ ಶೇ.8.2ಕ್ಕೆ ಏರಿಸಲಾಗಿತ್ತು. ಇದರಿಂದಾಗಿ ಈಗ ಸುಕನ್ಯಾ ಸಮೃದ್ಧಿ ನಿಧಿ ಹಾಗೂ ಹಿರಿಯನ ನಾಗರೀಕರ ಠೇವಣಿಗಳಿಗೆ ಒಂದೇ ಪ್ರಮಾಣದ ಬಡ್ಡಿದರವನ್ನು ಸರ್ಕಾರ ನಿಗಧಿ ಮಾಡಿದಂತಾಗಿದೆ. ಎರಡೂ ಯೋಜನೆಗಳಿಗೆ ಕೇಂದ್ರ ಸರ್ಕಾರ ಶೇ. 8.2ರಷ್ಟು ಬಡ್ಡಿ ನೀಡಲಿದೆ.