ಅನೇಕ ಜನರು ತೂಕ ಇಳಿಸಿಕೊಳ್ಳಲು ವಿವಿಧ ವಿಧಾನಗಳನ್ನು ಪ್ರಯತ್ನಿಸುತ್ತಾರೆ. ಆದರೆ, ಯಾವುದೇ ಫಲಿತಾಂಶ ಸಿಗ್ತಾ ಇಲ್ಲ ಅಂತ ಚಿಂತಿಸುತ್ತಾರೆ. ಆದ್ದರಿಂದ ತೂಕ ಇಳಿಸುವ ಯೋಚನೆ ನಿಮ್ಮಲ್ಲಿದ್ದರೆ ಒಮ್ಮೆ ಈ ಕೆಳಗಿನ ವಿಧಾನದಲ್ಲಿ ಆಯಪಲ್ ಜ್ಯೂಸ್ ಮಾಡಲು ಪ್ರಯತ್ನಿಸಿ. ತೂಕ ಇಳಿಸುವ ಈ ಆಯಪಲ್ ಜ್ಯೂಸ್ ಅನ್ನು ಬೆಳಗ್ಗೆ ಮತ್ತು ಸಂಜೆ ಕುಡಿದರೆ ಒಂದೇ ವಾರದಲ್ಲಿ ನಿಮ್ಮ ದೇಹದಲ್ಲಿ ವ್ಯತ್ಯಾಸ ಕಾಣುವುದು.
ತೂಕ ನಷ್ಟಕ್ಕೆ ಆಯಪಲ್ ಜ್ಯೂಸ್ ತಯಾರಿಸುವುದು ತುಂಬಾ ಸುಲಭ. ಒಂದು ಗ್ರೀನ್ ಟೀ ಪ್ಯಾಕೆಟ್, ಒಂದು ಕಪ್ ಕತ್ತರಿಸಿದ ಸೇಬು, 1/4 ಕಪ್ ಶುಂಠಿ, 2 ಚಮಚ ಆಯಪಲ್ ಸೈಡರ್ ವಿನೆಗರ್ ಮತ್ತು ಮೂರು ಚಮಚ ನಿಂಬೆ ರಸ ತೆಗೆದುಕೊಳ್ಳಿ. ಮೊದಲು ಗ್ರೀನ್ ಟೀ ಬ್ಯಾಗ್ ತೆಗೆದುಕೊಂಡು ಅದನ್ನು 200 ಮಿಲಿ ಬಿಸಿ ನೀರಿನಲ್ಲಿ ಚೆನ್ನಾಗಿ ನೆನೆಸಿ. ನಂತರ ಮಿಕ್ಸಿಂಗ್ ಜಾರ್ ತೆಗೆದುಕೊಂಡು ಅದಕ್ಕೆ 1 ಕಪ್ ಮಧ್ಯಮ ಗಾತ್ರದ ಸೇಬನ್ನು ಸೇರಿಸಿ. ಇದಕ್ಕೆ ತುರಿದ ಶುಂಠಿ, ಆಪಲ್ ಸೈಡರ್ ವಿನೆಗರ್ ಮತ್ತು ನಿಂಬೆ ರಸವನ್ನು ಸೇರಿಸಿ. ಈಗಾಗಲೇ ಸಿದ್ಧಪಡಿಸಿದ ಗ್ರೀನ್ ಟೀ ನೀರು ಸೇರಿದಂತೆ ಎಲ್ಲ ಪದಾರ್ಥಗಳನ್ನು ಸೇರಿಸಿ. ಚೆನ್ನಾಗಿ ತಣ್ಣಗಾದ ನಂತರವೇ ಮಿಶ್ರಣ ಮಾಡಿ.
ಎಲ್ಲ ಸಾಮಗ್ರಿಗಳನ್ನು ಮಿಶ್ರಣ ಮಾಡಿ, ಮಿಕ್ಸಿಯಲ್ಲಿ ಪೇಸ್ಟ್ ರೀತಿಯಲ್ಲಿ ರುಬ್ಬಿಕೊಳ್ಳಿ. ಈ ಸಿದ್ಧಪಡಿಸಿದ ತೂಕ ನಷ್ಟ ರಸವನ್ನು ಫಿಲ್ಟರ್ ಮಾಡಬಾರದು. ಇದನ್ನು ಒಂದು ಟಂಬ್ಲರ್ನಲ್ಲಿ ಸುರಿದು ಕುಡಿಯಿರಿ.
ಅಧಿಕ ತೂಕವು ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು. ಸ್ಥೂಲಕಾಯತೆಯು ಮನಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಮಾನಸಿಕ ಆರೋಗ್ಯವೂ ಹದಗೆಡುತ್ತದೆ. ಅಧಿಕ ತೂಕದ ಜೊತೆಗೆ ಉಸಿರಾಟದ ಸಮಸ್ಯೆಗಳೂ ಬರುತ್ತವೆ. ದೇಹದಲ್ಲಿ ಹೆಚ್ಚಿನ ಕೊಬ್ಬು ಇದ್ದರೆ, ಶ್ವಾಸಕೋಶದ ಶ್ವಾಸನಾಳಗಳು ಸಂಕುಚಿತಗೊಳ್ಳುತ್ತವೆ. ಹೀಗಾಗಿ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ.