ಬೆಂಗಳೂರು : ಸ್ಪರ್ಧಾತ್ಮಕ ಪರಿಕ್ಷೆಗೆ ತಯಾರಾದವನು ಮಾಡಿದ್ದು ಮಾತ್ರ ಕಿಡ್ನಾಪ್ ಮಾಡುವ ಉದ್ಯೋಗ ಮಗನ ಐಎಎಸ್, ಐಪಿಎಸ್ ಕನಸು ಕಂಡ ಪೊಷಕರೇ ಈಗ ಶಾಕ್ ಆಗಿ ಕುಳಿತಿದ್ದಾರೆ
ಈ ಯುವಕನ ತಂದೆ ತಾಯಿ ಐಎಎಸ್, ಐಪಿಎಸ್ ಆಗುವ ಕನಸು ಕಾಣುತ್ತಿದ್ದನು. ಅದಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಕೂಡ ನಡೆಸುತ್ತಿದ್ದನು. ದೊಡ್ಡ ಹುದ್ದೆಯ ಕನಸು ಕಂಡಿದ್ದ ಈತ ಮಾಡಿದ್ದು ಉದ್ಯಮಿಯ ಕಿಡ್ನಾಪ್. ಸದ್ಯ ಪ್ರಕರಣ ಸಂಬಂಧ ಪೊಲೀಸರು ಯುವಕ ಸೇರಿದಂತೆ ಇಬ್ಬರನ್ನು ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ.
ಸಚಿನ್, ಗೌರಿಶಂಕರ್ ಬಂಧಿತ ಆರೋಪಿಗಳಾಗಿದ್ದು,ರಾಜಾಜಿನಗರದಲ್ಲಿ ಇದೇ ತಿಂಗಳ 5ರಂದು ಕಿಡ್ನಾಪ್ ಮಾಡುವ ಪ್ಲಾನ್ ಹಾಕಿ ಕೆಲಸ ಮುಗಿಸಿದ್ದಾರೆ.
ಸೆಂಟ್ ಜೋಸೆಫ್ ಕಾಲೇಜಿನ ಬಿಬಿಎ ಸೀಟ್ ಗೆ ಓಡಾಡುತಿದ್ದ ಉದ್ಯಮಿ ಈ ವೇಳೆ ಸಚಿನ್ ನನ್ನು ಸಂಪರ್ಕಿಸಿದ್ದ ಉದ್ಯಮಿ.. ಆದರೆ ಕಾಲೇಜಿನ ನಿಯಮದ ಪ್ರಕಾರವೇ ಉದ್ಯಮಿ ಮಗಳಿಗೆ ಸೀಟ್ ಸಿಕ್ಕಿತ್ತು ಆದರೇ ಆ ಸೀಟ್ ನನ್ನಿಂದಲೇ ಸಿಕ್ಕಿದೆ ಎಂದು ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಸಚಿನ್ ಆದರೆ ಹಣಕೊಡಲು ಉದ್ಯಮಿ ಚೇತನ್ ಷಾ ನಿರಾಕರಣೆ
ಹಾಗಾಗಿ ಹಣಕೊಡದಿದ್ದಕ್ಕೆ ತನ್ನ ಜಿಮ್ ಸಹಪಾಟಿಗಳ ಜೊತೆಗೂಡಿ ಕಿಡ್ನಾಪ್ ಸ್ಕೆಚ್ ಹಾಕಿದ್ದು ಆಟೋದಲ್ಲಿ ಬಂದು ಉದ್ಯಮಿ ಕಾರ್ ತಡೆದು ಹಾಡಹಗಲೇ ಕಿಡ್ನಾಪ್ ಆ ಬಳಿಕ ಉದ್ಯಮಿ ಮನೆಗೆ ಓರ್ವನ ಕಳುಹಿಸಿ 7 ಲಕ್ಷ ಹಣ ಪಡೆದಿದ್ದರು.. ಈ ವೇಳೆ ಬೆಂಗಳೂರನ್ನು ಕಾರ್ ನಲ್ಲೇ ಉದ್ಯಮಿ ಸಮೇತ ಓಡಾಡಿಕೊಂಡಿದ್ದರು.
ಹಣ ಸಿಕ್ಕ ಬಳಿಕ ಉದ್ಯಮಿ ಚೇತನ್ ಬಿಟ್ಟು ಕಳುಹಿಸಿದ್ದರು ಇದಾದ ಬಳಿಕ ಉದ್ಯಮಿಯಿಂದ ರಾಜಾಜಿನಗರ ಠಾಣೆಗೆ ದೂರು ನೀಡಲಾಗಿದ್ದು ದೂರು ಹಿನ್ನಲೆ ಇಬ್ಬರ ಬಂಧಿಸಿದ ರಾಜಾಜಿನಗರ ಪೊಲೀಸರು ಬಂಧಿತರಿಂದ 7 ಲಕ್ಷ ನಗದು, ಮೊಬೈಲ್ ಫೋನ್ ಗಳು ವಶಕ್ಕೆ ಪಡೆದಿದ್ದರು.