ದೇಶದಾದ್ಯಂತ ಅಯೋಧ್ಯೆಯಲ್ಲಿ ನಡೆಯುವ ರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾ ಪೂಜೆ ಎಲ್ಲರ ಗಮನ ಸೆಳೆದಿದೆ. ಆದರೆ ಕಾಂಗ್ರೆಸ್ ನಾಯಕರು ಮಾತ್ರ ನಾವು ಅಯೋಧ್ಯೆ ಬರಲ್ಲ ಅಂತ ಹೇಳಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಆದರೆ ಈ ಮಧ್ಯೆಯೇ ಕೈ ಸಚಿವನೊಬ್ಬ ನಾನು ಹೋಗೆ ಹೋಗುತ್ತೇನೆ ಎಂದು ಹೇಳಿದ್ದಾರೆ.
ಹೌದು, ಹಿಮಾಚಲ ಪ್ರದೇಶದ ಲೋಕೋಪಯೋಗಿ ಇಲಾಖೆ ಸಚಿವ ವಿಕ್ರಮಾದಿತ್ಯ ಸಿಂಗ್, “ನಾನು ನನ್ನ ಹಿಂದಿನ ಹೇಳಿಕೆಗೆ ಬದ್ಧನಾಗಿರುತ್ತೇನೆ. ನಾನು ಅಯೋಧ್ಯೆಗೆ ಭೇಟಿ ನೀಡಲು ಉದ್ದೇಶಿಸಿರುವುದು ರಾಜಕಾರಣಿಯಾಗಿ ಅಲ್ಲ, ಆದರೆ ಭಗವಾನ್ ರಾಮನ ನಿಷ್ಠಾವಂತ ಅನುಯಾಯಿಯಾಗಿದ್ದ ದಿವಂಗತ ವೀರಭದ್ರ ಸಿಂಗ್ ಅವರ ಮಗನಾಗಿ ಅಯೋಧ್ಯೆಗೆ ಹೋಗ್ತೀನಿ ಎಂದಿದ್ದಾರೆ.
ವಿಕ್ರಮಾದಿತ್ಯ ಸಿಂಗ್ ಅವರನ್ನು ಅಯೋಧ್ಯೆಯಲ್ಲಿ ರಾಮಮಂದಿರ ಪ್ರತಿಷ್ಠಾಪನೆ ಸಮಾರಂಭಕ್ಕೆ ಆರ್ಎಸ್ಎಸ್-ವಿಎಚ್ಪಿ ಆಹ್ವಾನಿಸಿತ್ತು. ಆಹ್ವಾನವನ್ನು ಸ್ವೀಕರಿಸಿದ ಅವರು, “ಇದು ರಾಜಕೀಯ ವಿಷಯವಲ್ಲ. ಹಿಮಾಚಲ ಪ್ರದೇಶದಿಂದ ಆಯ್ದ ಆಹ್ವಾನಿತರಲ್ಲಿ ಒಬ್ಬನಾಗಿರುವುದು ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ ಎಂದು ಹೇಳಿದರು.