ನೋಯ್ಡಾ: ಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಸಮರೋಪಾದಿಯಲ್ಲಿ ಸಿದ್ಧತೆ ನಡೆಯುತ್ತಿದೆ. ಜ.22 ರಂದು ಭವ್ಯವಾದ ರಾಮಮಂದಿರ ಉದ್ಘಾಟನೆಯಾಗಲಿದ್ದು, ಅದೇ ದಿನ ರಾಮಲಲ್ಲಾ (ಬಾಲ ರಾಮ) ಗರ್ಭಗುಡಿಯಲ್ಲಿ ಆಸೀನರಾಗಲಿದ್ದಾರೆ. ರಾಮಮಂದಿರದ ಮೊದಲ ಮಹಡಿ ಸಂಪೂರ್ಣವಾಗಿ ಸಿದ್ಧವಾಗಿದ್ದು, ಉತ್ತರ ಪ್ರದೇಶ ಸರ್ಕಾರ ಶೀಘ್ರದಲ್ಲೇ ನೋಯ್ಡಾದಿಂದ ಅಯೋಧ್ಯೆಗೆ ಡೈರೆಕ್ಟ್ ಬಸ್ಗಳನ್ನು ಓಡಿಸಲು ಯೋಜಿಸುತ್ತಿದೆ.
ಈ ಸಂಬಂಧ ನೊಯ್ಡಾ ಸಹಾಯಕ ಪ್ರಾದೇಶಿಕ ವ್ಯವಸ್ಥಾಪಕ ಎನ್ಪಿ ಸಿಂಗ್ ಪ್ರತಿಕ್ರಿಯಿಸಿ, ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ ನೋಯ್ಡಾ ಡಿಪೋ ಶೀಘ್ರದಲ್ಲೇ ಅಯೋಧ್ಯೆಗೆ ಡೈರೆಕ್ಟ್ ಬಸ್ಗಳನ್ನು ಪ್ರಾರಂಭಿಸಲಿದೆ. ಸದ್ಯ ನೋಯ್ಡಾ ಡಿಪೋದಿಂದ ಅಯೋಧ್ಯೆಗೆ ನೇರ ಬಸ್ಗಳಿಲ್ಲ. ಸಿಎನ್ಜಿ ಬಸ್ಗಳು ಒಂದೇ ಬಾರಿಗೆ ಅಷ್ಟು ದೂರ ಕ್ರಮಿಸಲು ಸಾಧ್ಯವಿಲ್ಲ. ಫುಲ್ ಟ್ಯಾಂಕ್ನಲ್ಲಿ ಸಿಎನ್ಜಿ ಬಸ್ 500 ಕಿ.ಮೀ ವರೆಗೆ ಕ್ರಮಿಸುತ್ತದೆ. ನೋಯ್ಡಾದಿಂದ ಅಯೋಧ್ಯೆಗೆ ಸುಮಾರು 650 ಕಿಮೀ ದೂರವಿದೆ. ಈ ಸಂದರ್ಭದಲ್ಲಿ ನೋಯ್ಡಾ ಡಿಪೋ ಲಕ್ನೋದಲ್ಲಿ ಸಿಎನ್ಜಿ (ಗ್ಯಾಸ್) ತುಂಬುವ ಸೌಲಭ್ಯವನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಟಿಕೆಟ್ ದರ: ಬಸ್ ಟಿಕೆಟ್ ದರ ಇನ್ನೂ ಅಂತಿಮಗೊಂಡಿಲ್ಲ. ಅಂತಿಮ ನಿರ್ಧಾರ ತೆಗೆದುಕೊಂಡ ನಂತರ ಘೋಷಣೆ ಮಾಡಲಾಗುವುದು. ಲಕ್ನೋದ ಕೇಂದ್ರ ಕಚೇರಿಯಿಂದ ನಿರ್ದೇಶನಗಳನ್ನು ಸ್ವೀಕರಿಸಿದ್ದೇವೆ. ಅಯೋಧ್ಯೆಗೆ ಒಂದು ಅಥವಾ ಎರಡು ಬಸ್ಗಳ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಆ ಬಳಿಕ ಬೇಡಿಕೆ ಹೆಚ್ಚಾದರೆ ಹೆಚ್ಚಿನ ಬಸ್ಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಅಧಿಕಾರಿ ವಿವರಿಸಿದರು