ಈ ಸಮಯದಲ್ಲಿ ಚಳಿಗಾಲದ ಸುಗ್ಗಿಯು ಕೃಷಿ ಸಮುದಾಯಗಳಿಗೆ ಮಹತ್ತರವಾದ ಹಬ್ಬವಾಗಿದೆ. ಭಾರತೀಯ ರಾಜ್ಯಗಳಾದ್ಯಂತ ಇದನ್ನು ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ಕೆಲವರು ಮಕರ ಸಂಕ್ರಾಂತಿ ಎಂದು ಆಚರಿಸಿದರೆ ಇನ್ನೂ ಕೆಲವರು ಪೊಂಗಲ್ ಎಂದು ಆಚರಿಸುತ್ತಾರೆ.
ಮಾರುಕಟ್ಟೆಯಲ್ಲಿ ಎಳ್ಳು ಬೆಲ್ಲದ ಪ್ಯಾಕೇಟ್ ಮಾರಾಟವಾಗುತ್ತಿದ್ದು ನಾವು ಅದನ್ನು ತೆಗದುಕೊಂಡ ಬಂದು ಪೂಜೆ ಮಾಡಿ ತಿನ್ನುತ್ತಾರೆ ಹಾಗೆ ಆರೋಗ್ಯಕ್ಕೂ ಎಷ್ಟು ಉಪಯುಕ್ತ ಹಾಗೆ ಏನಿದು ಎಳ್ಳು-ಬೆಲ್ಲ? ಎಲ್ಲಾ ಮಾಹಿತಿ ಇಲ್ಲಿದೆ ನೋಡಿ!
ಸಂಕ್ರಾಂತಿ ಹಬ್ಬದ ಸಮಯದಲ್ಲಿ ಪ್ರತಿ ಮನೆಮನೆಗೆ ಹೋಗಿ ಎಳ್ಳು ಬೆಲ್ಲ ನೀಡುವುದು ಹಳೆಯ ಕಾಲದಿಂದಲೂ ನಡೆದುಕೊಂಡು ಬಂದ ಪದ್ದತಿ. ಜೊತೆಗೆ ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಎಂದು ಹೇಳುವುದುಂಟು.