ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಣಿಪುರಕ್ಕೆ ತೆರಳಿದ್ದಾರೆ. ಹೆಚ್ ಎಎಲ್ ನಿಂದ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿರುವ ಮುಖ್ಯಮಂತ್ರಿಗಳು ಇಂದು ಮಣಿಪುರದಲ್ಲಿ ನಡೆಯಲಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿಎಂ ಅವರಿಗೆ ಗೃಹ ಸಚಿವ ಜಿ.ಪರಮೇಶ್ವರ್ ಸಾಥ್ ನೀಡಿದ್ದಾರೆ.
ಇಂದಿನಿಂದ ಭಾರತ್ ನ್ಯಾಯ್ ಯಾತ್ರೆ ಎಂಬ ಹೆಸರಿನಲ್ಲಿ ಮಣಿಪುರದಿಂದ ಮಹಾರಾಷ್ಟ್ರದ ಕಡೆಗೆ ರಾಹುಲ್ ಗಾಂಧಿ ಯಾತ್ರೆ ಮಾಡಲಿದ್ದಾರೆ. ಮಣಿಪುರದಿಂದ ಮುಂಬೈಗೆ 67 ದಿನಗಳ ಅವಧಿಯಲ್ಲಿ ಪಾದಯಾತ್ರೆ ಮಾಡಲಿದ್ದಾರೆ. ಇಂದಿನಿಂದ ಮಾರ್ಚ್ 20 ರವರೆಗೆ ಇಂಫಾಲ್ನಿಂದ ಮುಂಬೈಗೆ ಯಾತ್ರೆ ಪ್ರಯಾಣಿಸಲಿದೆ.
ಭಾರತ್ ಜೋಡೋ ನ್ಯಾಯ್ ಯಾತ್ರೆಯು 66 ದಿನಗಳಲ್ಲಿ ಬಸ್ಸುಗಳು ಮತ್ತು ಕಾಲ್ನಡಿಗೆಯಲ್ಲಿ 6,713 ಕಿ.ಮೀಗಳನ್ನು ಕ್ರಮಿಸುವ ಗುರಿ ಹೊಂದಿದೆ. ಈ ಪಯಣದುದ್ದಕ್ಕೂ 14 ರಾಜ್ಯಗಳು, 110 ಜಿಲ್ಲೆಗಳು, 100 ಲೋಕಸಭಾ ಸ್ಥಾನಗಳು ಮತ್ತು 337 ವಿಧಾನಸಭಾ ಕ್ಷೇತ್ರಗಳನ್ನು ದಾಟಿ, ಮಾರ್ಚ್ 20 ರಂದು ಮುಂಬೈನಲ್ಲಿ ಯಾತ್ರೆ ಮುಕ್ತಾಯಗೊಳ್ಳಲಿದೆ.