ಬೆಂಗಳೂರು: ಆರ್.ಟಿ.ಓ ಅಧಿಕಾರಿಗಳ ಯಡವಟ್ಟಿನಿಂದ ವ್ಯಕ್ತಿಯ ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ಹುಸ್ಕೂರಿನಲ್ಲಿರುವ ಆರ್.ಟಿ.ಓ ದಲ್ಲಿ ನಡೆದಿದೆ ಡ್ರೈವರ್ ವಸಂತ್ ಕುಮಾರ್ ಅನುಮಾನಸ್ಪದ ಸಾವನ್ನಪ್ಪಿದ್ದು ಇದೇ ತಿಂಗಳ 10ನೇ ತಾರೀಖಿನಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ..
ಪೀಣ್ಯ 2 ನೇ ಹಂತದಿಂದ ಲಾರಿ ಡ್ರೈವ್ ಮಾಡಿಕೊಂಡು ಹೋಗಿದ್ದ ವಸಂತ್ 9 ನೇ ತಾರೀಖಿನಂದು ಎಲೆಕ್ಟ್ರಾನಿಕ್ ಸಿಟಿ ಬಳಿ ಡ್ರೈವ್ ಮಾಡಿಕೊಂಡು ಹೋಗುವಾಗ ಆರ್.ಟಿ.ಓ ಅಧಿಕಾರಿಗಳು ಹಿಡಿದಿದ್ದಾರೆ ನಂತರ ಲಾರಿ ಡಾಕ್ಯೂಮೆಂಟ್ಸ್ ಲ್ಯಾಪ್ಸ್ ಆಗಿದೆ ಅಂತ ಲಾರಿ ಸೀಜ್ ಮಾಡಿದ್ದಾರೆ
ಸೀಜ್ ಮಾಡಿ ಎಲೆಕ್ಟ್ರಾನಿಕ್ ಆರ್.ಟಿ.ಓ ಕಚೇರಿಗೆ ಲಾರಿಯನ್ನು ತೆಗೆದುಕೊಂಡು ಹೋಗಿದ್ದಾರೆ ಆರ್.ಟಿ.ಓ ಇನ್ಸ್ಪೆಕ್ಟರ್ ಮತ್ತು ತಂಡದಿಂದ ಲಾರಿ ಪರಿಶೀಲನೆ ಮಾಡಿ ನಂತರ ಸೀಜ್ ಮಾಡಿದ್ದಾರೆ.. ಆಗ ವಸಂತ್ ಲಾರಿ ಮಾಲಾಕನಿಗೆ ಮಾಹಿತಿ ನೀಡಿದ್ದಾರೆ.. ಲಾರಿ ಮಾಲೀಕ ಬೆಳಿಗ್ಗೆ ನೋಡಿಕೊಳ್ಳೋಣ ಎಂದಿದ್ದಾರೆ ಆಗ ಲಾರಿಯಲ್ಲಿಯೇ ರಾತ್ರಿ ಇಡೀ ಮಲಗಿದ್ದ ವಸಂತ್..
ಬೆಳಗ್ಗೆ ಆರ್.ಟಿ.ಓ ಕಚೇರಿಯ ಒಳಭಾಗದಲ್ಲಿಯೇ ಮಲಗಿದ್ದ ಲಾರಿಯಲ್ಲಿ ಸಾವನಪ್ಪಿದ್ದ ವಸಂತ್ ಹೃದಯಾಘಾತದಿಂದ ಸಾವನಪ್ಪಿದ್ದಾರೆಂದು ದೂರು ನೀಡಿರುವ ಆರ್.ಟಿ.ಓ ಸಿಬ್ಬಂದಿ ಅದರಂತೆ ಪರಪ್ಪನಅಗ್ರಹಾರ ಪೊಲೀಸರು ಸಹ ಯುಡಿಆರ್ ದಾಖಲು ಮಾಡಿಕೊಂಡಿದ್ದಾರೆ..
ಆದ್ರೆ ಇಲ್ಲಿ ಸಾಕಷ್ಟು ಅನುಮಾನ ವ್ಯಕ್ತವಾಗುತ್ತಿದೆ ಡ್ರೈವರ್ ವಸಂತ್ ಗೆ ಮಾನಸಿಕವಾಗಿ ಬೈದಿದ್ದರು ಎಂಬಾ ಆರೋಪವಿದ್ದು ಆರ್.ಟಿ.ಓ ಸಿಬ್ಬಂದಿಗಳು ಡ್ರೈವರ್ ಗೆ ರಾತ್ರಿ ಕಿರುಕುಳ ನೀಡಿದ್ರಾ ಎಂಬಾ ಆರೋಪ ಕೂಡ ಇದ್ದು ಆರ್.ಟಿ.ಓ ಕಚೇರಿಯಲ್ಲಿ ಯಾವ ಕಾರಣಕ್ಕಾಗಿ ಮಲುಗಲು ಬಿಟ್ರು ಎಂಬಾ ಪ್ರಶ್ನೆ ಈಗ ಎಲ್ಲರನ್ನ ಕಾಡಿದೆ ಹಾಗೆ ರಾತ್ರಿ ಮಲಗಿದ್ದ ವಸಂತ್ ಕುಮಾರ್ ಬೆಳಿಗ್ಗೆ ಸಾವನಪ್ಪಿದ್ದು ಹೇಗೆ? ಈ ರೀತಿಯಾಗಿ ಸಾಕಷ್ಟು ಪ್ರಶ್ನೆಗಳು ಇದೀಗ ಮೂಡುತ್ತಿದೆ.
ಯಾರ ಗಮನಕ್ಕು ಬಾರದ ಹಾಗೆ ಮೃತ ದೇಹವನ್ನು ಸಾಗಿಸಿದ ಆರ್.ಟಿ.ಓ ಅಧಿಕಾರಿಗಳು ಈ ಬಗ್ಗೆ ಆರ್.ಟಿ.ಓ ಅಧಿಕಾರಿಗಳನ್ನು ಕೇಳಿದ್ರೆ ನಮಗೆ ಗೊತ್ತಿಲ್ಲ ಎಂಬಾ ಉಡಾಫೆ ಉತ್ತರ ನೀಡಿದ್ದು ಹೀಗಾಗಿ ವಸಂತ್ ಕುಮಾರ್ ರ ಸಾವಿನ ಸುತ್ತ ಅನುಮಾನಗಳ ಹುತ್ತಾ ಆರ್.ಟಿ.ಓ ಅಧಿಕಾರಿಗಳ ತಾಳಕ್ಕೆ ತಕ್ಕಂತೆ ಕುಣಿದ್ರಾ ಪರಪ್ಪನ ಅಗ್ರಹಾರ ಪೊಲೀಸರು ಎಂಬಾ ಅನುಮಾನ ಕೂಡ ಎಲ್ಲರನ್ನ ಕಾಡುತ್ತಿದೆ ಇದಕ್ಕೆ ಸರಿಯಾದ ತನಿಖೆ ಬಳಿಕನೇ ಉತ್ತರ ಕಂಡುಕೊಳ್ಳಬೇಕಾಗಿದೆ.