ಬೆಂಗಳೂರು: ಬಿಎಂಟಿಸಿ, ಕಿಲ್ಲರ್ ಬಿಎಂಟಿಸಿ ಎಂಬೆಲ್ಲಾ ಹಣೆಪಟ್ಟಿ ಕಟ್ಟಿಕೊಳ್ಳುತ್ತಿದೆ. ಆದರೆ ಬಿಎಂಟಿಸಿ ಪ್ರಕಾರ ಸಂಸ್ಥೆಯ ಚಾಲಕರ ನಿರ್ಲಕ್ಷ್ಯ ಮಾತ್ರವೇ ಇದಕ್ಕೆಲ್ಲ ಕಾರಣ ಅಲ್ಲವಂತೆ. ಹಾಗಾದ್ರೆ ಆಗ್ತಿರೋ ಅಪಘಾತ ಪ್ರಕರಣಗಳಲ್ಲಿ ಬಿಎಂಟಿಸಿ ಪಾತ್ರ ಏನು..? ಬೈಕ್ ಸವಾರರು ಯಾಕೆ ಕಾರಣ? ಅವರ ಸಬೂಬು ಏನು ಅಂತೀರಾ..? ಈ ಸ್ಟೋರಿ ನೋಡಿ..
ಇತ್ತೀಚೆಗೆ ಮೇಲಿಂದ ಮೇಲೆ ವರದಿಯಾಗುತ್ತಿರುವ ಬಿಎಂಟಿಸಿ ಬಸ್ಗಳ ಅಪಘಾತಗಳು ಸಂಸ್ಥೆಯನ್ನ ಮುಜುಗರಕ್ಕೀಡು ಮಾಡಿದೆ. ಬಿಎಂಟಿಸಿ ಬಸ್ ಅಪಘಾತಗಳಲ್ಲಿ ಪ್ರಯಾಣಿಕರು ಸಾವನ್ನಪ್ಪುತ್ತಿದ್ದು, ಇದಕ್ಕೆ ಚಾಲಕರ ನಿರ್ಲಕ್ಷ್ಯದ ಚಾಲನೆಯೇ ಕಾರಣ, ಕಿಲ್ಲರ್ ಬಿಎಂಟಿಸಿ ಅಂತಾ ಆಕ್ರೋಶವೂ ವ್ಯಕ್ತವಾಗಿದೆ.ಆದರೆ ಬಿಎಂಟಿಸಿ ಇದು ನಮ್ಮ ತಪ್ಪಲ್ಲ ಬೈಕ್ ಸವಾರರ ರ್ಯಾಷ್ ಡ್ರೈವಿಂಗ್ ಕಾರಣ ಅಂತ ಸಿಸಿಟಿವಿ ರಿಲೀಸ್ ಮಾಡಿ ಸಾಕ್ಷಿ ಸಮೇತ ವಾದ ಮಾಡ್ತಿದೆ..ಅವುಗಳನ್ನ ಒಂದೊಂದಾಗಿ ತೊರಿಸ್ತಿವಿ ನೋಡಿ..
ಇವು ಬೈಕ್ ಸವಾರ ನಿರ್ಲಕ್ಷ್ಯಕ್ಕೆ ಬಿಎಂಟಿಸಿಗೆ ಸಿಕ್ಕ ಸಾಕ್ಷಿಗಳು. ಬಿಎಂಟಿಸಿಗೆ ಬೈಕ್ ಸವಾರರೇ ತಲೆನೋವಾಗಿದ್ದಾರೆ. ಹೀಗಾಗಿ ಆರ್ಟಿಓ ಹಾಗೂ ಪೊಲೀಸ್ ಇಲಾಖೆ ಕದ ತಟ್ಟೋಕೆ ಬಿಎಂಟಿಸಿ ಮುಂದಾಗಿದೆ. ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆಗೆ ಪತ್ರ ಬರೆದು ಲೈಸನ್ಸ್ ಇಲ್ಲದೆ ಬೈಕ್ ಓಡಿಸುವರ ಮೇಲೆ ಪೊಲೀಸ್ ಹಾಗೂ ಆರ್ ಟಿ ಓ ನಿಗಾ ಇಡಬೇಕು ಅಂತ ಆಗ್ರಹಿಸಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ಬಸ್ ಆಕ್ಸಿಡೆಂಟ್ ರೇಟ್ ಇಳಿಕೆ ಆಗುತ್ತೆ ಎನ್ನುತ್ತಿದೆ ಬಿಎಂಟಿಸಿ.
ಅಲ್ದೆ ನಗರದಲ್ಲಿ ದಿನೇ ದಿನೇ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ರಾಕೆಟ್ ವೇಗದಲ್ಲಿ ಏರ್ತಿರುವ ವಾಹನಗಳಿಂದ ಅಪಘಾತ ಸಂಭವಿಸ್ತಿವೆ. ದೇಶದಲ್ಲಿ ಅತಿ ಹೆಚ್ಚು ಬೈಕ್ ಹೊಂದಿರೋದನ್ನ ಕೂಡ ಅಕ್ಕಿಅಂಶ ಬಿಚ್ಚಿಡ್ತಿದೆ. ಇನ್ನು ಬಿಎಂಟಿಸಿ ಬಸ್ಗಳು ಅಪಘಾತಕ್ಕೀಡಾಗುತ್ತಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಂಸ್ಥೆ ಪ್ರತಿದಿನ ಚಾಲಕರಿಗೆ ಜಾಗೃತಿ ಕುರಿತ ಕಾರ್ಯಾಗಾರಗಳನ್ನ ಹಮ್ಮಿಕೊಳ್ತಿದೆ. ಒಟ್ಟಾರೆ ಲಕ್ಷಾಂತರ ಮಂದಿ ಪ್ರಯಾಣಿಕರ ವಿಶ್ವಾಸಾರ್ಹ ಸಾರಿಗೆ ವ್ಯವಸ್ಥೆಗೆ ಹೆಸರುವಾಸಿಯಾಗಿರುವ ಬಿಎಂಟಿಸಿ ಸುಧಾರಿಸಲಿ. ಹೆಚ್ಚಿನ ಜವಾಬ್ದಾರಿಯೊಂದಿಗೆ ಕೆಲಸ ಮಾಡಲಿ ಅನ್ನೋದೆ ಎಲ್ಲರ ಆಶಯ.