ಬೆಂಗಳೂರು:- ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಂದು ಮಧ್ಯರಾತ್ರಿಯಿಂದಲೇ ಲಾರಿ ಸಂಘಟನೆಗಳು ಮುಷ್ಕರ ಕೈಗೊಳ್ಳಲಿದ್ದಾರೆ. ಮುಷ್ಕರ ಹಿನ್ನೆಲೆ 2 ಲಕ್ಷ ಲಾರಿಗಳ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ದಕ್ಷಿಣ ಭಾರತದ ಲಾರಿ ಮಾಲೀಕರ ಸಂಘಗಳು ಮುಷ್ಕರಕ್ಕೆ ಕರೆಕೊಟ್ಟಿವೆ.ಕರ್ನಾಟಕ ಲಾರಿ ಮಾಲೀಕರ ಸಂಘದಿಂದಲೂ ಮಷ್ಕರಕ್ಕೆ ಬೆಂಬಲ ಸಿಕ್ಕಿದೆ. ಇತ್ತ ಫೆಡರೇಶನ್ ಆಫ್ ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟ್ ಸಂಘ ಮುಷ್ಕರಕ್ಕೆ ಬೆಂಬಲ ನೀಡಿಲ್ಲ. ಇನ್ನು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಹಿಟ್ ಅ್ಯಂಡ್ ರನ್ ಪ್ರಕರಣಗಳಿಗೆ ಕಠಿಣ ಕಾನೂನುಗಳ ವಿರುದ್ಧ ಪ್ರತಿಭಟಿಸಲು ಮುಷ್ಕರಕ್ಕೆ ಕರೆ ನೀಡಲಾಗಿದೆ. ಹೊಸ ಕಾನೂನು ಪ್ರಕಾರ, ರಸ್ತೆಯಲ್ಲಿ ಚಲಿಸುವಾಗ ಲಾರಿಗಳಿಗೆ ಯಾರಾದರೂ ಬಂದು ಅಕಸ್ಮಾತಾಗಿ ಡಿಕ್ಕಿ ಹೊಡೆದರೆ, ಹಾಗೂ ನಮ್ಮ ಚಾಲಕರು ವಾಹನದಲ್ಲಿ ಏನಾದರೂ ತೊಂದರೆ ಉಂಟಾಗಿ ಎದುರಿನ ವಾಹನಕ್ಕೆ ಡಿಕ್ಕಿ ಹೊಡೆದು ಅದರಲ್ಲಿದ್ದ ಪ್ರಯಾಣಿಕರು ಮೃತಪಟ್ಟರೆ ಲಾರಿ ಚಾಲಕರಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ 7 ಲಕ್ಷ ರೂ.ವರೆಗೆ ದಂಡ ಪಾವತಿಸಬೇಕಾದ ಹಿನ್ನೆಲೆ, ಕಾನೂನು ಹಿಂಪಡೆಯುವಂತೆ ಆಗ್ರಹಿಸಿ ಮುಷ್ಕರ ಕೈಗೊಳ್ಳಲಾಗುತ್ತಿದೆ. ಅತ್ಯಗತ್ಯ ಸೇವೆಗಳನ್ನ ಹೊರತುಪಡಿಸಿ ಕೆಲ ಸೇವೆಗಳು ವಿಳಂಭವಾಗುವ ಸಾಧ್ಯತೆ ಇದೆ.
ಲಾರಿ ಸಂಘಟನೆಗಳ ಬೇಡಿಕೆಗಳೇನು?
ಕೇಂದ್ರ ಸರ್ಕಾರದ ಭಾರತೀಯ ನ್ಯಾಯ ಸಂಹಿತೆ ಕಲಂ 106ರ ಉಪವಿಧಿ 1ಮತ್ತು 2 ಅನ್ನು ಕೈ ಬಿಡಬೇಕು
ಕರ್ನಾಟಕ ಸರ್ಕಾರದ ಮುಂದಿರುವ ಬೇಡಿಕೆಗಳು
ರಾಜ್ಯದ ಗಡಿ ಭಾಗಗಳಲ್ಲಿರುವ ಎಲ್ಲಾ ಸಾರಿಗೆ ಇಲಾಖೆ ತಪಾಸಣೆ ಠಾಣೆಗಳನ್ನು ತೆಗೆದುಹಾಕುವುದು
EXCESS PROJECTION ವಿಧಿಸುತ್ತಿರುವ 20 ಸಾವಿರ ದಂಡವನ್ನು ಕಡಿಮೆಗೊಳಿಸಬೇಕು
ಕಪ್ಪು ಪಟ್ಟಿ ಹೆಸರಿನಲ್ಲಿ ವಾಣಿಜ್ಯ ವಾಹನಗಳಿಗೆ FC ಮತ್ತು ಪರ್ಮಿಟ್ ನವೀಕರಣ ಮಾಡಿಕೊಡಲು ನಿರಾಕರಿಸುವುದನ್ನು ನಿಲ್ಲಿಸಬೇಕು
DSA ಕೇಸುಗಳು ಎಲ್ಲೇ ಇದ್ದರು ಸಹ ಅದನ್ನು ವಾಹನ ಮಾಲೀಕರು ತಮ್ಮ ಮೂಲ ಕಚೇರಿಯಲ್ಲಿ ಮುಗಿಸಿಕೊಳ್ಳುವ ಅವಕಾಶ ನೀಡಬೇಕು.