ಬೆಂಗಳೂರು:- 545 ಪಿಎಸ್ಐ ನೇಮಕಾತಿ ಮರುಪರೀಕ್ಷೆಯ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಇದೇ ಜನವರಿ 23 ರಂದು 545 ಪಿಎಸ್ಐ ಹುದ್ದೆಗಳಿಗೆ ಮರುಪರೀಕ್ಷೆ ನಡೆಯಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಭ್ಯರ್ಥಿಗಳಿಗೆ ಪರೀಕ್ಷೆ ಮಾರ್ಗಸೂಚಿ ಬಿಡುಗಡೆ ಮಾಡಿದೆ
ಇನ್ನೂ ಅಭ್ಯರ್ಥಿಗಳು, ಕಾಲರ್ ರಹಿತ ಶರ್ಟ್ ಹಾಗೂ ಜೇಬುಗಳು ಕಮ್ಮಿ ಇರುವ ಪ್ಯಾಂಟ್ ಗಳು ಬಳಸಲು ಸೂಚನೆ ನೀಡಲಾಗಿದೆ. ಅಲ್ಲದೇ ಕುರ್ತಾ ಪೈಜಾಮು, ಜೀನ್ಸ್ ಪ್ಯಾಂಟ್ ಗಳಿಗೆ ಅನುಮತಿ ಇಲ್ಲ.
ಮಾರ್ಗಸೂಚಿ ಹೀಗಿದೆ:-
ಶರ್ಟ್ ಅಥವಾ ಪ್ಯಾಂಟ್ ಗಳಿಗೆ ಜಿಪ್ ಪ್ಯಾಕೆಟ್ ಗಳು, ದೊಡ್ಡ ದೊಡ್ಡ ಗುಂಡಿಗಳು, ಎಕ್ಸ್ಟ್ರಾ ಡಿಸೈನ್ ಇರಬಾರದು.
ಪರೀಕ್ಷಾ ಹಾಲ್ ಗೆ ಶೂ ಹಾಕಿಕೊಂಡು ಹೋಗುವುದು ನಿಷೇಧಿಸಲಾಗಿದ್ದು, ಸ್ಯಾಂಡಲ್ ಅಥವಾ ತೆಳುವಾದ ಚಪ್ಪಲಿ ಬಳಕೆಗೆ ಸೂಚನೆ ನೀಡಲಾಗಿದೆ.
ಚೈನ್, ಕಿವಿಯೋಲೆ, ಉಂಗುರ, ಕೈ ಕಡಗ ಧರಿಸಲು ನಿಷೇಧಿಸಲಾಗಿದೆ.
ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೋ ಫೋನ್, ಬ್ಲೂಟೂತ್, ಗಡಿಯಾರ ಹಾಲ್ ಗೆ ಪ್ರವೇಶವಿಲ್ಲ.
ಯಾವುದೇ ರೀತಿಯಾದ ಅಹಾರ, ನೀರಿನ ಬಾಟಲಿಗೆ ಅವಕಾಶ ಇಲ್ಲ. ಬದಲಿಗೆ ಪರೀಕ್ಷಾ ಕೇಂದ್ರದಲ್ಲಿಯೇ ನೀರು ಕುಡಿಯಲು ವ್ಯವಸ್ಥೆ.
ಪೆನ್ಸಿಲ್, ಪೇಪರ್, ಎರೇಸರ್, ಜಾಮಿಟ್ರಿ ಬಾಕ್ಸ್, ಲಾಗ್ ಟೇಬಲ್ ಗಳು ಪರೀಕ್ಷಾ ಕೇಂದ್ರಕ್ಕೆ ನಿಷೇಧ.
ಎಲ್ಲಾ ಅಭ್ಯರ್ಥಿಗಳಿಗೆ ಹ್ಯಾಟ್ ಧರಿಸದಂತೆ ಸೂಚನೆ
ಲ್ಲರಿಗೂ ಮಾಸ್ಕ್ ಧರಿಸದಂತೆ ಸೂಚನೆ.
ಪ್ರವೇಶ ಪತ್ರ ಕಡ್ಡಾಯವಾಗಿ ತರಬೇಕು.
ಸರ್ಕಾರದಿಂದ ಮಾನ್ಯವಾದ ಗುರುತಿನ ಚೀಟಿ ಕಡ್ಡಾಯ.
ಕೊನೆಯ ಬೆಲ್ ಹೊಡೆಯೋವರೆಗೂ ಪರೀಕ್ಷಾ ಹಾಲ್ನಿಂದ ಅಭ್ಯರ್ಥಿಗಳು ಹೊರ ಹೋಗುವಂತಿಲ್ಲ
ಮಹಿಳಾ ಅಭ್ಯರ್ಥಿಗಳಿಗೆ ಸಹ ಪ್ರತ್ಯೇಕ ಮಾರ್ಗಸೂಚಿ:-
ದೊಡ್ಡ ದೊಡ್ಡ ಡಿಸೈನ್, ಬಟನ್ ಇರೋ, ಹೂಗಳು ಇರೋ ಬಟ್ಟೆ ಧರಿಸುವಂತಿಲ್ಲ.
ಪೂರ್ಣ ತೋಳಿನ ಬಟ್ಟೆ ಬಳಸದಂತೆ ಸೂಚನೆ
ಮುಜುಗರವಾಗದಂತೆ ಅರ್ಧ ತೋಳಿನ ಬಟ್ಟೆ ಬಳಸಬೇಕು
ಇನ್ನೊಬ್ಬರಿಗೆ ಮುಜುಗರವಾಗದಂತೆ ಟಾಪ್ ಗಳು ಬಳಸಲು ಸೂಚನೆ.
ಹೈ ಹೀಲ್ಸ್ ಚಪ್ಪಲಿ-ಶೂ ನಿಷೇಧ.