ಬೆಂಗಳೂರು: ಬಡವರು ತಮ್ಮ ಕನಸಿನ ಮನೆ ನಿರ್ಮಿಸಿಕೊಂಡು ಬದುಕಿಗೊಂದು ಶಾಶ್ವತ ಸೂರು ಸಿಗಲಿ ಎಂಬ ಸರ್ಕಾರದ ಆಶಯದಂತೆ ರಾಜ್ಯ ಸರ್ಕಾರ ಹಲವು ರೀತಿಯಲ್ಲಿ ಪ್ರಯತ್ನ ಮಾಡುತ್ತಿದೆ. ಅದೇ ರೀತಿ ಗ್ಯಾರಂಟಿ ಯೋಜನೆಗಳನ್ನು ಬಿಟ್ಟು ಜನರಿಗೆ ಅನುಕೂಲವಾಗಿವಂತೆ ಸಹ ಮಾಡಿ ಕೊಟ್ಟಿದೆ. ಅದರಂತೆಯೇ ಈಗ ಸರಿಯಾದ ಮನೆ ಇಲ್ಲದೆಯೇ ಚಿಕ್ಕ ಪುಟ್ಟ ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿರುವವರಿಗೆ ಮೂಲಭೂತ ಸೌಕರ್ಯ ಸಿಗಬೇಕು ಎಂಬ ಉದ್ದೇಶದಿಂದ ಆಶ್ರಯ ಯೋಜನೆಯಲ್ಲಿ ನಿವೇಶನಗಳನ್ನು ನೀಡಲು ಸರಕಾರ ಒಂದು ಯೋಜನೆಯನ್ನು ಸಹ ರೂಪಿಸಿಕೊಂಡಿದೆ.
ಹೌದು ಅದೇನೆಂದರೆ ಬೆಂಗಳೂರಿನ ಗ್ರಾಮಾಂತರ ಪ್ರದೇಶದಲ್ಲಿ 527 ಎಕರೆ ಪ್ರದೇಶವನ್ನು ಈಗಾಗಲೇ ಸರಕಾರವು ಮನೆ ಕಟ್ಟಲು ಯೋಗ್ಯವಾದ ಜಾಗವನ್ನು ನಿಗದಿ ಮಾಡಿ ಬಡವರಿಗೆ ಹಂಚಲು ನಿರ್ಧರಿಸಿದೆ.
ರಾಜೀವ್ಗಾಂಧಿ ವಸತಿ ನಿಗಮ ಮಂಡಳಿ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಆಹ್ವಾನ ಮಾಡಿದ್ದಾರೆ. ನೀವು ನಿಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರ ಅಥವಾ ಬೆಂಗಳೂರು ಒನ್ ಕೇಂದ್ರಕ್ಕೆ ತೆರಳಿ ನೀವು ಅರ್ಜಿ ಆಹ್ವಾನ ಮಾಡಬಹುದು. ಅರ್ಜಿಯನ್ನು ಗ್ರಾಮ ಪಂಚಾಯಿತಿಗಳು ಪರಿಶೀಲಿಸಿ ನಿಮ್ಮ ದಾಖಲೆಗಳನ್ನು ನಿಗಮಕ್ಕೆ ಕಳುಹಿಸಲಾಗುತ್ತದೆ. ಇ
ಅರ್ಜಿ ಸಲ್ಲಿಸಲು ಬೇಕಿರುವ ದಾಖಲೆಗಳು ಏನು?
- ಪುರಸಭೆ ಹಾಗೂ ಇತರೆ ಯಾವುದೇ ಪ್ರದೇಶದಲ್ಲಿ ಅರ್ಜಿದಾರರ ಕುಟುಂಬದವರ ಬಳಿಯಾಗಲೀ, ಅರ್ಜಿದಾರರ ಹೆಸರಿನಲ್ಲಾಗಲೀ ಯಾವುದೇ ಆಸ್ತಿ ಇರುವಂತಿಲ್ಲ.
- ಸ್ವಂತ ನಿವೇಶನ ಇಲ್ಲ ಎಂಬ ಬಗ್ಗೆ ನೋಟರಿ ಅಫಿಡವಿಟ್ ಅನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
- ಅರ್ಜಿಯನ್ನು ಭರ್ತಿ ಮಾಡಿ, ಅರ್ಜಿದಾರರ ಇತ್ತೀಚಿನ ಪಾಸ್ಪೋರ್ಟ್ ಅಳತೆಯ 2 ಭಾವಚಿತ್ರವನ್ನು ನೀಡಬೇಕು.
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಲಗತ್ತಿಸಬೇಕು.
- ಪಡಿತರ ಚೀಟಿ ಹಾಗೂ ಎಲ್ಲ ಸದಸ್ಯರ ನಕಲು ಪ್ರತಿ, ಅರ್ಜಿದಾರರ ಆಧಾರ್ ಕಾರ್ಡ್, ಮತದಾರ ಗುರುತಿನ ಚೀಟಿಯನ್ನು ಲಗತ್ತಿಸಬೇಕು.
- ವಿಕಲಚೇತನರಾಗಿದ್ದರೆ ಜಿಲ್ಲಾ ವೈದ್ಯಾಧಿಕಾರಿಯ ಸಹಿಯುಳ್ಳ ಪ್ರಮಾಣ ಪತ್ರವನ್ನು ದಾಖಲೆಯಾಗಿ ನೀಡಬೇಕು.
- ಮಾಜಿ ಸೈನಿಕರು, ಹಿರಿಯ ನಾಗರಿಕರಾಗಿದ್ದಲ್ಲಿ ಸಂಬಂಧಪಟ್ಟ ಪ್ರಮಾಣ ಪತ್ರಗಳನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.
- ಮಹಿಳೆ, ವಿಧವೆ, ವಿಚ್ಛೇದಿತರಾಗಿ ಒಂಟಿಯಾಗಿರುವವ ಆದ್ಯತೆಯನ್ನು ನೀಡಲಾಗುತ್ತದೆ.