ಬೆಂಗಳೂರು:- ತುಮಕೂರು ಬಿಜೆಪಿ ಟಿಕೆಟ್ಗೆ ಮಾಜಿ ಸಚಿವ ಮಾಧುಸ್ವಾಮಿ ಪೈಪೋಟಿ ನಡೆಸಿದ್ದಾರೆ. ಮಾಜಿ ಸಚಿವ ವಿ ಸೋಮಣ್ಣ ಸಹ ತುಮಕೂರು ಕ್ಷೇತ್ರದಿಂದ ಸ್ಪರ್ಧೆಗೆ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಹೀಗಾಗಿ ಈ ವಿದ್ಯಮಾನ ರಾಜ್ಯ ಬಿಜೆಪಿಯಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದ ಸೋಮಣ್ಣ ಕಳೆದ ವಾರ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು. ಅವರು ಹೈಕಮಾಂಡ್ನಿಂದ ಲೋಕಸಭೆ ಟಿಕೆಟ್ಗೆ ಬೇಡಿಕೆ ಇಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರು ರಾಜ್ಯಸಭಾ ಟಿಕೆಟ್ ಕೇಳಿರುವುದಾಗಿ ಹೇಳಿದ್ದರು. ಆದರೆ, ಕಠಿಣವಾದ ಮೂರು ಲೋಸಕಭೆ ಕ್ಷೇತ್ರಗಳನ್ನು ಕೊಡಿ ಗೆಲ್ಲಿಸಿಕೊಂಡು ಬರುವೆ ಎಂದು ಹೈಕಮಾಂಡ್ಗೆ ತಿಳಿಸಿದ್ದರು.
ಸೋಮಣ್ಣ ಘೋಷಣೆ ಬಳಿಕ ಮಾಧುಸ್ವಾಮಿ ಬಿಜೆಪಿಯಿಂದ ಲೋಕಸಭೆ ಪಡೆಯುವ ಆಕಾಂಕ್ಷಿಯಾಗಿದ್ದಾರೆ. ಕೆಲವು ವರದಿಗಳ ಪ್ರಕಾರ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ಮಾಧುಸ್ವಾಮಿಗೆ ಬೆಂಬಲ ನೀಡಿದ್ದಾರೆ.
ಮಾಜಿ ಸಚಿವರು ಟಿಕೆಟ್ಗಾಗಿ ಹರಸಾಹಸ ಪಡುತ್ತಿದ್ದರೂ ಬಿಜೆಪಿ ಮುಖಂಡರಿಗೇ ತುಮಕೂರಿನಿಂದ ಟಿಕೆಟ್ ಸಿಗುತ್ತದೆಯೇ ಎಂಬುದು ಖಚಿತವಾಗಿಲ್ಲ. ಎನ್ಡಿಎ ಸೇರಿರುವ ಜೆಡಿಎಸ್ ಕನಿಷ್ಠ ನಾಲ್ಕು ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಅದರಲ್ಲಿ ತುಮಕೂರು ಸಹ ಒಂದಾಗಿರಬಹುದು ಎಂದು ಭಾವಿಸಲಾಗಿದೆ.