ಮೊಟ್ಟೆಯಲ್ಲಿ ಪ್ರೋಟೀನ್ ಅಧಿಕವಾಗಿದೆ ಆದರೆ ನೀವು ಅದನ್ನು ವಿರುದ್ಧ ಪದಾರ್ಥಗಳೊಂದಿಗೆ ಸೇವಿಸಿದರೆ ಅದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಾಗಾದರೆ ಮೊಟ್ಟೆಯೊಂದಿಗೆ ಯಾವ ಆಹಾರ ಸೇವಿಸಬಾರದು ಎಂಬುದನ್ನು ತಿಳಿಯೋಣ..
ಉಪಹಾರಕ್ಕೆ ಮೊಟ್ಟೆ ಹಾಗೂ ಬಾಳೆಹಣ್ಣು ಒಟ್ಟಿಗೆ ತಿನ್ನುವುದು ಹಾನಿಕಾರಕವಾಗಿದೆ. ಮೊಟ್ಟೆಯಲ್ಲಿ ಹೆಚ್ಚು ಪ್ರೋಟೀನ್ ಇರುತ್ತದೆ, ಆದರೆ ಬಾಳೆಹಣ್ಣು ಹೆಚ್ಚು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ. ಇವೆರಡನ್ನು ಒಟ್ಟಿಗೆ ತಿಂದರೆ ಹೊಟ್ಟೆ ಭಾರವಾಗುತ್ತದೆ ಮತ್ತು ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ.
ಹಾಲು, ಮೊಸರು, ಚೀಸ್ ಅನ್ನು ಮೊಟ್ಟೆಗಳೊಂದಿಗೆ ಸೇವಿಸಬಾರದು. ಮೊಟ್ಟೆಯ ಜೊತೆಗೆ ಡೈರಿ ಉತ್ಪನ್ನಗಳಲ್ಲಿ ಹೆಚ್ಚಿನ ಪ್ರೋಟೀನ್ ಇರುತ್ತದೆ. ಹೆಚ್ಚುವರಿಯಾಗಿ, ಅವುಗಳನ್ನು ಸೇವಿಸುವುದರಿಂದ ನೀವು ಹೊಟ್ಟೆಯುಬ್ಬರವನ್ನು ಅನುಭವಿಸಬಹುದು, ಇದು ಅಜೀರ್ಣ, ಗ್ಯಾಸ್ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ಆಗುತ್ತದೆ.
ಮೊಟ್ಟೆ ಮತ್ತು ಸಕ್ಕರೆ ಎರಡೂ ಆಹಾರ ಪದಾರ್ಥಗಳಲ್ಲಿರುವ ಅಮೈನೋ ಆಮ್ಲವು ರಕ್ತದಲ್ಲಿ ಹೆಪ್ಪುಗಟ್ಟುವಿಕೆಗೆ ಕಾರಣವಾಗುವ ಸಾಧ್ಯತೆಗಳಿರುವುದರಿಂದ ಈ ಎರಡು ಆಹಾರ ಪದಾರ್ಥಗಳನ್ನು ಒಟ್ಟಿಗೆ ಸೇವಿಸುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ.
ಹೀಗಾಗಿ ಮೊಟ್ಟೆಯೊಂದಿಗೆ ಕೆಲವು ಆಹಾರಗಳನ್ನು ಸೇವಿಸಬಾರದು. ಇದರಿಂದ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ.