ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರವಾಗ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಮೀಸಲಾತಿ ಜಟಾಪಟಿ ಜೋರಾಗ್ತಿದೆ. ನೆನ್ನೆ ಕಾಂಗ್ರೆಸ್ ಸರ್ಕಾರ ಕ್ಯಾಬಿನೆಟ್ ನಿರ್ಣಯ ಕೈಗೊಂಡು ಒಳಮೀಸಲಾತಿಗೆ ಸಾಂವಿಧಾನಿಕ ತಿದ್ದುಪಡಿ ತರಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಜಾತಿ ಅಸ್ತ್ರ ಪ್ರಯೋಗಿಸಿ ಬಿಜೆಪಿಗೆ ಟಕ್ಕರ್ ಕೊಟ್ಟಿತ್ತು. ಇಂದು ರಾಜ್ಯ ಬಿಜೆಪಿ ಬೃಹತ್ ST ಸಮಾವೇಶ ಮಾಡಿ ಕೈ ಪಾಳಯಕ್ಕೆ ಟಾಂಗ್ ಕೊಟ್ಟಿದೆ. ಕಮಲ ನಾಯಕರು ಸರ್ಕಾರದ ನಡೆಯನ್ನ ಖಂಡಿಸ್ತಿದ್ದು ಆಕ್ರೋಶ ಹೊರಹಾಕ್ತಿದ್ದಾರೆ. ಸದ್ಯ ಮೀಸಲಾತಿ ಅಸ್ತ್ರ ರಾಜ್ಯ ರಾಜಕಾರಣದಲ್ಲಿ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗ್ತಿದೆ..
ರಾಜ್ಯ ರಾಜಕಾರಣ ಅಭಿವೃದ್ಧಿಯ ಮೇಲೆ ನಡೆಯುತ್ತೊ ಇಲ್ವೊ ಗೊತ್ತಿಲ್ಲ ಜಾತಿಯ ಮೇಲೆ ನಡೆಯುತ್ತೆ ಎಂಬುದು ಹಲವು ಸಲ ಸಾಭೀತಾಗ್ತಿದೆ. ಬಿಜೆಪಿಯ ಬೊಮ್ಮಾಯಿ ಸರ್ಕಾರ 2023ರ ವಿಧಾನಸಭೆ ಸಮೀಪಿಸ್ತಿದ್ದಂತೆ SC- ST ಹಾಗೂ ಒಳ ಮೀಸಲಾತಿಯನ್ನು ಹೆಚ್ಚಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು. ಆದ್ರೆ ಕೇಂದ್ರ ಸರ್ಕಾರ ಇದನ್ನ ತಿರಸ್ಕಾರ ಮಾಡಿತ್ತು ಇದೀಗ ಲೋಕಸಭಾ ಚುನಾವಣೆ ಹತ್ತಿರ ಬರ್ತಿದ್ದಂತೆ ಅದೇ ಮೀಸಲಾತಿ ಅಸ್ತ್ರ ಪ್ರಯೋಗಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲಾತಿ ವಿಚಾರದ ಬಗ್ಗೆ ನೆನ್ನೆ ಕ್ಯಾಬಿನೆಟ್ ಸಭೆಯಲ್ಲಿ ಬಿಸಿಬಿಸಿ ತೀರ್ಮಾನ ಕೈಗೊಂಡು ಸಂವಿಧಾನದ ಅನುಚ್ಚೇದ 341ಕ್ಕೆ ತಿದ್ದುಪಡಿ ತರಲು ಕೇಂದ್ರಕ್ಕೆ ಶಿಫಾರಸು ಮಾಡಲು ಮುಂದಾಗಿದೆ. ಈ ಅಸ್ತ್ರ ಬಿಜೆಪಿ ನಾಯಕರಿಗೆ ತಲೆನೋವು ತಂದೊಡ್ಡಿದ್ದು ಇದಕ್ಕೆ ಠಕ್ಕರ್ ಕೊಡಲು ST ಸಮುದಾಯಗಳ ಮಹಾಅಧಿವೇಶನ ನಡೆಸಿ ಕೈ ವಿರುದ್ಧ ಕಮಲ ನಾಯಕರು ಆಕ್ರೋಶ ಹೊರಹಾಕಿದ್ದಾರೆ..