ಯೋಜನೆಗಳ ಸವಲತ್ತು ವಿತರಣೆಗೆ ಅಧಿಕ ಹಣ ವಸೂಲಿ, ಗೋಮಾಳ ಜಮೀನು ಒತ್ತುವರಿಗೆ ಸಂಬಂಧಿಸಿ ಕೇಳಿಬಂದ ಆರೋಪಗಳ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.
ಲೋಕಾಯುಕ್ತ ಎಸ್ಪಿ ವಲೀ ಬಾಷ, ಡಿವೈಎಸ್ಪಿಗಳಾದ ಉಮಾಶಂಕರ್ , ರಾಮಕೃಷ್ಣ ,ಇನ್ಸ್ ಪೆಕ್ಟರ್ ಗಳಾದ ಸಲೀ ಅಹಮದ್ ,ಶಿವರುದ್ರಪ್ ಮೇಟಿ ಸೇರಿದಂತೆ ಸಿಬ್ಬಂದಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದಾರೆ.
ಇದೇ ವೇಳೆ ತಾಲೂಕು ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರು ಅಧಿಕಾರಿಗಳ ಬಳಿ ಅಹವಾಲು ಹೇಳಿಕೊಂಡರು.