ಬೆಂಗಳೂರು: ಅನುಮಾನಸ್ಪದ ರೀತಿಯಲ್ಲಿ ಯುವಕನ ಮೃತ ದೇಹ ಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ತಳಿರಸ್ತೆಯಲ್ಲಿ ನಡೆದಿದೆ.. ಆನೇಕಲ್ ಪಟ್ಟಣದ ವಿನಯ್ ಕುಮಾರ್ ಸಾವಿಗೀಡಾದ ಯುವಕ ..ಇನ್ನೂ ವಿನಯ್ ಕುಮಾರ್ ಕೈ ಹಾಗೂ ಕುತ್ತಿಗೆ ಭಾಗದಲ್ಲಿ ಗಾಯಗಳಿದ್ದು ಸಾಕಷ್ಟು ಅನುಮಾನ ವ್ಯಕ್ತವಾಗುತಿದೆ..
ಇನ್ನು ಮೃತ ವಿನಯ್ ಕುಮಾರ್ ಸರ್ಜಾಪುರ ಸಮೀಪದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮನೆಯಲ್ಲಿ ಯಾರು ಇಲ್ಲದ ವೇಳೆ ಕತ್ರಿಯಲ್ಲಿ ಕೈಯಿ ಮತ್ತು ಕತ್ತು ಕೊಯ್ಕೊಂಡು ಬಳಿಕ ಸೀರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತ ಮೂಲಗಳಿಂದ ತಿಳಿದು ಬಂದಿದೆ .. ಇನ್ನು ಈ ಘಟನೆ 8 ಗಂಟೆಗೆ ನಡೆದಿದ್ದು ಸಾಯುವ ಮುನ್ನ ಮೊಬೈಲ್ ಸಿಮ್ ತೆಗೆದು ಬಿಸಾಡಿದ್ದು ಮೊಬೈಲನ್ನು ರಿಸೆಟ್ ಮಾಡಿ ಲಾಗಿದೆ..
ಇನ್ನು ಯುವಕನಿಗೆ ಯಾರಾದರೂ ಎದುರಿಸ ಯಾರಾದ್ರೂ ಬ್ಲಾಕ್ ಮೇಲ್ ಮಾಡಿರಬಹುದು ಅಂತ ಪೊಲೀಸರು ಕೂಡ ಶಂಕೆ ಯನ್ನು ವ್ಯಕ್ತಪಡಿಸುತ್ತಿದ್ದಾರೆ ಇನ್ನು ಘಟನಾ ಸ್ಥಳಕ್ಕೆ ಆನೇಕಲ್ ಪೋಲಿಸಿರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು ಇನ್ನು ವೃತ್ತ ದೇಹವನ್ನು ಆನೇಕಲ್ ಸರ್ಕಾರಿ ಶವಗಾರ ಆಸ್ಪತ್ರೆಗೆ ಕಳುಸಿದ್ದು ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.