ಬೆಂಗಳೂರು: ಒಕ್ಕಲಿಗ ಸಮುದಾಯದ ಸಹಕಾರದಿಂದ ನಾನು ಇಲ್ಲಿವರೆಗೆ ಬಂದಿದ್ದೇನೆ. ನಿಮ್ಮೆಲ್ಲರ ಬೆಂಬಲ ಇದ್ದರೆ ನಾನು ಇನ್ನೂ ಎತ್ತರಕ್ಕೆ ಹೋಗುತ್ತೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಒಕ್ಕಲಿಗ ಉದ್ಯಮಿಗಳ ಎಕ್ಸ್ಪೋದಲ್ಲಿ ಮಾತನಾಡಿದ ಅವರು, ನನಗೆ ಬೇಕಾದಷ್ಟು ಏಟು ಬಿದ್ದಿದೆ. ನಾನು ಕನಕಪುರದ ಕಲ್ಲು ಮಣ್ಣಿನಿಂದ ಬಂದಿದ್ದೇನೆ.
ಕಲ್ಲು ಪ್ರಕೃತಿ, ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ, ಏಟು ಬಿದ್ದು ಬಿದ್ದು ಈ ಹಂತಕ್ಕೆ ಬಂದಿದ್ದೇನೆ. ನೀವು ತಿರುಪತಿ ತಿಮ್ಮಪ್ಪನ ಹಾಗೇ ಒಂದೇ ಕಡೆ ಇರಬಾರದು. ಎರಡೂ ಕಡೆ ಇರಬೇಕು, ನೀವು ಬೆಳೆಯಬೇಕು ಬೇರೆಯವ ರನ್ನೂ ಬೆಳೆಸಬೇಕು ಎಂದಿದ್ದಾರೆ. ಮೂರು `ಕೆ’ಗಳನ್ನು ನಮ್ಮ ಸಮಾಜ ಸದಾ ನೆನಪಿಸಿ ಕೊಳ್ಳಬೇಕು. ಬೆಂಗಳೂರು ನಿರ್ಮಾತೃ ಕೆಂಪೇಗೌಡ, ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ,
ಬೆಂಗಳೂರಿಗೆ ಹೊಸ ರೂಪ ನೀಡಿದ ಎಸ್.ಎಂ ಕೃಷ್ಣ ಅವರನ್ನು ಮರೆಯಬಾರದು. ಸಮುದಾಯದವರ ನಡುವೆ ಶೇರಿಂಗ್& ಕೇರಿಂಗ್ ಇರಬೇಕು ಎಂದಿದ್ದಾರೆ. ಸಮುದಾಯದ ಜನ ಗಟ್ಟಿ ಧ್ವನಿಯಲ್ಲಿ ಮಾತನಾ ಡಬೇಕು. ನನ್ನನ್ನು ಸೇರಿದಂತೆ ಯಾರೇ ತಪ್ಪು ಮಾಡಿದರೂ ತಿದ್ದಿ ಹೇಳಬೇಕು. ಯಾರು ಏನು ಮಾಡೋಕ್ಕಾಗಲ್ಲ ಗಟ್ಟಿಯಾಗಿ ಮಾತನಾಡಬೇಕು. ಈ ಬಗ್ಗೆ ನಿರ್ಮಲಾನಂದ ಶ್ರೀಗಳಿಗೆ ನಾನು ಹೇಳ್ತಾ ಇರುತ್ತೇನೆ ಎಂದಿದ್ದಾರೆ.