ಚೆನ್ನೈ:- ಅಯೋಧ್ಯೆಯಲ್ಲಿ ನಡೆಯುವ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ನೇರಪ್ರಸಾರವನ್ನು ತಮಿಳುನಾಡು ಸರ್ಕಾರ ನಿಷೇಧಿಸಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವೆ, ತಮಿಳುನಾಡಿನ ದೇವಸ್ಥಾನಗಳಲ್ಲಿ ಸೋಮವಾರ ರಾಮನ ಹೆಸರಿನಲ್ಲಿ ವಿಶೇಷ ಪೂಜೆ ಮತ್ತು ಸಾಮೂಹಿಕ ಅನ್ನದಾನ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೇರ ಪ್ರಸಾರ ವೀಕ್ಷಿಸುವುದನ್ನು ತಮಿಳುನಾಡು ಸರ್ಕಾರ ನಿಷೇಧಿಸಿದೆ. ತಮಿಳುನಾಡಿನಲ್ಲಿ ಶ್ರೀರಾಮನಿಗೆ 200 ಕ್ಕೂ ಹೆಚ್ಚು ದೇವಾಲಯಗಳಿವೆ. ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ನಿರ್ವಹಿಸುವ ದೇವಾಲಯಗಳಲ್ಲಿ ಯಾವುದೇ ಪೂಜೆ/ಭಜನೆ/ಪ್ರಸಾದ/ಅನ್ನದಾನವಿಲ್ಲ. ಶ್ರೀರಾಮನ ನಾಮಸ್ಮರಣೆಗೆ ಅವಕಾಶವಿದೆ. ಖಾಸಗಿ ದೇವಸ್ಥಾನಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ಪೊಲೀಸರು ತಡೆಯುತ್ತಿದ್ದಾರೆ. ಪೆಂಡಾಲ್ಗಳನ್ನು ಕಿತ್ತುಹಾಕುವುದಾಗಿ ಸಂಘಟಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಹಿಂದೂ ವಿರೋಧಿ, ದ್ವೇಷಪೂರಿತ ಕ್ರಮವನ್ನು ಬಲವಾಗಿ ಖಂಡಿಸಿ ಎಂದು ಕೇಂದ್ರ ಸಚಿವೆ ಬರೆದುಕೊಂಡಿದ್ದಾರೆ.
ಕೇಂದ್ರ ಸಚಿವರ ಆರೋಪಗಳನ್ನು ತಮಿಳುನಾಡು ಮಾನವ ಸಂಪನ್ಮೂಲ ಮತ್ತು ಸಿಇ ಸಚಿವ ಪಿ.ಕೆ.ಶೇಖರ್ಬಾಬು ತಳ್ಳಿಹಾಕಿದ್ದಾರೆ. ನಿರ್ಮಲಾ ಸೀತಾರಾಮನ್ ಅವರಂತಹ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ನಿಸ್ಸಂಶಯವಾಗಿ ಸುಳ್ಳು ಮತ್ತು ನಕಲಿ ಸುದ್ದಿಯನ್ನು ಹರಡಲು ತೊಡಗಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ