ಕಠ್ಮಂಡು: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಇಂದು ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ನಡೆಯುತ್ತಿದ್ದರೆ, ಇತ್ತ ರಾಮನ ಅತ್ತೆ ಮನೆ ನೇಪಾಳದಲ್ಲಿಯೂ ಹಬ್ಬದ ಸಡಗರ ಜೋರಾಗಿದೆ.
ಈ ಸಂಬಂಧ ಶ್ರೀರಾಮ ಯುವ ಸಮಿತಿಯ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ ಚೌಧರಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ತ್ರೇತಾಯುಗದ ವನವಾಸದ ಸಂದರ್ಭದಲ್ಲಿ ರಾಮಚಂದ್ರ ಅನುಭವಿಸಿದ ನೋವು ಕಲಿಯುಗದಲ್ಲಿಯೂ ಮುಂದುವರಿದಿದೆ. ಬರೋಬ್ಬರಿ 500 ವರ್ಷಗಳ ಹೋರಾಟವನ್ನು ಮಾಡಬೇಕಾಯಿತು. ಈ ಸಮಯದಲ್ಲಿ ಅವರು ಟಾರ್ಪಾಲಿನ ಅಡಿಯಲ್ಲಿ ಆಶ್ರಯ ಪಡೆಯಬೇಕಾಗಿತ್ತು. ಅವರ ನೋವು ನಿಜಕ್ಕೂ ಎಲ್ಲಾ ಹಿಂದೂಗಳ ನೋವಾಗಿದೆ. ನಮ್ಮ ಪೂರ್ವಜರು ಕಷ್ಟಪಟ್ಟು ಹೋರಾಡಿದರು. ಇದೀಗ ಅಂತಿಮ ಫಲಿತಾಂಶವು ಇಂದು ಇಲ್ಲಿ ಮರ್ಯಾದಾಪುರುಷ ಭಗವಾನ್ ರಾಮನ ದೇವಾಲಯದ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ನಾನು ಎಲ್ಲಾ ಭಾರತೀಯರನ್ನು ಅಭಿನಂದಿಸುತ್ತೇನೆ ಮತ್ತು ಜನಕಪುರದ ಜನ ಕೂಡ ಸಂತೋಷದಿಂದಿದ್ದಾರೆ ಎಂದು ಹೇಳಿದರು.
ನೇಪಾಳದ ಜನಕ್ಪುರದಿಂದ ಚೋಟ್ಟೆ ಮಹಾಂತರೊಂದಿಗೆ ಮುಖ್ಯ ಮಹಂತರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದ್ದು, ಈಗಾಗಲೇ ಅಯೋಧ್ಯೆಗೆ ತೆರಳಿದ್ದಾರೆ. ಇದಕ್ಕೂ ಮುನ್ನ ಜನಕಪುರ್ ಸ್ಥಳೀಯವಾಗಿ ಭರ್ ಎಂಬ ಅರ್ಪಣೆಗಳನ್ನು ಅಯೋಧ್ಯೆಗೆ ಆಚರಣೆಯ ಭಾಗವಾಗಿ ಕಳುಹಿಸಲಾಗಿದೆ. ಇದರಲ್ಲಿ ಆಭರಣಗಳು, ಪಾಕಪದ್ಧತಿಗಳು, ಬಟ್ಟೆಗಳು ಮತ್ತು ಇತರ ದೈನಂದಿನ ಅಗತ್ಯತೆಗಳಿದ್ದವು. ಸೀತಾ ದೇವಿಯ ತಾಯಿಯ ಮನೆಯಾದ ಜನಕಪುರ ಕೂಡ ಪ್ರಾಣ ಪ್ರತಿಷ್ಠೆಯ ದಿನದಂದು ಹಲವಾರು ಕಾರ್ಯಕ್ರಮಗಳನ್ನು ನಡೆಸಲು ಸಿದ್ಧವಾಗಿದೆ.