ಹಿಂದಿನಿಂದಲೂ ಹೆಣ್ಣು ಮಕ್ಕಳು ತಮ್ಮ ಸೌಂದರ್ಯ ಕಾಪಿಡಲು ವಿವಿಧ ರೀತಿಯಿಂದ ಪ್ರಯತ್ನ ಮಾಡುತ್ತಿದ್ದರು. ಯಾಕೆಂದರೆ ಸೌಂದರ್ಯವಿದ್ದರೆ ಆಗ ಗುಂಪಿನಲ್ಲಿ ಎದ್ದು ಕಾಣಬಹುದಾಗಿದೆ.
ಇಂತಹ ಸೌಂದರ್ಯ ಪಡೆಯಲು ಆಯುರ್ವೇದದ ನೆರವನ್ನು ಹಿಂದಿನವರು ಪಡೆದುಕೊಳ್ಳುತ್ತಿದ್ದರು. ಆದರೆ ಈಗ ತಕ್ಷಣವೇ ಎಲ್ಲವೂ ಸಿಗಬೇಕಾಗಿರುವ ಕಾರಣದಿಂದಾಗಿ ಹೆಚ್ಚು ಸಮಯ ಕಾದು ಫಲಿತಾಂಶ ನೋಡುವಂತಹ ವ್ಯವದಾನವು ಯಾರಲ್ಲಿಯೂ ಇಲ್ಲ. ಹೀಗಾಗಿ ರೆಡಿಮೇಡ್ ಉತ್ಪನ್ನಗಳಿಗೆ ಮಾರು ಹೋಗುವುದು ಹೆಚ್ಚಾಗುತ್ತಿದೆ.
ಇದು ತಕ್ಷಣಕ್ಕೆ ಕಾಂತಿ ನೀಡಿದರೂ ಬಳಿಕ ಹಲವಾರು ಸಮಸ್ಯೆಗಳನ್ನು ಉಂಟು ಮಾಡುವುದು. ಹೀಗಾಗಿ ಆಯುರ್ವೇದವು ಸ್ವಲ್ಪ ನಿಧಾನವಾಗಿ ಫಲಿತಾಂಶ ನೀಡಿದರೂ ಅದರ ಪರಿಣಾಮ ಮಾತ್ರ ಶಾಶ್ವತ ಮತ್ತು ಯಾವುದೇ ರೀತಿಯ ಅಡ್ಡಪರಿಣಾಮವನ್ನು ಅದು ಉಂಟು ಮಾಡುವುದಿಲ್ಲ. ಈ ಲೇಖನದಲ್ಲಿ ಮಹಿಳೆಯ ತ್ವಚೆಯ ಸೌಂದರ್ಯಕ್ಕಾಗಿ ಕೆಲವೊಂದು ಮನೆಮದ್ದುಗಳನ್ನು ಹೇಗೆ ಬಳಸಿಕೊಳ್ಳುವುದು ಎಂದು ತಿಳಿಯುವ.
ಹಿಂದೆ ರಾಜಮಹಾರಾಜರ ಹಾಗೂ ಕೆಲವೊಂದು ಋಷಿಗಳ ಪತ್ನಿಯರು ಮೊದಲು ಹಾಲಿನಲ್ಲಿ ತ್ವಚೆ ಸ್ವಚ್ಛಗೊಳಿಸಿದ ಬಳಿಕ ಗುಲಾಬಿ ನೀರಿನಲ್ಲಿ ಹೋಗಿ ಸ್ನಾನ ಮಾಡಿಕೊಳ್ಳುತ್ತಿದ್ದರು ಎಂದು ಪುರಾಣಗಳು ಕೂಡ ಹೇಳಿವೆ. ಋಷಿ ಬೃಹಸ್ಪತಿ ಅವರ ಪತ್ನಿ ತಾರಾ ಕೂಡ ಇದೇ ರೀತಿಯಾಗಿ ಸ್ನಾನ ಮಾಡುತ್ತಿದ್ದರು.
ಇದರಿಂದ ಚಂದ್ರ ದೇವರು ಅವರ ಸೌಂದರ್ಯಕ್ಕೆ ಮಾರು ಹೋದರು ಎಂದು ಪುರಾಣಗಳು ಹೇಳುತ್ತವೆ. ಹಸಿ ಹಾಲಿನಲ್ಲಿ ಹತ್ತಿ ಉಂಡೆ ಮುಳುಗಿಸಿ ಮತ್ತು ಪ್ರತಿನಿತ್ಯ ನಿಮ್ಮ ಮುಖವನ್ನು ಅದರಿಂದ ಒರೆಸಿರಿ. ಇದರಿಂದ ಮುಖದ ಮೇಲೆ ಕೊಳೆಯು ತೆಗೆದುಹಾಕಲ್ಪಡುವುದು ಮತ್ತು ಶುದ್ಧ ಚರ್ಮವನ್ನು ಇದು ನೀಡುವುದು.
ಬೇವು ಕಹಿಯಾದರೂ ಇದರಲ್ಲಿನ ಔಷಧೀಯ ಗುಣಗಳು ಅಪಾರ. ಹೀಗಾಗಿ ಇದನ್ನು ಹಿಂದಿನಿಂದಲೂ ಆಯುರ್ವೇದದಲ್ಲಿ ಬಳಸಿಕೊಂಡು ಬರಲಾಗುತ್ತಿದೆ. ಇದನ್ನು ಸೌಂದರ್ಯ ವೃದ್ಧಿಸಲು ಹೊರಗಿನಿಂದ ಹಚ್ಚಿಕೊಳ್ಳಬಹುದು.
ತ್ವಚೆಯ ಆರೈಕೆಯಲ್ಲಿ ಎಷ್ಟೇ ಮಟ್ಟದಲ್ಲಿ ನೀವು ಶಿಸ್ತನ್ನು ಪಾಲಿಸಿದರೂ ಆಹಾರ ಕ್ರಮದಲ್ಲಿ ಪೋಷಕಾಂಶಗಳ ಕೊರತೆ ಇದ್ದರೆ ಆಗ ಖಂಡಿತವಾಗಿಯೂ ಅದು ನಿಮ್ಮ ತ್ವಚೆ ಮೇಲೆ ಪರಿಣಾಮ ಬೀರುವುದು.