ಬೆಂಗಳೂರು: ಹಳೆಯ ಕಾಲದ ಗತವೈಭವವನ್ನ ಸಾರುವ ಡಬಲ್ ಡೆಕ್ಕರ್ ಬಸ್ ಗಳನ್ನ ಮತ್ತೆ ರಸ್ತೆಮೇಲೆ ನೋಡುವ ದಿನಗಳು ಸನ್ನಿಹದಲ್ಲಿವೆ. ಬಿಎಂಟಿಸಿ ಬೆಂಗಳೂರಲ್ಲಿ ಡಬಲ್ ಡೆಕ್ಕರ್ ಬಸ್ ಗಳನ್ನ ರಸ್ತೆಗಿಳಿಸಲು ಗಂಭೀರ ಚಿಂತನೆ ನಡೆಸುತ್ತಿದ್ದು,. ಒಂದ್ ಕಾಲದಲ್ಲಿ ಮಿಂಚಿ ಮರೆಯಾದ ಬಸ್ ಗಳಿಗೆ ಟೆಂಡರ್ ಕರೆಯಲು ಮುಂದಾಗಿದೆ. ಹಾಗಾದ್ರೆ ಮತ್ತೆ ಯಾವಾಗ ಬರುತ್ವೆ ಡಬಲ್ ಡೆಕ್ಕರ್ ಬಸ್ ಗಳು ಅನ್ನೊ ಡೀಟೆಲ್ಸ್ ಇಲ್ಲಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಮೂಲೆ ಮೂಲೆಗೆ ಬಸ್ ಸಂಚಾರ ಒದಗಿಸುತ್ತಿರುವ ಬಿಎಂಟಿಸಿ ಈಗ ಒಂದೆಜ್ಜೆ ಮುಂದೆ ಹೋಗಿದೆ. ನಗರದಲ್ಲಿ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಗಳನ್ನ ರಸ್ತೆಗಿಳಿಸಲು ಪ್ಲಾನ್ ಮಾಡ್ತಾಯಿದೆ. ಡಬಲ್ ಡೆಕ್ಕರ್ ಬಸ್ ಗಳ ಖರೀದಿಗೆ ಟೆಂಡರ್ ಬಿಎಂಟಿಸಿ ಟೆಂಡರ್ ಕರೆಯಲು ಮುಂದಾಗಿದ್ದು, ಅಂದುಕೊಂಡಂತೆ ಆದ್ರೆ ಕೆಲ ತಿಂಗಳಲ್ಲೇ 10 ಬಸ್ ಗಳು ನಗರದ ರಸ್ತೆಗಿಳಿಯಲಿವೆ.
ಕೆಲ ದಿನಗಳಲ್ಲೇ ಟೆಂಡರ್ ಕರೆಯಲಿದ್ದು , ಟೆಂಡರ್ ರಿಪೋರ್ಟ್ ರೆಡಿ ಮಾಡ್ತಾಯಿದೆ. ಮೊದಲ ಹಂತದಲ್ಲಿ 10 ಡಬಲ್ ಡೆಕ್ಕರ್ ಬಸ್ ಖರೀದಿಸಿ ಸಿಟಿ ಹಾಗೂ ಔಟರ್ ರಿಂಗ್ ರೋಡಲ್ಲಿ ಪ್ರಯೋಗಿಕವಾಗಿ ಸಂಚಾರ ನಡೆಸಲಾಗುತ್ತದೆ. ಸಿಲಿಕಾನ್ ಸಿಟಿಯ ಸ್ಟಕ್ಚರ್ ನಲ್ಲಿ ಬಸ್ ಗಳ ಕಾರ್ಯಾಚರಣೆ ಸರಗವಾಗಿ ಆದ್ರೆ ಹೆಚ್ಚಿನ ಬಸ್ ಖರೀದಿಗೆ ನಿರ್ಧರಿಸಲಾಗಿದೆ.
ಡಬಲ್ ಡೆಕ್ಕರ್ ಬಸ್ ಖರೀದಿ ಹಿನ್ನಲೆ ಸಿಟಿ ಸರ್ವೆಯನ್ನೂ ನಿಗಮ ಮಾಡಬೇಕಿದೆ. 4.6 ಮೀಟರ್ ಉದ್ದದ 70 ಸೀಟ್ ಕ್ಯಪಾಸಿಟಿಯ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಗಳು ನಗರದಲ್ಲಿ ಫ್ಲೈಓವರ್, ಅಂಡರ್ ಪಾಸ್ ಇರುವ ಜಾಗದಲ್ಲಿ ಹೇಗೆ ಸಂಚರಿಸಲಿವೆ ಎಂಬುದನ್ನ ಗಮನಿಸಬೇಕಿದೆ. ಬೆಂಗಳೂರು ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಪ್ರವಾಸೋದ್ಯಮಕ್ಕೆ ಬಳಕೆ ಮಾಡುವ ಉದ್ದೇಶದಿಂದ ಡಬಲ್ ಡೆಕ್ಕರ್ ಬಸ್ ಖರೀದಿ ಮಾಡಲಾಗ್ತಾಯಿದೆ.
ಡಬಲ್ ಡೆಕ್ಕರ್ ಬಸ್ ಸಂಬಂಧ ಬಸ್ ಖರೀದಿ , ಗುತ್ತಿಗೆ ಹಾಗೂ ಆ ಬಸ್ ಗಳ ಖರ್ಚು ವೆಚ್ಚಗಳ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ. ಮುಂದಿನ ದಿನಗಳಲ್ಲಿ ಕಂಪನಿ ಜೊತೆ ಚರ್ಚೆ ನಡೆಸಿ ಬಿಎಂಟಿಸಿ ನಿರ್ಧಾರ ಕೈಗೊಳ್ಳಲಿದೆ. ಒಟ್ನಲ್ಲಿ ಡಬಲ್ ಡೆಕ್ಕರ್ ಬಸ್ ಮತ್ತೆ ಬರ್ತಾಯಿರೋದು ಖುಷಿಯ ವಿಚಾರವೇ ಆದ್ರೆ ಬಿಎಂಟಿಸಿ ಅದನ್ನ ಹೇಗೆ ನಿರ್ವಹಣೆ ಮಾಡಲಿದೆ ಕಾದು ನೋಡಬೇಕಿದೆ.