ಬೆಂಗಳೂರು: ನಿಗಮ ಮಂಡಳಿ ನೇಮಕ ವಿಚಾರದಲ್ಲಿ ನನ್ನ ಪರಿಗಣನೆ ತೆಗದುಕೊಂಡಿಲ್ಲ ಎಂಬ ಪರಮೇಶ್ವರ್ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಿಗಮ ಮಂಡಳಿ ನೇಮಕ ವಿಚಾರದಲ್ಲಿ ಎಲ್ಲರ ಅಭಿಪ್ರಾಯ ಪಡೆಯಲು ಸಾಧ್ಯವಿಲ್ಲ MLA ಗಳದ್ದು ಎಲ್ಲಾ ಕ್ಲೀಯರ್ ಆಗಿದೆ ಕಾರ್ಯಕರ್ತರ ನೇಮಕದ ಬಗ್ಗೆ ಚರ್ಚೆ ಆಗ್ತಿದೆ ನಾವು ಡಿಕೆಶಿ ಚರ್ಚೆ ನಡೆಸಿದ್ದೇವೆ ಇದರ ಬಗ್ಗೆ ನಾನು ಪರಮೇಶ್ವರ್ ಜೊತೆ ಮಾತನಾಡಿದ್ದೇನೆ ಹಾಗೆ ವೇಣುಗೋಪಾಲ್ ಸಹಿ ಆಗಬೇಕಿದೆ ಎಂದು ಹೇಳಿದ್ದಾರೆ.
ಬಾಲರಾಮನ ದರ್ಶನಕ್ಕೆ ಆಯೋಧ್ಯೆಗೆ ಜನರನ್ನ ಕಳುಹಿಸಸಲು ಬಿಜೆಪಿ ಪ್ಲ್ಯಾನ್ ವಿಚಾರ ಬಗ್ಗೆಯೂ ಮಾತನಾಡಿ, ರಾಮಮಂದಿರದ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡ್ತಿದೆ ನಾವು ವಿರೋಧ ಮಾಡ್ತಿರುವುದು ಬಿಜೆಪಿ ರಾಜಕೀಯವನ್ನ ನಾವು ಬಿಜೆಪಿ ರಾಮನನ್ನ ವಿರೋಧ ಮಾಡ್ತಿದ್ದೇವೆ ಗಾಂಧೀಜಿ ರಾಮನನ್ನ ಆರಾಧಿಸುತ್ತೀವಿ ದಶರಥ ಮಗ ರಾಮನನ್ನ ಗೌರವಿಸ್ತೀವಿ ನಮ್ಮ ಕರ್ನಾಟಕದಲ್ಲಿ ರಾಮಮಂದಿರಗಳು ಇಲ್ವಾ ಎಲ್ಲೆಲ್ಲೂ ರಾಮ ಮಂದಿರಗಳು ಇವೆ ಹಳ್ಳಿಗಳಲ್ಲೂ ರಾಮ, ಸೀತೆ, ಲಕ್ಷ್ಮಣ ಇಲ್ವಾ ಎಂದು ಪ್ರಶ್ನೆ ಮಾಡಿದರು.
ರಾಹುಲ್ ಗಾಂಧಿ ಪಾದಯಾತ್ರೆ ತಡೆಗೆ ಪ್ರತಿಭಟನೆ ವಿಚಾರ ಬಗ್ಗೆಯೂ ಮಾತನಾಡಿ ಪಾದಯಾತ್ರೆ ಮಟ್ಟಹಾಕೋದು ಸ್ವಾತಂತ್ರ್ಯ ಕಸಿದ ಹಾಗೇ ದೇಶದ ಸಮಸ್ಯೆಗಳಿಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಆದ್ರೆ ಅದನ್ನ ತಡೆಯುವ ಕೆಲಸ ಬಿಜೆಪಿ ಕೆಲ ಪುಂಡರು ಮಾಡ್ತಿದ್ದಾರೆ ಇದಕ್ಕೆ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಮಾಡ್ತಿದೆ ಎಂದು ಹೇಳಿದರು.