ಬೆಂಗಳೂರು: ಇಂದು ರಾಜ್ಯದಲ್ಲಿ ಪಿಎಸ್ಐ ಮರು ಪರೀಕ್ಷೆ ನಡೆಯುತ್ತಿದ್ದು ಪರೀಕ್ಷೆ ಬರೆಯಲು ನಾನಾ ಕಡೆಯಿಂದ ನಾನಾ ಜಿಲ್ಲೆಗಳಿಂದ ನಗರಕ್ಕೆ ಬಂದಿದ್ದಾರೆ .
ಹೌದು, ಇಲ್ಲೊಬ್ಬ ಮಹಿಳೆ ಪಿಎಸ್ ಐ ಪರೀಕ್ಷೆ ಬರೆಯಲು ತನ್ನ ಹಸುಗೂಸಿನ ಜೊತೆ ಬಂದಿದ್ದು ಮಗುವನ್ನು ಪತಿಯ ಕೈಲ್ಲಿ ಕೊಟ್ಟು ಪರೀಕ್ಷೆ ಬರೆಯಲು ಹೋಗಿದ್ದಾರೆ
ತಾಯಿ ಪಿಎಸ್ ಐ ಎಕ್ಸಾಂ ಬರೆಯಲು ಹೋಗಿದ್ದಾರೆ ಹಾಗಾಗಿ ತಂದೆ ಮಗುವಿಗೆ ಜೋಲಿ ಕಟ್ಟಿ ಆಡಿಸುತ್ತಿದ್ದಾರೆ ಮರ ಹಾಗೂ ಅಪಾರ್ಟ್ ಮೆಂಟ್ ಗೇಟ್ ಗೆ ಜೋಲಿ ಕಟ್ಟಿರೋ ತಂದೆ ತನ್ನ ಮಗುವನ್ನು ಆಡಿಸುತ್ತಿದ್ದಾರೆ
ಸೀರೆಯಲ್ಲಿ ಜೋಲಿ ಕಟ್ಟಿರೋ ತಂದೆ ಮಗುವಿನ ಲಾಲನೇ ಪಾಲನೇ ಮಾಡುತ್ತಿದ್ದು ಸಹಕಾರ ನಗರದ ಬಾಸ್ ಪಿಯು ಕಾಲೇಜ್ ಬಳಿ ಈ ದೃಶ್ಯ ಕಂಡು ಬಂದಿದೆ. ಪರೀಕ್ಷಾ ಕೇಂದ್ರದ ಸ್ವಲ್ಪ ದೂರದಲ್ಲೇ ಮಗುವನ್ನು ಆಡಿಸುತ್ತಿರೋ ತಂದೆ.