ಬೆಂಗಳೂರು: ಟ್ರಾಫಿಕ್ ಜಾಮ್, ವಾಯುಮಾಲಿನ್ಯ, ಮಿತಿಮೀರಿದ ಜನಸಂಖ್ಯೆಯ ನಡುವೆ ಸಿಲಿಕಾನ್ ಸಿಟಿ ಬೆಂಗಳೂರು ಹೊಸ ದಾಖಲೆಯೊಂದನ್ನ ಮಾಡಿದೆ. ಆದರೆ ದೆಹಲಿಯನ್ನೇ ಹಿಂದಿಕ್ಕೆ ಮಾಡಿರುವ ಈ ಸಾಧನೆ ಖುಷಿಯ ಬದಲು ಆತಂಕಕ್ಕೆ ಕಾಣವಾಗಿದೆ. ರಾಜ್ಯ ಸರ್ಕಾರದ ವಿಫಲತೆಯು ಎದ್ದು ಕಾಣ್ತಿದೆ. ಹಾಗಾದ್ರೆ ಆ ರೆಕಾರ್ಡ ಏನೂ ಅಂತೀರಾ ಈ ಸ್ಟೋರಿ ನೋಡಿ.
ಐಟಿ-ಸಿಟಿ, ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಇಡೀ ವಾರ್ಡ್ ಗೆ ಫೇವಸ್..ಕಿಲೋ ಮೀಟರ್ ಗಟ್ಟಲೇ ಜಾಮ್..ಗಟ್ಟೆಗಟ್ಟಲೇ ಟ್ರಾಫಿಕ್ ಗೆ ರಾಜಧಾನಿಯ ಜನ ಹೈರಾಣಗಿದ್ದಾರೆ. ಕಾರು-ಬೈಕ್ ಬಸ್ ಗಳು ಮಾತ್ರವಲ್ಲದೇ ಆ್ಯಂಬುಲೆನ್ಸ್ ಗಳು ಜಾಮ್ ನಲ್ಲಿ ಸಿಲುಕಿ ರೋಗಿಗಳು ಪರದಾಡ್ತಿದ್ದಾರೆ. ಈ ಗೋಳಾಟದ ನಡುವೆ ರಾಜ್ಯ ರಾಜಧಾನಿ ಅನಗತ್ಯವಾಗಿ ಹೊಸದಾಖಲೆ ಸೇರಿಸಿಕೊಂಡಿದೆ. ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿರುವ ವಾಹನಗಳ ಸಂಖ್ಯೆ ಆತಂಕ ಮೂಡಿಸಿದೆ. ಕಾರುಗಳ ಸಂಖ್ಯೆಯಲ್ಲಿ ದೆಹಲಿಯನ್ನೂ ಸರಿಗಟ್ಟಿ ಮುನ್ನುಗ್ತಿದೆ.
ಹೌದು.. ಬೆಂಗಳೂರು ಟ್ರಾಫಿನಲ್ಲಿಯೂ ವಿಶ್ವದ ಎರಡನೇ ನಗರ ಎಂಬ ಪಟ್ಟ ಅಲಂಕರಿಸಿಕೊಂಡಿದೆ. ಜೊತೆಗೆ ಕಾರುಗಳ ಸಂಖ್ಯೆಯಲ್ಲಿ ರಾಷ್ಟ್ರ ರಾಜಧಾನಿಯನ್ನ ಸೈಡ್ ಹೊಡೆದು ಮೊದಲ ಸ್ಥಾನಕ್ಕೆ ಬಂದಿದೆ. ಹಿಂದೆ ದೆಹಲಿಯಲ್ಲಿ 33.8 ಲಕ್ಷ ಕಾರುಗಳಿದ್ದವು, ಆವಾಗ ಎಚ್ಚೆತ್ತುಕೊಂಡ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ವಾಹನಗಳ ಆಯಸ್ಸಿನ ಮಿತಿ ಜಾರಿ ಮಾಡ್ತು. ಅದರಂತೆ ದೆಹಲಿ ಸರ್ಕಾರ ಪೆಟ್ರೋಲ್ ವಾಹನ 10 ವರ್ಷ ಹಾಗೂ ಡಿಸೇಲ್ ವಾಹನ 15 ವರ್ಷ ಆಗಿದ್ರೆ, ರಸ್ತೆಗೆ ಇಳಿಸಿದಂತೆ ನೋಡಿಕೊಂಡು. ಸ್ಕ್ರ್ಯಾಪಿಂಗ್ ಪಾಲಿಸಿ ತರುವಲ್ಲಿ ಯಶಸ್ವಿಯಾಯ್ತು. ಇದರಿಂದ ಕಾರುಗಳು ಸಂಖ್ಯೆ 33.8 ಲಕ್ಷದಿಂದ 20.7 ಲಕ್ಷ ಇಳಿಕೆಯಾಗಿದೆ. ಆದರೆ ಕರ್ನಾಟಕ ಸರ್ಕಾರ ಮಾತ್ರ ಗುಜರಿ ನೀತಿ ಜಾರಿಯಲ್ಲಿ ದೃಡ ನಿರ್ಧಾದ ತೆಗೆದುಕೊಳ್ಳದಿರುವುದು ಬೇಸರದ ಸಂಗತಿ…
ಸಿಲಿಕನ್ಸಿಟಿಯ ವಾಹನಗಳ ಸಂಖ್ಯೆ
1. 2021
ಒಟ್ಟು ವಾಹನ: 98 ಲಕ್ಷದ 81 ಸಾವಿರದ 358 ವಾಹನ
ದ್ವಿಚಕ್ರ ವಾಹನ: 65 ಲಕ್ಷದ 88 ಸಾವಿರದ 470
ಕಾರುಗಳು : 20 ಲಕ್ಷದ 85 ಸಾವಿರದ 384
=====
2. 2022
ಒಟ್ಟು ವಾಹನ: 1 ಕೋಟಿ 7 ಲಕ್ಷದ 9 ಸಾವಿರದ 289
ದ್ವಿಚಕ್ರ ವಾಹನ: 72 ಲಕ್ಷದ 46 ಸಾವಿರದ 248
ಕಾರುಗಳು : 21 ಲಕ್ಷದ 97 ಸಾವಿರದ 272
3. 2023
ಒಟ್ಟು ವಾಹನ: 1 ಕೋಟಿ 14 ಲಕ್ಷದ 28 ಸಾವಿರದ 331
ದ್ವಿಚಕ್ರ ವಾಹನ: 76 ಲಕ್ಷದ 77 ಸಾವಿರದ 541
ಕಾರುಗಳು: 23 ಲಕ್ಷದ 51 ಸಾವಿರದ 437
ನೋಡಿದ್ರಲ್ಲ ಬೆಂಗಳೂರಿನಲ್ಲಿ ತಿಂಗಳಿಗೆ ಸರಾಸರಿ 50 ಸಾವಿರಕ್ಕೂ ಅಧಿಕ ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಸಿಟಿಯಲ್ಲಿ ಸರಾಸರಿ ಪ್ರತಿ ಕಿಲೋಮೀಟರ್ ಗೆ 761 ಕಾರಗಳಿವೆ. ದೆಹಲಿ ಇದರ ಸಂಖ್ಯೆ 428 ಮಾತ್ರ. ಇದಕೆಲ್ಲ ಕಾರಣ ಸರ್ಕಾರ 15 ವರ್ಷ ಮೇಲ್ಪಟ್ಟ ವಾಹನಗಳನ್ನ ಗುಜರಿಗೆ ಹಾಕಲು ಕಡ್ಡಾಯ ನಿಯಮ ಜಾರಿ ಮಾಡದೇ ಇರೋದು. ಸಿಟಿಯಲ್ಲಿ ಸುಮಾರು 15 ಲಕ್ಷ ವಾಹನಗಳು ಆಯಸ್ಸು 15 ವರ್ಷ ದಾಟಿದೆಯಂತೆ. ಈ ಬಗ್ಗೆ ಸಾರಿಗೆ ಇಲಾಖೆ ವಾದವೇನು ಅಂತ ನೋಡೋದಾದ್ರೆ
ಸಾರಿಗೆ ಇಲಾಖೆ ಹೇಳೋದೇನು?
1. ರಾಜ್ಯದಲ್ಲಿ ಸ್ಕ್ರ್ಯಾಪಿಂಗ್ ಸೆಂಟರ್ ಗಳ ಕೊರತೆ, ಎರಡೇ ಕೇಂದ್ರಗಳು ಕಾರ್ಯನಿರ್ವಹಿಸ್ತಿವೆ
2. ದೆಹಲಿಯಲ್ಲಿ ಹಸಿರು ನ್ಯಾಯಮಂಡಳಿಯಿಂದ ವಾಹನಗಳಿಗೆ ವರ್ಷದ ಮಿತಿ ನಿಗದಿ
3. ದೆಹಲಿ ಹೊರತು ಯಾವ ರಾಜ್ಯದಲ್ಲಿಲೂ ಈ ಮಿತಿಯನ್ನ ವಿಧಿಸಿಲ್ಲ
4. ಕೇಂದ್ರ ಸರ್ಕಾರ ಗುಜುರಿ ನೀತಿ ಜಾರಿಗೆ ತಂದಿದೆ, ಅಲ್ಲಿ ಕಡ್ಡಾಯ ಅಂದಿಲ್ಲ
5. ವಾಹನ ಗುಜುರಿಗೆ ಹಾಕುವುದು ಜನರ ಆಯ್ಕೆಗೆ ಬಿಡಲಾಗಿದೆ
ರಾಜ್ಯದಲ್ಲಿ ಸ್ಕ್ರ್ಯಾಪಿಂಗ್ ಸೆಂಟರ್ ಗಳ ಕೊರತೆ, ಎರಡೇ ಕೇಂದ್ರಗಳು ಕಾರ್ಯನಿರ್ವಹಿಸ್ತಿವೆ ಅಂತಿದೆ ಸಾರಿಗೆ ಇಲಾಖೆ. ದೆಹಲಿಯಲ್ಲಿ ಹಸಿರು ನ್ಯಾಯಮಂಡಳಿಯಿಂದ ವಾಹನಗಳಿಗೆ ವರ್ಷದ ಮಿತಿ ನಿಗದಿ. ದೆಹಲಿ ಹೊರತು ಯಾವ ರಾಜ್ಯದಲ್ಲಿಲೂ ಈ ಮಿತಿಯನ್ನ ವಿಧಿಸಿಲ್ಲ. ಕೇಂದ್ರ ಸರ್ಕಾರ ಗುಜುರಿ ನೀತಿ ಜಾರಿಗೆ ತಂದಿದೆ, ಅಲ್ಲಿ ಕಡ್ಡಾಯ ಅಂದಿಲ್ಲ.
ಅಲ್ಲದೆ ರಾಜ್ಯ ಸರ್ಕಾರದಿಂದ ಸ್ಕ್ರ್ಯಾಪಿಂಗ್ ಹಾಕಿದವರಿಗೆ ಟ್ಯಾಕ್ಸ್ ವಿನಾಯತಿ ನೀಡುವುದು ತಡವಾಗಿದೆಯಂತೆ. ಹೊಸ ವಾಹನ ಖರೀದಿಯಲ್ಲಿ ಸ್ಕ್ರ್ಯಾಪಿಂಗ್ ಹಾಕಿದವರಿಗೆ ತೆರಿಗೆ ವಿನಾಯಿತಿ ನೀಡುವಲ್ಲಿ ತಡ ಮಾಡಿದ್ದು ಕೂಡ ಸ್ಕ್ಯಾಪಿಂಗ್ ಗೆ ಜನ ಹಿಂದೇಟು ಹಾಕುವಂತೆ ಆಗಿದೆ. ಒಟ್ಟಾರೆ ದಟ್ಟಣೆಯ ಕಾರಣವೊಡ್ಡಿ ಬೀದಿಬದಿ ವ್ಯಾಪರಿಗಳ ತೆರವು ಆಗ್ತಿದೆ ಆದರೆ ಸರ್ಕಾರ ಗಂಟೆ ಗಂಟೆಗೂ ಹೆಚ್ಚಾಗ್ತಿರುವ ವಾಹನಗಳ ಸಂಖ್ಯೆಗೆ ಕಡಿವಾಣ ಹಾಕ್ಲಿ..ಸಾರ್ವಜನಿಕ ಸಾರಿಗೆ ಬಳಸುವಂತೆ ಅನುಕೂಲ ಮಾಡಕೋಡಿ ಅಂತ ಜನರು ಆಗ್ರಹಿಸ್ತಿದ್ದಾರೆ. ಅಲ್ಲದೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಯುಮಾಲಿನ್ಯ ಕಡೆಗೂ ಗಮನ ಕೊಡಿ ಅನ್ನೋದು ಪರಿಸರ ಪ್ರೇಮಿಗಳ ವಾದ.