ಪೀಣ್ಯ ದಾಸರಹಳ್ಳಿ: ಬಾಗಲಗುಂಟೆಯ ಎಂ.ಇ.ಐ ಆಟದ ಮೈದಾನದ ರಸ್ತೆ ಹತ್ತಿರ ಎಂಇ.ಐ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಎಂ.ಇ.ಐ ಬಡಾವಣೆ ಯುವಕರ ಸಂಘದ ವತಿಯಿಂದ ಬಿಜೆಪಿ ಮುಖಂಡ ಲಕ್ಷ್ಮಣ ಗೌಡ ನೇತೃತ್ವದಲ್ಲಿ ಶ್ರೀ ರಾಮೋತ್ಸವ ಸಮಾರಂಭ ಆಚರಿಸಲಾಯಿತು.
ಶಾಸಕ ಎಸ್. ಮುನಿರಾಜು ಶ್ರೀ ರಾಮನ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿ ”ಭಾರತದ ಶತಕೋಟಿ ರಾಮನ ಭಕ್ತರು ಕಂಡಿದ್ದ ಕನಸು ಇಂದು ನನಸಾಗಿದೆ ಬರೋಬ್ಬರಿ 500 ವರ್ಷಗಳ ಹೋರಾಟದ ಫಲವಾಗಿ ಆಯೋಧ್ಯೆಯಲ್ಲಿ ತಲೆ ಎತ್ತಿ ನಿಂತಿರುವ ರಾಮ ಮಂದಿರದ ರಾಮಲಲ್ಲಾ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಗೊಂಡಿದೆ’ ಎಂದರು.
ಬಿಜೆಪಿ ಮುಖಂಡ ಲಕ್ಷ್ಮಣ ಗೌಡ್ರು ಮಾತನಾಡಿ ಇದು ಐತಿಹಾಸಿಕ ಕಾರ್ಯಕ್ರಮವಾಗಿ ದೇಶದಾದ್ಯಂತ ಸಂಭ್ರಮದ ವಾತಾವರಣ ಸೃಷ್ಟಿಯಾಗಿದ್ದು ದೇಶದ ಸಾವಿರಾರು ಗಣ್ಯರ ಸಮ್ಮುಖದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಲೋಕಾರ್ಪಣೆಗೊಳಿಸಿದ್ದಾರೆ. ಮತ್ತೊಮ್ಮೆ ಭಾರತ ದೇಶ ವಿಶ್ವಗುರುವಾಗಿದೆ’ ಎಂದರು.
ಸಮಾರಂಭದಲ್ಲಿ ಬಡಾವಣೆಯ 70 ವರ್ಷ ಮೇಲ್ಪಟ್ಟ ನೂರಕ್ಕೂ ಹೆಚ್ಚು ಹಿರಿಯ ನಾಗರಿಕರಿಗೆ ಅಭಿನಂದಿಸಲಾಯಿತು. ಅಲ್ಲಿ ನೆರೆದಿದ್ದ ಭಕ್ತಾದಿಗಳಿಗೆ ಪಾನಕ, ಸಿಹಿ ಮತ್ತು ಅನ್ನದಾಸೋಹ ನೀಡಲಾಯಿತು.
ಸಾವಿರಾರು ಭಕ್ತಾದಿಗಳು ಪೂಜೆಯಲ್ಲಿ ಪಾಲ್ಗೊಂಡು ಶ್ರೀ ರಾಮನ ಆಶೀರ್ವಾದ ಪಡೆದರು.