ಬೆಂಗಳೂರು: ನಗರದಲ್ಲಿ 29ನೇ ಮಹಡಿಯಿಂದ ಹಾರಿ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇಗೂರು ಕೊಪ್ಪ ರಸ್ತೆ ಪ್ರೆಸ್ಟೀಜ್ ಸಾಂಗ್ ಆಫ್ ದ ಸೌತ್ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ ̤
ಬಾಲಕಿ ಮಂಗಳವಾರ ರಾತ್ರಿ ಮಲಗಿದ್ದ ವೇಳೆ, ಇದ್ದಕ್ಕಿದ್ದಂತೆ ಮುಂಜಾನೆ 4:30ಕ್ಕೆ ಎದ್ದು ಹಾಲ್ಗೆ ಬಂದಿದ್ದಳು. ಈ ವೇಳೆ ಬಾಲಕಿಯನ್ನು ಆಕೆಯ ತಾಯಿ ವಿಚಾರಿಸಿದಾಗ, ಸರಿಯಾಗಿ ಉತ್ತರಿಸದೆ ಮತ್ತೆ ಮಲಗುವುದಾಗಿ ರೂಮಿಗೆ ತೆರಳಿದ್ದಳು. ಸುಮಾರು 5 ಗಂಟೆ ವೇಳೆಗೆ ಬಾಲಕಿ ಅಪಾರ್ಟ್ಮೆಂಟ್ ಮೇಲಿನಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮುಂಗೋಪಿಯಾಗಿದ್ದ ಮೃತ ಬಾಲಕಿ ಪೋಷಕರ ಬುದ್ದಿಮಾತಿಗೆ ಎದುರು ಉತ್ತರ ನೀಡುತ್ತಿದ್ದ ಬಾಲಕಿ ಆದ್ರೆ ಬಾಲಕಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಪೋಷಕರು ಬಾಲಕಿ ಹಾರಿದ 29ನೇ ಮಹಡಿಯಲ್ಲಿ ತಡೆಗೋಡೆ ಇತ್ತು ಸುಮಾರು 4 ಅಡಿ ಉದ್ದದ ತಡೆಗೋಡೆ ಇತ್ತು ತಡೆಗೋಡೆ ಮೇಲಿಂದ ಹಾರಿರುವ ಬಾಲಕಿ