ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೈಕ್ ಕಳ್ಳರ ಕಾಟ ಹೆಚ್ಚಾಗುತ್ತಿದ್ದು ಹೇಗೆಂದರೆ ನಕಲಿ ಕೀ ಮಾಡಿಸಿಕೊಂಡು ತನ್ನದೇ ಬೈಕ್ ಎಂದು ಕಳವು ಮಾಡುತ್ತಿರುವ ಕಳ್ಳರ ಗುಂಪು ಹೆಚ್ಚಾಗಿದೆ.
ಹೌದು ನಗರದಲ್ಲಿ ಬೆಳ್ಳಂಬೆಳಿಗ್ಗೆ ದುಬಾರಿ ಬೆಲೆಯ ಬೈಕ್ ಕದ್ದು ಎಸ್ಕೇಪ್ ಆದ ಕಳ್ಳ ಈ ಘಟನೆ ನಡೆದಿದ್ದು ಹೆಣ್ಣೂರಿನ ಸಾಯಿ ಗೋವಿಂದ್ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ.
ದೀಪಕ್ ಎಂಬುವರಿಗೆ ಸೇರಿದ 4 ಲಕ್ಷ ಮೌಲ್ಯದ ಕೆಟಿಎಂ ಬೈಕ್ ಕಳ್ಳತನ ಮಾಡಿದ್ದು ತನ್ನದೆ ಬೈಕ್ ಎಂಬಂತೆ ಬಂದು ಬೈಕ್ ಕೊಂಡೊಯ್ದ ಕಳ್ಳ
ಈ ಮೊದನೆ ಡೂಪ್ಲಿಕೇಟ್ ಕೀ ಮಾಡಿ ತಂದಿದ್ದ ಕಳ್ಳ ಬೆಳಿಗ್ಗೆ 8 ಗಂಟೆಗೆ ಅಪಾರ್ಟ್ಮೆಂಟ್ ಒಳಬಂದು ಕಳ್ಳತನ ಮಾಡಿದ್ದು ಬೈಕ್ ಕಳ್ಳತನದ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಅಪಾರ್ಟ್ಮೆಂಟ್ ಆಗಿದ್ದು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಪೊಲೀಸರು ಕಳ್ಳರಿಗಾಗಿ ಬಲೆ ಬೀಸಿದ್ದಾರೆ.