ಪೀಣ್ಯ ದಾಸರಹಳ್ಳಿ:’ ಕ್ಷೇತ್ರದಲ್ಲೆಡೆ ಸಾಕಷ್ಟು ಮೂಲಭೂತ ಸಮಸ್ಯೆಗಳಿವೆ. ಆದರೆ ಅನುದಾನದ ಕೊರತೆಯಿಂದಾಗಿ ಬಗೆಹರಿಸಲು ಸಾಧ್ಯವಾಗುತ್ತಿಲ್ಲ’ ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಬೇಕು ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.
ಬಾಗಲಗುಂಟೆ ವಾರ್ಡ್ ನೆನೆಗುದಿಗೆ ಬಿದ್ದಿದ್ದ ಚಿಮ್ನಿ ಹಿಲ್ಸ್ ರಸ್ತೆಗೆ ಡಾಂಬರೀಕರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ಷೇತ್ರದ ಎಲ್ಲಾ ಕಡೆ ನೀರು, ರಸ್ತೆ, ಚರಂಡಿ ಇನ್ನು ಅನೇಕ ಮೂಲಭೂತ ಸಮಸ್ಯೆಗಳಿವೆ. ಜನರು ಎಲ್ಲಿ ಹೋದರು ರಸ್ತೆ ಸರಿಪಡಿಸಲು ಮನವಿ ಮಾಡುತ್ತಿದ್ದಾರೆ ಆದರೆ ಅನುದಾನದ ಕೊರತೆಯಿಂದಾಗಿ ಸಾಧ್ಯವಾಗುತ್ತಿಲ್ಲ!’ ಎಂದರು.
ನನ್ನ ಕ್ಷೇತ್ರದ ಮತದಾರರು ನನಗೆ ಆಶೀರ್ವಾದ ಮಾಡಿದ್ದಾರೆ. ಅವರು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ನಾನು ಚಿರ ಋಣಿ, ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ತರುವ ಮೂಲಕ ಕೆಲಸ ಮಾಡಲು ಪ್ರಯತ್ನಿಸುತ್ತೇನೆ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಘು ಸೂರ್ಯ, ಚಿಕ್ಕಲಕ್ಕಣ್ಣ, ಜೈ ಶ್ರೀ ರಾಮ್ ವಿಜಯಲಕ್ಷ್ಮಿ, ತುಂಗಭದ್ರಾ, ಪದ್ಮ ಮುಂತಾದವರಿದ್ದರು.