ನಿನ್ನೆ ವಿಜಯಲಕ್ಷ್ಮೀ ಪತಿ ದರ್ಶನ್ ಮತ್ತು ಮಗ ವಿನಿಶ್ ಜೊತೆಗೆ ಫೋಟೋವನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದರು. ಜೊತೆಗೆ ‘‘ಇದು ನಾವು, ನಮ್ಮ ಒಬ್ಬ ಮಗನ ಜೊತೆ #ನನ್ನ ಫ್ಯಾಮಿಲಿಯೇ ನನಗೆಲ್ಲ’ ಎಂದು ಬರೆದುಕೊಂಡಿದ್ದರು. ಈ ಫೋಟೋ ಹೊರಬಿದ್ದಿದ್ದೇ ತಡ ಅತ್ತ ಪವಿತ್ರಾ ಗೌಡ ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.
ಹೌದು. ವಿಜಯಲಕ್ಷ್ಮೀಯವರು ಫೋಟೋ ಅಪ್ಲೋಡ್ ಮಾಡಿದ 2 ಗಂಟೆ ಬಳಿಕ ಪವಿತ್ರಾ ಗೌಡ ದರ್ಶನ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋಗೆ ‘ನಮ್ಮಿಬ್ಬರ ರಿಲೇಶನ್ಶಿಪ್ಗೆ 10 ವರ್ಷ’ ಎಂದು ಬರೆದುಕೊಂಡಿದ್ದಾರೆ. ಇದನ್ನು ಕಂಡ ವಿಜಯಲಕ್ಷ್ಮೀಯವರು ಪವಿತ್ರಗೌಡ ಮೊದಲ ಗಂಡನ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದಲ್ಲದೆ, ಆಕ್ರೋಶ ಹೊರಹಾಕಿದ್ದಾರೆ.