75ನೇ ಗಣರಾಜ್ಯೋತ್ಸವದ ಅಂಗವಾಗಿ ಕೆಪಿಸಿಸಿ ಕಚೇರಿ ಆವರಣದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ ನಂತರ ಮಾತಾಡಿದ ಖರ್ಗೆ ಅವರು ಪರೋಕ್ಷವಾಗಿ ಜಗದೀಶ್ ಶೆಟ್ಟರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ತತ್ವ ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಳ್ಳಲ್ಲ, ದೇಶದ ಐಕ್ಯತೆಗಾಗಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರು ತಮ್ಮ ಪ್ರಾಣಗಳನ್ನು ಬಲಿದಾನ ಮಾಡಿದ್ದನ್ನು ಯಾರೂ ಮರೆಯಬಾರದು, ಕಾಂಗ್ರೆಸ್ ಬಡವರು, ದಲಿತರು, ಕೃಷಿಕರು, ಶೋಷಿತರು ಮತ್ತು ಮಹಿಳೆಯರ ಬಗ್ಗೆ ಕಾಳಜಿ ಮತ್ತು ಗೌರವ ಹೊಂದಿರುವ ಪಕ್ಷ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಜೊತೆಗೆ ಆರ್ಎಸ್ಎಸ್ ನವರು ನಾವೇ ದೇಶ ಕಾಪಾಡುವವರು. ಬೇರೆ ಯಾರೂ ಇಲ್ಲ ಅಂತ ದೇಶಭಕ್ತಿ ಬಗ್ಗೆ ಮಾತಾಡ್ತಾರೆ. ಸ್ವಾತಂತ್ರ್ಯ ಬಂದಿದ್ದು, ತಂದಿದ್ದು ಕಾಂಗ್ರೆಸ್ ಪಕ್ಷ. ಕರ್ನಾಟಕದ ಅನೇಕ ಮಹಾಪುರುಷರು ಇದಕ್ಕೆ ಹೋರಾಟ ಮಾಡಿ ಸ್ವಾತಂತ್ರ್ಯವನ್ನು ತಂದಿದ್ದಾರೆ. ಆದರೆ ಇವತ್ತು ಈ ಬಿಜೆಪಿ, ಪ್ರಧಾನಮಂತ್ರಿ ಮತ್ತು ಗೃಹ ಮಂತ್ರಿ ಸೇರಿ ತಮ್ಮ ಕೈಗೊಂಬೆನ್ನಾಗಿ ಮಾಡಿಟ್ಟುಕೊಳ್ಳಬೇಕು ಅಂತ ಸರ್ವ ಪ್ರಯತ್ನ ನಡೆದಿದೆ. ಸ್ವಾತಂತ್ರ್ಯ ಸಂವಿಧಾನ ಉಳಿದರೆ ಮುಂದಿನ ಪೀಳಿಗೆಗೆ ಭವಿಷ್ಯಕ್ಕೆ ಒಳ್ಳೆಯದಾಗುತ್ತದೆ. ಪ್ರಜಾಪ್ರಭುತ್ವ ಇಲ್ಲ ಅಥವಾ ಸಂವಿಧಾನ ಇಲ್ಲ ಅಂದ್ರೆ ನಮಗೆ ಯಾರಿಗೂ ಕೂಡ ಮುಂದೆ ಅವಕಾಶ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ