ಜನವರಿ 26 ಭಾರತಕ್ಕೆ ತುಂಬಾನೇ ಮಹತ್ವದ ದಿನ.ಈ ದಿನವನ್ನ ದೇಶದೆಲ್ಲಡೆ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗ್ತದೆ. ಈ ಬಾರಿಯೂ 75 ನೇ ಗಣರಾಜ್ಯೋತ್ಸವನ್ನ ಎಲ್ಲಡೆ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ರಾಜಧಾನಿ ಬೆಂಗಳೂರಿನಲ್ಲೂ ಗಣರಾಜ್ಯೋತ್ಸವ ದೇಶಭಕ್ತಿಯನ್ನ ಮೊಳಗಿಸಿತ್ತು. ಹಾಗಾದ್ರೆ ನಗರದ ಮಾಣಿಷ್ ಷಾ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಹೇಗಿತ್ತು ಬನ್ನಿ ತೋರಿಸ್ತೀವಿ
ಮೈದಾನದಲ್ಲಿ ತುಂಬಿದ ತ್ರಿವರ್ಣದ ರಂಗು. ಮನದೊಳಗೆ ರಾಷ್ಟ್ರಭಕ್ತಿಯ ಪುಳಕ.. ಧ್ವಜಾರೋಹಣದ ವೇಳೆ ಸುರಿದ ಹೂಮಳೆ. ಜನಗಣಮನದ ನಾದಕ್ಕೆ ಉದೆಯಉಬ್ಬಿಸಿದ ಜನ.. ಮೈ ಜಮ್ಮೆನಿಸಿದ ಸಾಹನ ಬೈಕ್ ಪ್ರದರ್ಶನ… 75 ನೇ ಗಣರಾಜ್ಯೋತ್ಸವಕ್ಕೆ ನಗರದ ಮಾಣಿಕ್ ಷಾ ಪರೇಟ್ ಮೈದಾನ ಇಂದು ಸಾಕ್ಷಿಯಾಗಿದ್ದು ಹೀಗೆ.. ಸಮಾರಂಭದಲ್ಲಿ ಸೇನೆ ಹಾಗೂ ವಿದ್ಯಾರ್ಥಿ ತಂಡಗಳು ಚಿತ್ತಾಕರ್ಷಕ ಪಥ ಸಂಚಲನ ನಡೆಸಿದ್ರೆ ,ವಿವಿಧ ಶಾಲೆಗಳ ಮಕ್ಕಳು ರಾಷ್ಟ್ರಭಕ್ತಿ ಗೀತೆಗಳಿಗೆ ಹೆಜ್ಜೆಯಾದರು.
ಹೌದು.. ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ ಗಣರಾಜ್ಯೋತ್ಸವ ಸಂಭ್ರಮ ಇವತ್ತು ಕಳೆಗಟ್ಟಿತ್ತು. ಮೈದಾನ ಮಧುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಮಾಣಿಕ್ ಷಾ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಬೆಂಗಳೂರು ನಗರ ಡಿಸಿ, ಕೆಎ ದಯಾನಂದ್ , ನಗರ ಪೊಲೀಸ್ ಆಯುಕ್ತರು ಭಾಗಿಯಾಇಗಿದ್ರು. ಬ್ಯಾಂಡ್ ಮೂಲಕ ರಾಷ್ಟ್ರಗೀತೆ ನುಡಿಸಿ ರಾಜ್ಯಪಾಲ ಥಾವರ್ ಚಂದ್ ಗೆಲ್ಲೋಟ್ ಗೆ ನಮನ ಸಲ್ಲಿಸಲಾಯಿತು. ನಂತರ ತೆರದ ಜೀಪ್ ನಲ್ಲಿ ಪರೇಟ್ ತಂಡಗಳ ಪರಿವೀಕ್ಷಣೆ ಮಾಡಿದರು. ಬಳಿಕ ರಾಜ್ಯವನ್ನಉದ್ದೇಶಿಸಿ ಭಾಷಣ ಮಾಡಿ ಅವರು ನಾಡಿನ ಜನತೆಗೆ 75ನೇ ಗಣರಾಜ್ಯೋತ್ಸವದ ಶುಭಾಶಷ ತಿಳಿಸಿದರು. ಐತಿಹಾಸಿಕ
ದಿನದಂದು ಭಾರತದ ಸಂವಿಧಾನವು ಜಾರಿಗೆ ಬಂದಿದೆ. ಸಂವಿಧಾನವು ಭಾರತದ ನಾಗರೀಕರಿಗೆ ನ್ಯಾಯ, ಸ್ವಾತಂತ್ರ್ಯ ಹಾಗೂ ಸಮಾನತೆಯ ಅವಕಾಶವನ್ನ ಒದಗಿಸಿದೆ. ದೇಶದ ಸಮಗ್ರತೆ, ಏಕತೆಯನ್ನು ಕಾಪಾಡುವ ಜೊತೆಗೆ ಸ್ವಾಭಿಮಾನದ ಜೀವನ ಒದಗಿಸುವ ಧ್ಯೇಯವನ್ನು ಹೊಂದಿದೆ.ಸರ್ಕಾರವು 5 ಗ್ಯಾರಂಟಿಗಳನ್ನು ಜಾರಿಗೊಳಿಸುವ ಭರವಸೆ ನೀಡಿತ್ತು. ಅದರಂತೆ ಎಲ್ಲಾ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿರುತ್ತೇವೆಂದು ಹರ್ಷಿಸುತ್ತೇನೆ. ರಾಜ್ಯದ 223 ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ. ಬರ ಪರಿಹಾರವಾಗಿ ರೈತರಿಗೆ 2000 ರೂಪಾಯಿ ನೀಡಲಾಗಿದೆ. ಕುಡಿಯುವ ನೀರಿಗಾಗಿ ವಿಶೇಷ ಯೋಜನೆ ಜಾರಿಗೆ ತರಲಾಗಿದೆ. ರೈತರ ಸಂಕಷ್ಟ ನಿವಾರಿಸಲು ವಿವಿಧ ಯೋಜನೆಗಳಡಿ ಸಬ್ಸಿಡಿ ನೀಡಲಾಗುತ್ತಿದೆ ಎಂದರು
ಇನ್ನೂ ನಗರದ ವಿವಿಧ ಸರ್ಕಾರಿ ಶಾಲೆಗಳ 700 ವಿದ್ಯಾರ್ಥಿಗಳು ಈ ದೇಶವು ನಮಗಾರಿಯೇ ಗೀತೆಗೆ ಹೆಜ್ಜೆ ಹಾಕಿದರು. ಬಿಬಿಎಂಪಿಯ ಪಿಳ್ಳಪ್ಪ ಗಾರ್ಡನ್ ಶಾಲೆಯ 700 ಮಕ್ಕಳಿಂದ ಅಕ್ಷರದದ್ವ ಸಾವಿತ್ರಬಾಯಿ ಫುಲೆ ನೃತ್ಯ ನೋಡುಗರ ಮನಸೂರೆಗೊಂಡಿತ್ತು. ಇನ್ನು ಸಾಂಸ್ಕೃತಿ ಕಾರ್ಯಕ್ರಮದ ಬಳಿಕ ಕಾಮರಾಜ್ ಎಎಸ್ಸಿ ಸೆಂಟರ್ ಹಾಗೂ ಕಾಲೇಜು ತಂಡದಿಂದ ನಡೆಸಿಕೊಟ್ಟ ಸಾಹಸ ಬೈಟ್ ಪ್ರದರ್ಶನ ಪ್ರೇಕ್ಷಕರ ಮೈ ಜಮ್ಮೆನಿಸಿತು. ಬುಲೆಟ್ ಬೈಕ್ ಗಳ ಮೇಲೆ ಒಂಟಿ ಕಾಲಿನಲ್ಲಿ ನಿಂತು, ಕಾಲು ಮೇಲೆ ಮಾಡಿ, ಚಲಿಸುತ್ತಿರುವ ಬೈಕ್ ಮಿಲಿಟಿರಿ ಪೊಲೀಸರು ನೋಡುರನ್ನ ರೋಮಾಚನಗೊಳಿಸಿದರು. ಬಳಿಕ ನೋಡುರನ್ನ ನಿಬ್ಬೆರಗಾಗಿದ ತಂಡಗಳಿಗೆ ರಾಜ್ಯಪಾಲರು ಬಹುಮಾನ ವಿತರಣೆ ಮಾಡಿದರು
ಭಾರತವು ಜನವರಿ 26, 1950 ರಂದು ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣರಾಜ್ಯವಾಯಿತು. 1950ರಿಂದ ಇಂದಿನವರೆಗೆ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಂದು ಕೂಡ ರಾಜಧಾನಿ ಬೆಂಗಳೂರಿನಲ್ಲಿ ಗಣರಾಜ್ಯೋತ್ಸವ ದೇಶಭಕ್ತಿಯನ್ನ ಮೊಳಗಿಸಿತ್ತು