ಬೆಂಗಳೂರು: ಮಂಡ್ಯದಲ್ಲಿ ಹನುಮ ಧ್ವಜ ಇಳಿಸಿದ ವಿಚಾರ ಬಗ್ಗೆ ವಿಧಾನ ಪರಿಷತ್ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯ ಹೊತ್ತಿ ಉರಿಯುತ್ತಿದೆ. ಕೆರೆಗೋಡುಗೆ ನಾನೇ ಹೋಗಿದ್ದೆ. ಈ ದೇಶದಲ್ಲಿ ರಾಷ್ಟ್ರ ಧ್ವಜ ಹಾರಿಸಲು ನಿಯಮ ಇದೆ. ನಿಯಮದ ಪ್ರಕಾರ ಧ್ವಜ ಹಾರಿಸಿಲ್ಲ. ನೀವು ಯಾರನ್ನ ಓಲೈಕೆ ಮಾಡಲು ಹೀಗೆ ಮಾಡ್ತಿದ್ದೀರಿ.
ಪೊಲೀಸರು ಬೂಟು ಕಾಲಲ್ಲೇ ಹೋಗಿ ಧ್ವಜವನ್ನ ಮಧ್ಯಾಹ್ನ 3 ಗಂಟೆಗೆ ಹಾರಿಸಿದ್ದಾರೆ ಜಮ್ಮು, ಕಾಶ್ಮೀರದಲ್ಲಿ ಕಾಂಗ್ರೆಸ್ ಅವರ ಯೋಗ್ಯತೆಗೆ ಬಾವುಟ ಹಾರಿಸಲು ಆಗಲಿಲ್ಲ. ದಲಿತರಿಗೆ ಮೀಸಲಾತಿ ಕೊಟ್ಟಿರಲಿಲ್ಲ. ಮೀಸಲಾತಿ ಕೊಡಿಸಿದವರು ಮೋದಿ. ಬಿಜೆಪಿ ಮೀಸಲಾತಿ ವಿರೋಧಿ ಅಂತ ಹೇಳ್ತಾರೆ. ಯಾವುದಕ್ಕೂ ಇತಿಮಿತಿ ಇರಬೇಕು.
ಕಾಂಗ್ರೆಸ್ ಪಕ್ಷ ಈ ದೇಶದಲ್ಲಿ ನುಚ್ಚು, ನೂರು ಆಗಲಿದೆ. ಇಂಡಿ ಒಕ್ಕೂಟ ಚುನಾವಣೆ ಮೊದಲೇ ಉದುರಿಹೋಗುತ್ತೆ. ಇದನ್ನ ನೀವು ಅರ್ಥ ಮಾಡಿಕೊಳ್ಳಿ. ಕಾಂಗ್ರೆಸ್ ನಾಯಕರಿಗೆ ಛಲವಾದಿ ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.