ಬೆಂಗಳೂರು:- ಬಿಜೆಪಿ ಸೇರ್ಪಡೆಯ ಊಹಾಪೋಹ ಸುದ್ದಿಗಳಿಗೆ ಶಾಸಕ ಲಕ್ಷ್ಮಣ್ ಸವಧಿ ಸ್ಪಷ್ಟನೆ ಕೊಟ್ಟಿದ್ದಾರೆ.
ದೇವನಹಳ್ಳಿ ಏರ್ಪೋರ್ಟ್ ನಲ್ಲಿ ಮಾತನಾಡಿದ ಅವರು, ಇಲ್ಲಾ ಎಂದು ಕಡ್ಡಿ ತುಂಡಾಗುವಂತೆ ಬಿಜೆಪಿ ಸೇರ್ಪಡೆಯನ್ನು ನಿರಾಕರಿಸಿದ್ದಾರೆ. ಈಗಾಗಲೇ ಹತ್ತು ಸಲ ಹೇಳಿದ್ದೇನೆ. ಈಗ ಹನ್ನೊಂದು ಸಲ ಹೇಳ್ತಿದ್ದೇನೆ. ಮುಂದೆಯೂ ಹೇಳ್ತೇನೆ. ನಾನು ಬಿಜೆಪಿಗೆ ಸೇರಲ್ಲ ಎಂದರು.
ಇದೇ ವೇಳೆ ಕೆರೆಗೋಡು ದ್ವಜ-ದಂಗಲ್ ರಾಜಕೀಯದ ಪ್ರಶ್ನೆಗೆ ಕೆಂಡಾಮಂಡಲ ಆದ ಸವದಿ, ವಿನಾಕಾರಣ ಮಾಧ್ಯಮಗಳು ಕೆರೆಗೋಡು ವಿಷಯವನ್ನು ರಾಜಕೀಯ ಮಾಡ್ತಿವೆ. ಕಾಂಗ್ರೆಸ್-ಬಿಜೆಪಿ ಪಕ್ಷಗಳೆರಡು ರಾಮ-ಹನುಮನನ್ನ ರಾಜಕೀಯ ಮಾಡ್ತಿವೆ ಎಂದಿದ್ದಕ್ಕೆ ಲಕ್ಷ್ಮಣ್ ಸವದಿ ಕೋಪಗೊಂಡಿದ್ದಾರೆ.
ನೀವೆ ಮಂಡ್ಯದ ಪ್ರಜೆಯಾಗಿ ಮಾತನಾಡಿ ಎಂದು ಮರುಪ್ರಶ್ನೆ..!? ಮಾಡಿದ್ದಾರೆ. ಮಾಧ್ಯಮಗಳಿಗೆ ಸುದ್ದಿಮಾಡಲು ಅನೇಕ ವಿಷಯಗಳಿವೆ..!?ರಾಜ್ಯದಲ್ಲಿ ಮಳೆಯಿಲ್ಲ ಬರ ಇದೆ. ಬೇರೆ ಅನೇಕ ವಿಷಯಗಳಿವೆ, ಈ ಬಗ್ಗೆ ನೀವ್ಯಾರು ಮಾತನಾಡ್ತಿಲ್ಲ..!!ರಾಮ ಮತ್ತು ಹನುಮಂತನ ನ್ನು ಹಿಡಿದುಕೊಂಡಿದ್ದೀರಿ ಎಂದು ಲಕ್ಷ್ಮಣ್ ಸವದಿ ಕೋಪವಾಗಿದ್ದಾರೆ.
ಇನ್ನೂ ಇದೇ ವೇಳೆ ಕೇಂದ್ರ ಬಜೆಟ್ ಮಂಡನೆ ವಿಚಾರವಾಗಿ ಮಾತನಾಡಿದ ಅವರು, 2024ರ ಕೇಂದ್ರದ ಬಜೆಟ್ ಚುನಾವಣಾ ಪೂರ್ವ ಬಜೆಟ್ ಆಗಲಿದೆ. ಬಜೆಟ್ ಬಗ್ಗೆ ನಮಗೆ ಯಾವ ನಿರೀಕ್ಷೆಯೂ ಇಲ್ಲ. ಈಗ ಚುನಾವಣೆ ಸಮೀಪಿಸುತ್ತಿರುವುದರಿಂದ ಚುನಾವಣೆನ ಮನದಲ್ಲಿ ಇಟ್ಟುಕೊಂಡೆ ಬಜೆಟ್ ಘೋಷಣೆ ಮಾಡ್ತಾರೆ,,ಭದ್ರಾ ಮೇಲ್ದಂಡೆ ಯೋಜನೆಗೆ ಐದು ಸಾವಿರ ಘೋಷಿಸಿದ್ದರು..!? ಕೊಟ್ರಾ.. ಎಂದು ಪ್ರಶ್ನೆ.. ಮಾಡಿದರು.