ಜನಪ್ರಿಯ ಊಟವೆಂದರೆ ಅದು ಬಾಳೆಹಣ್ಣು ಮತ್ತು ಹಾಲು. ನೈಸರ್ಗಿಕವಾಗಿ ತೂಕ ಪಡೆಯಲುಅಥವಾ ಸ್ನಾಯುವಿನ ದ್ರವ್ಯರಾಶಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಜನರಿಗೆ ಇದನ್ನು ಸೇವಿಸಲು ಹೇಳಲಾಗುತ್ತದೆ ಕೂಡ. ಈ ಎರಡೂ ಆಹಾರಗಳು ಒಟ್ಟಿಗೆ ತಿನ್ನುವುದು ತೃಪ್ತಿಕರ ಸಂಯೋಜನೆಯಾಗಿದ್ದರೂ ಅವುಗಳ ಪೌಷ್ಠಿಕಾಂಶದ ಮೌಲ್ಯವನ್ನು ಮರೆಯಬಾರದು. ಆಯುರ್ವೇದದ ಪ್ರಕಾರ ಬಾಳೆಹಣ್ಣು ಮತ್ತು ಹಾಲು ಎರಡೂ ಒಟ್ಟಿಗೆ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಿಳಿಸುತ್ತದೆ. ಅದು ಏಕೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಹಾಲಿನೊಂದಿಗೆ ಬಾಳೆಹಣ್ಣನ್ನು ತಿನ್ನುವುದು ಒಳ್ಳೆಯದಲ್ಲ ಏಕೆ?
ಆಯುರ್ವೇದದಲ್ಲಿ ಪ್ರತಿ ಆಹಾರವು ರುಚಿ ಮತ್ತು ಜೀರ್ಣಕ್ರಿಯೆಯ ನಂತರದ ಪರಿಣಾಮವನ್ನು ಹೊಂದಿರುತ್ತದೆ. ಜೊತೆಗೆ ಶಾಖ ಮತ್ತು ತಂಪಾಗಿಸುವ ಶಕ್ತಿಗಳನ್ನು ಅನುಸರಿಸುತ್ತದೆ. ವ್ಯಕ್ತಿಯು ಗ್ಯಾಸ್ಟಿçಕ್ ಆಹಾರವು ಹೇಗೆ ಜೀರ್ಣವಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಹಾಗೂ ಸರಿಯಾದ ಆಹಾರ ಸಂಯೋಜನೆಗಳು ಅತ್ಯಗತ್ಯವಾಗಿರುತ್ತದೆ. ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ಅಂದರೆ ಆಯುರ್ವೇದದಲ್ಲಿಹಾಲು ಮತ್ತು ಬಾಳೆಹಣ್ಣು ಒಟ್ಟಿಗೆ ಸೇವಿಸುವುದು ಒಳ್ಳೆಯದಲ್ಲ ಎಂದಿದೆ.
ಹಾಲು ಮತ್ತು ಬಾಳೆಹಣ್ಣು ಪರಸ್ಪರ ಪೌಷ್ಟಿಕಾಂಶದ ಕೊರತೆಯನ್ನುತುಂಬುತ್ತವೆ. ಇವುಗಳನ್ನು ಸೇವಿಸುವುದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡವನ್ನುಉಂಟುಮಾಡುತ್ತದೆ. ಅದು ಭಾರವಾಗಿರುತ್ತದೆ ಮತ್ತು ಸೈನಸ್ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕಿಬ್ಬೊಟ್ಟೆಯ ಗ್ಯಾಸ್ಟಿçಕ್, ಸೈನಸ್ ದಟ್ಟಣೆ,
ಶೀತ, ಕೆಮ್ಮು, ದೇಹದ ಮೇಲೆ ದದ್ದುಗಳು, ವಾಂತಿ, ಭೇದಿ ಮುಂತಾದ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳಬಹುದು. ಆಯುರ್ವೇದದಲ್ಲಿ ಹಾಲು ಮತ್ತು ಬಾಳೆಹಣ್ಣು ಒಟ್ಟಿಗೆ ಸೇವಿಸುವುದು ದೇಹದಲ್ಲಿ ವಿಷತ್ವವನ್ನು(Toxic) ಉಂಟುಮಾಡುತ್ತದೆ ಎಂದು ನಂಬಲಾಗಿದೆ. ಅದು ದೇಹದ ಕಾರ್ಯಗಳಿಗೆ ಅಡ್ಡಿಯಾಗಬಹುದು. ಭಾರದಿಂದಾಗಿ ಮೆದುಳಿನ ಕಾರ್ಯವನ್ನು ನಿಧಾನಗೊಳಿಸುತ್ತದೆ ಎಂದು ಹೇಳಲಾಗಿದೆ.
ಹಾಲು ಮತ್ತು ಬಾಳೆಹಣ್ಣು ಹೇಗೆ ಸೇವಿಸಬೇಕು?
ಡಯೆಟ್, ಫಿಟ್ನೆಸ್, ಬಾಡಿಬಿಲ್ಡ್, ವ್ಯಾಯಾಮ ಮಾಡುವವರು ನೀವಾಗಿದ್ದರೆ, ಸಾಮಾನ್ಯ ಜನರೂ ಸಹ ಹಾಲು ಮತ್ತು ಬಾಳೆಹಣ್ಣನ್ನು ಒಟ್ಟಿಗೆ ಸೇವಿಸಲು 20 ನಿಮಿಷಗಳ ಅಂತರವನ್ನು ಇಟ್ಟುಕೊಳ್ಳಬೇಕು ಎಂದು ಪೌಷ್ಠಿಕಾಂಶ ಮತ್ತು ಆಹಾರ ತಜ್ಞರು ಹೇಳುತ್ತಾರೆ. ಅವುಗಳನ್ನು ಒಟ್ಟಿಗೆ ಆನಂದಿಸಲು ಬಯಸಿದರೆ ಸುರಕ್ಷಿತ ಸೇವನೆಗಾಗಿ ಬಾಳೆಹಣ್ಣುಗಳಿಗೆ ಮತ್ತೊಂದು ಡೈರಿ ಅಂಶವನ್ನು ಸೇರಿಸಲು ಪ್ರಯತ್ನಿಸಿ. ಅಂದರೆ ಬಾಳೆಹಣ್ಣಿನ ಮಿಲ್ಕಶೇಕ್ ಅಥವಾ ಸ್ಮೂಥೀಸ್ ಮಾಡುವುದಾದರೆ ಅದಕ್ಕೆ ಐಸ್ ಕ್ರೀಮ್ ಅಥವಾ ಡೇಟ್ಸ್ ಅನ್ನು ಸೇರಿಸಿ.