ಬೆಂಗಳೂರು: ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮಂತ್ರದಡಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಹಾಗೆ ಈ ಬಜೆಟ್ ಬಡವರು, ರೈತರು, ಮಧ್ಯಮ ವರ್ಗಕ್ಕೆ ಪೂರಕವಾಗಿದ್ದು ಇದೊಂದು ಆಶಾದಾಯಕವಾಗಿದೆ ಹಾಗೆ ಚಾರಿತ್ರಿಕ ಬಜೆಟ್ ಆಗಿದೆ ಎಂದು ಎಂದು ಪರಿಷತ್ ಸದಸ್ಯ ಟಿ.ಎ.ಶರವಣ ಅವರು ತಿಳಿಸಿದ್ದಾರೆ.
ಆರ್ಥಿಕ ಸ್ಥಿರತೆ, ಸಮಗ್ರ ಅಭಿವೃದ್ದಿ, ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡುವ, ಬಡವರು, ರೈತರು, ಮಾಧ್ಯಮ ವರ್ಗಕ್ಕೆ ಸ್ಪಂದಿಸುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2024-2 5ನೆ ಸಾಲಿನ ಬಜೆಟ್ ಪ್ರಗತಿಗೆ ಪೂರಕವಾಗಿದೆ ಎಂದು ತಿಳಿಸಿದ್ದಾರೆ
ಹಾಗೆ ಕೈಗಾರಿಕೆ, ಉದ್ಯೋಗ ಸೃಷ್ಟಿ, ಬಡತನ ನಿವಾರಣೆ, ರೈತರ ಪ್ರಗತಿ ಹೀಗೆ ಸರ್ವತೋ ಮುಖಿ ಮತ್ತು ಸರ್ವ ಸ್ಪರ್ಶಿಯಾಗಿರುವ ಈ ಬಜೆಟ್ ಭಾರತದ ಭವಿಷ್ಯತ್ತಿನ ದೃಷ್ಟಿಯಿಂದ ಸುಸ್ಥಿರ ವಾಗಿದೆ.
ಐದು ಟ್ರಿಲಿಯನ್ ಡಾಲರ್ ಎಕಾನಮಿ ಎನ್ನುವುದು ಭಾರತವನ್ನು ವಿಶ್ವದ ಬಲಿಷ್ಠ ರಾಷ್ಟ್ರ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆ ಆಗಿದ್ದು, ಆ ದಿಕ್ಕಿನಲ್ಲಿ ಇದೊಂದು ಚಾರಿತ್ರಿಕ ಬಜೆಟ್ ಆಗಿದೆ.
ಬರುವ ಎರಡು ದಶಕಗಳಲ್ಲಿ ಭಾರತವನ್ನು ಜಗತ್ತಿನ ಶಕ್ತಿಯಾಗಿ ರೂಪಿಸುವಲ್ಲಿ ಈ ಬಜೆಟ್ ಮಾರ್ಗ ಸೂಚಿ ಆಗಿದೆ.
ಮದ್ಯಮ ವರ್ಗಗಳಿಗೆ ಏಳು ಲಕ್ಷ ವರೆಗಿನ ಶೂನ್ಯ ತೆರಿಗೆ, ಕಾರ್ಪೊರೇಟ್ ತೆರಿಗೆ ಶೇಕಡಾ 22ರವರೆಗೆ ಇಳಿಕೆ, ಯುವ ಉದ್ಯೋಗಿಗಳಿಗೆ ಆಧುನಿಕ ತಂತ್ರಜ್ಞಾನ ಆಧಾರಿತ ಉದ್ಯಮಕ್ಕಾಗಿ ಒಂದು ಲಕ್ಷ ಕೋಟಿ ರೂಪಾಯಿ ನಿಧಿ ಇವೆಲ್ಲ ಸುಧಾರಣೆಯ ನಿಟ್ಟಿನಲ್ಲಿ ಅಭೂತ ಪೂರ್ವ ಯೋಜನೆಗಳಾಗಿವೆ.
ರೈತ ಪರ ಕಿಸಾನ್ ಸಮ್ಮಾನ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಅಯುಷ್ಮನ್, ಪ್ರಧಾನಿ ಅವಾಸ್ ಯೋಜನೆಯಲ್ಲಿ ಎರಡು ಕೋಟಿ ಮನೆಗಳ ನಿರ್ಮಾಣ ಇವು ದೇಶದ ಹಿರಿಮೆಯ ಘೋಷಣೆ ಗಳಾಗಿವೆ.
ಕೆಲವು ವಿವಾದಿತ ತೆರಿಗೆ ಸ್ಲಾಬ್ ಗಳನ್ನು ರದ್ದು ಮಾಡಿರುವುದು ಸುಧಾರಣಾ ಕ್ರಮಗಳಾಗಿವೆ.
ವಿವಿಧ ರೀತಿಯ ಕಾರಿಡಾರ್ ಸ್ಥಾಪನೆ, ರೈಲು ಭೋಗಿಗಳ ಉನ್ನತೀಕರಣ, ಫಸ್ಟ್ ಡೇವಲಪ್ ಇಂಡಿಯಾ ಘೋಷಣೆ, ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಜೊತೆಗೆ ಜೈ ಅನುಸಂಧಾನ್ ಘೋಷಣೆಗಳು ಮೋದಿ ಸಾರಥ್ಯದಲ್ಲಿ ಹೊಸ ಭಾರತ ಕಟ್ಟುವ ನಿಟ್ಟಿನಲ್ಲಿ ಘೋಷ ವಾಕ್ಯ ಗಳಾಗಲಿವೆ.