ಬೆಂಗಳೂರು: ನಿರ್ಮಲಾ ಸೀತಾರಾಮನ್ ಅವರು 2024-25 ನೇ ವರ್ಷದ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ, ಇದೊಂದು ನಿರಾಶಾದಾಯಕ ಬಜೆಟ್, ಹಾಗೆ ವಿನಾಶಕಾರಿ ಭಾರತ ಮಾಡೋ ಬಜೆಟ್ ಆಗಿದೆ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಚುನಾವಣೆ ಇರೋದ್ರಿಂದ ಫುಲ್ ಬಜೆಟ್ ಮಂಡಿಸಲು ಆಗದಿರಬಹುದು
ಇದು ಎಲೆಕ್ಷನ್ ಬಜೆಟ್ ಬಜೆಟ್ ಗಾತ್ರ 47, 65, 768 ಕೋಟಿ ಬಜೆಟ್ ಮಂಡಿಸಿದ್ದಾರೆ ಕಳೆದ ವರ್ಷಕ್ಕಿಂತ 5.8% ಜಾಸ್ತಿ ಆಗಿದೆ ಬಜೆಟ್ ಗಾತ್ರ 47 ಲಕ್ಷ ಕೋಟಿ ರೂಗಳಲ್ಲಿ 16,85,494 ಕೋಟಿ ಸಾಲ ಮಾಡಿದ್ದಾರೆ ಕೇಂದ್ರದ ಒಟ್ಟು ಸಾಲ 190 ಲಕ್ಷ ಕೋಟಿ ಈ ಬಜೆಟ್ ನಲ್ಲಿ ಸಾಲದ ಬಟ್ಟಿ ಪಾವತಿ 11,91,000 ಕೋಟಿ ಒಟ್ಟಾರೆ ಈ ಬಜೆಟ್ ನಿರಾಶಾದಾಯಕ ಬಜೆಟ್, ಚುನಾವಣಾ ಬಜೆಜ್ ಯಾವುದೇ ಹೊಸ ಕಾರ್ಯಕ್ರಮಗಳು ಇಲ್ಲ ಎಂದು ಹೇಳಿದ್ದಾರೆ.
ಈ ಬಜೆಟ್ ನಲ್ಲಿ ಜನರ ಮುಂದಿಡುವುದಕ್ಕಿಂತ ಮುಚ್ಚಿಟ್ಟಿರುವುದೇ ಜಾಸ್ತಿ ನಿರುದ್ಯೋಗ, ಬೆಲೆ ಏರಿಕೆ, ರೈತರ ಸಮಸ್ಯೆ, ಬರಗಾಲದ ಬಗ್ಗೆ ಹೇಳಿಲ್ಲ ಸಾಲ ಎಷ್ಟು ಮಾಡಿದ್ದೀವಿ ಅಂತ ಹೇಳಿಲ್ಲ, ಒಟ್ಟು ಸಾಲ ಹೇಳಿಲ್ಲ ವಿಕಸಿತ ಭಾರತ ಅಂತ ಹೇಳಿ ಎಲ್ಲಾ ಕಡೆ ಪ್ರಚಾರ ಮಾಡ್ತಿದ್ದಾರೆ ಈ ಬಜೆಟ್ ವಿಕಸಿತ ಬಜೆಟ್ ಅಂತಿದ್ದಾರೆ ಈ ಬಜೆಟ್ ವಿನಾಶಕಾರಿ ಭಾರತ ಮಾಡೊ ಬಜೆಟ್
ಬಡವರು, ಮಹಿಳೆಯರು, ಯುವಕರು, ರೈತರ ಮೇಲೆ ನಂಬಿಕೆ ಇಟ್ಟಿದ್ದೀವಿ ಅಂತಾರೆ ಆದ್ರೆ ಅದರಲ್ಲಿ ಅವರ ಆಶಯ ಏನು ಇಲ್ಲ ನಮ್ಮ ಸರ್ಕಾರ ಮಹಿಳೆಯರು, ಯುವಕರು, ರೈತರಿಗೆ ಗ್ಯಾರಂಟಿ ಯೋಜನೆ ಮೂಲಕ ಕೊಟ್ಟಿದ್ದೀವಿ ಅವರು ಏನು ಕೊಟ್ಟಿದ್ದೀವಿ ಅಂತ ಹೇಳೇ ಇಲ್ಲ ನಿರುದ್ಯೋಗ ಕ್ಕೆ ಪರಿಹಾರ ಏನು ಅಂತ ಬಜೆಟ್ ನಲ್ಲಿ ಹೇಳಿಲ್ಲ ಎಂದು ಹೇಳಿದರು.