ಬೆಂಗಳೂರು: ದುಡ್ ಮಾಡೋಕೇನು ಸಾಕಷ್ಟು ದಾರಿಗಳಿವೆ.. ಎಷ್ಟೇ ದಾರಿಗಳಿದ್ರೂ ಕೆಲವರು ದುಡ್ಡು ಮಾಡೋಕೆ ಅಂತಾ ಹಿಡಿಯೋದೆ ಕೆಟ್ ದಾರಿ.. ಹೀಗೆ ಕೆಟ್ಟ ದಾರಿ ಹಿಡಿದಿದ್ದವರನ್ನ ಸಿಸಿಬಿ ಪೊಲೀಸರು ಒಳ ತಳ್ಳಿದ್ದಾರೆ..
ಹೌದು.. ಹಣ ಮಾಡೋಕೆ ಸಾವಿರಾರು ದಾರಿಗಳಿದೆ.. ಸಾವಿರಾರು ದಾರಿಗಳಲ್ಲಿ ಕೆಲವರಿಗೆ ಕನೆಕ್ಟ್ ಆಗೋದು ಒಂದೇ ದಾರಿ ಅನ್ಸುತ್ತೆ.. ಅದೇ ಅಕ್ರಮ ದಾರಿ.. ಆರ್ ಟಿಐ ಕಾರ್ಯಕರ್ತರು ಅನ್ನೋದು ಒಂದು ಜವಬ್ದಾರಿ.. ಭ್ರಷ್ಟಾಚಾರ ಮಾಡೋರನ್ನ ಹುಡುಕಿ ಬುದ್ದಿ ಕಲಿಸೋ ಕೆಲಸ.. ಅದ್ರೆ ಕೆಲವರು ಆರ್ ಟಿಐ ಕಾರ್ಯಕರ್ತರು ಅಂತಾ ಡೀಲ್ ಮಾಡೋಕೆ ಇಳಿದಿದ್ದಾರೆ.. ಹೀಗೆ ರೌಡಿಶೀಟರ್ ಗಳ ಜೊತೆ ಸೇರಿ ಬಿಲ್ಡರ್ ಗಳಿಗೆ ಬೆದರಿಸಿ ಲಕ್ಷ ಲಕ್ಷ ಬೇಡಿಕೆ ಇಟ್ಟಿದ್ದ ನಕಲಿ ಆರ್ ಟಿಐ ಕಾರ್ಯಕರ್ತನ ಬಂಧನವಾಗಿದೆ.. ಬಿಲ್ಡರ್ ಒಬ್ಬರಿಗೆ 85ಲಕ್ಷ ಬೇಡಿಕೆ ಇಟ್ಟಿದ್ದ ನಕಲಿ ಕಾರ್ಯಕರ್ತ ರಾಘವ್ ಗೌಡ ಹಾಗೂ ರೌಡಿಶೀಟರ್ ರಕ್ಷಿತ್ ಎಂಬುವರನ್ನ ಸಿಸಿಬಿ ಅಫರಾಧ ಸಂಘಟಿತ ಘಟಕ ಬಂಧಿಸಿದೆ..
ಈ ಫೋಟೋದಲ್ಲಿದಾನಲ್ಲ ಇವ್ನೇ ನೋಡಿ ರಾಘವ್ ಗೌಡ ಅಂತಾ.. ಹೇಳ್ಕೊಳ್ಳೋಕೆ ಆರ್ ಟಿಐ ಕಾರ್ಯಕರ್ತ.. ಜೈಹಿಂದ್ ಸಂಘಟನೆಯ ಮುಖ್ಯಸ್ಥ ಅಂತಾನೂ ಹೇಳ್ಕೊಂಡು ತಿರುಗಾಡ್ತಿದ್ದ.. ಎಲ್ಲವೂ ಒಕೆ ಆದ್ರೆ ಈ ಹೆಸರುಗಳಲ್ಲಿ ಈತ ಮಾಡ್ತಿದ್ದು ಮಾತ್ರ ಬೆದರಿಕೆ ಹಾಕಿ ದುಡ್ಡು ಮಾಡೋದು ಅನ್ನೋದು ತನಿಖೆ ವೇಳೆ ಗೊತ್ತಾಗಿದೆ.. ರೌಡಿಶೀಟರ್ ಗಳ ಜೊತೆ ಸೇರಿ ಮಾಗಡಿ ರಸ್ತೆ ಠಾಣಾ ವ್ಯಾಪ್ತಿಯಲ್ಲಿರೋ ಬಿಂದು ವೆಂಚರ್ಸ್ ನ ಮಾಲೀಕರಿಗೆ ಬೆದರಿಕೆ ಹಾಕಿದ್ದ.. ಅವರ ಬಿಲ್ಡಿಂಗ್ ನ ಬಳಿ ಹೋಗಿ ಬಿಲ್ಡಿಂಗ್ ಸರಿ ಇಲ್ಲ.. ರೂಲ್ಸ್ ಪ್ರಕಾರ ಕಟ್ಟಿಲ್ಲ.. ಇದ್ನೆಲ್ಲಾ ಬಹಿರಂಗ ಮಾಡ್ತೀವಿ.. ಇಲ್ಲ ಅಂದ್ರೆ 85 ಲಕ್ಷ ಹಣ ಕೊಡು ಬಿಡ್ತೀವಿ ಅಂತಾ ಬೆದರಿಕೆ ಹಾಕಿದ್ನಂತೆ.. ಈ ಸಂಬಂಧ ಬಿಲ್ಡರ್ ನಿಂದ ದೂರು ಪಡೆದಿದ್ದ ಸಿಸಿಬಿ ಸಂಘಟಿತ ಅಫರಾಧ ಘಟಕದ ಅಧಿಕಾರಿಗಳು ಆರ್ ಟಿ ಐ ಕಾರ್ಯಕರ್ತ ರಾಘವ್ ಗೌಡ ಹಾಗೂ ತಾವರೆಕೆರೆ ರೌಡಿಶೀಟರ್ ರಕ್ಷಿತ್ ನನ್ನ ಬಂಧಿಸಿದ್ದಾರೆ..
ಈ ಇಬ್ಬರೂ ಕೂಡ ಶ್ರೀರಾಂಪುರ ರೌಡಿ ಶೀಟರ್ ಅಜಯ್ ಕುಮಾರ್ ಎಂಬಾತನ ಜೊತೆ ಸೇರಿ ನಗರದ ಹಲವೆಡೆ ಇದೇ ರೀತಿ ಕೃತ್ಯ ಎಸಗುತ್ತಿದ್ರು ಅಂತಾ ತನಿಖೆ ವೇಳೆ ಗೊತ್ತಾಗಿದೆ.. ಸದ್ಯ ರೌಡಿಶೀಟರ್ ಅಜಯ್ ಕುಮಾರ್ ನಾಪತ್ತೆಯಾಗಿದ್ದು ಆತನ ಹುಡುಕಾಟಕ್ಕೆ ಸಿಸಿಬಿ ಟೀಂ ಮುಂದಾಗಿದೆ